ಮಂಡ್ಯ: ಇಲ್ಲಿನ ಕೆ.ಆರ್ ಸಾಗರದ ಬೆಳಗೊಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಡಿ.ಜಗದೀಶ್ ಆಯ್ಕೆಯಾಗಿದ್ದಾರೆ.
https://chat.whatsapp.com/FCEnlTkAKCC0MGPhXtX4i4
12 ಸದಸ್ಯರಿರುವ ಬೆಳಗೊಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಐವರು ಸದಸ್ಯರು ಗೈರುಹಾಜರಾಗಿದ್ದರು. ಹಿಂದಿನ ಅಧ್ಯಕ್ಷರು ನೀಡಿದ್ದ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಡಿ.ಜಗದೀಶ್ ಮತ್ತು ಲಕ್ಷ್ಮೀ ನಾಮಪತ್ರ ಸಲ್ಲಿಸಿದ್ದರು. ಮತದಾನಕ್ಕೆ ಲಕ್ಷ್ಮೀ ಸೇರಿದಂತೆ ಐವರು ಗೈರಾಗಿದ್ದ ಕಾರಣ ಡಿ.ಜಗದೀಶ್ ವಿಜೇತರಾದರು. ಬೆಳಗೊಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯನಿರ್ವಹಣಾಧಿಕಾರಿ ಶಿವಕುಮಾರ ಚುನಾವಣಾಧಿಕಾರಿಯಾಗಿದ್ದರು.
ಬೆಳಗೊಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಸಿದ್ದರಾಜು, ಮಾಜಿ ಅಧ್ಯಕ್ಷ ಸುಪ್ರಿಯಾ ರವಿಕುಮಾರ್, ಮಾಜಿ ಅಧ್ಯಕ್ಷ ಬಿ.ವಿ.ಹರೀಶ್, ಸದಸ್ಯ ಪರಶುರಾಮ, ಎಂ.ಎಚ್.ಶ್ರೀನಿವಾಸ್, ಕಿರಣ್, ಗ್ರಾಮದ ಯಜಮಾನರಾದ ಶ್ರೀನಿವಾಸೇಗೌಡ, ಮುಖಂಡರಾದ ರವಿಕುಮಾರ್, ರವಿ, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಮಹದೇವಸ್ವಾಮಿ, ರಜಿನಿ, ದೇವರಾಜು, ಪುನೀತ್ ಮೊದಲಾದವರು ನೂತನ ಅಧ್ಯಕ್ಷ ಡಿ.ಜಗದೀಶ್ ಅವರನ್ನು ಅಭಿನಂದಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com

