ಮಂಗಳೂರು: ನಮ್ಮ ನಮ್ಮ ಪರಿಸರದ ನಿರ್ವಹಣೆ, ಸ್ವಚ್ಛತೆ ಇದು ಕೇವಲ ಸರಕಾರ, ಸರಕಾರಿ ಯಂತ್ರಗಳು ಅಥವಾ ಸಾಮಾಜಿಕ ಸಂಘಟನೆಗಳು ಮಾಡುವ ಕಾರ್ಯವಲ್ಲ. ಇದು ಪ್ರತಿಯೊಬ್ಬ ನಾಗರಿಕನ ಮೂಲಭೂತ ಕರ್ತವ್ಯ. ಸಮಾಜದಲ್ಲಿ ನಾಗರಿಕ ಶಿಷ್ಟಾಚಾರದ ಅರಿವು ಮೂಡಿಸಿ ಜಾಗೃತಗೊಳಿಸಿದಾಗ ಇದು ಸಾಧ್ಯವಾಗುತ್ತದೆ ಎಂದು ಖ್ಯಾತ ಪರಿಸರವಾದಿ ಡಾ. ರಾಧಾಕೃಷ್ಣ ನಾಯರ್ ಹೇಳಿದರು.
https://chat.whatsapp.com/FCEnlTkAKCC0MGPhXtX4i4
ಅವರು ವಿಶ್ವಕರ್ಮ ಸಹಕಾರ ಬ್ಯಾಂಕಿನ ಕಾರ್ ಸ್ಟ್ರೀಟ್ ಶಾಖೆಯ ವತಿಯಿಂದ ಭಾನುವಾರ “ಸ್ವಚ್ಛತಾ ಹೀ ಸೇವಾ” ಧ್ಯೇಯದೊಂದಿಗೆ ನಡೆದ 50ನೇ ಸ್ವಚ್ಛತಾ ಶ್ರಮದಾನದ ಸಮಾರೋಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ಮುಂದುವರಿದು ಮಾತನಾಡಿದ ಅವರು ಇಂತಹ ಸ್ವಚ್ಛತಾ ಕಾರ್ಯಕ್ರಮಗಳು ನಿತ್ಯ ನಿರಂತರವಾದರೆ ಮಾತ್ರ ನಮ್ಮ ಪರಿಸರ ಸುರಕ್ಷಿತವಾಗಿರುತ್ತದೆ, ಮತ್ತು ಈ ನಿಟ್ಟಿನಲ್ಲಿ ಸಮಾಜದಲ್ಲಿ ಸ್ವಚ್ಛತೆಯ ಅರಿವನ್ನು ಮೂಡಿಸುತ್ತಿರುವ ವಿಶ್ವಕರ್ಮ ಸಹಕಾರ ಬ್ಯಾಂಕ್ ನಂತಹ ಆರ್ಥಿಕ ವ್ಯವಹಾರದಿಂದ ಕೂಡಿದ ಸಮಾಜಮುಖಿ ಸಂಸ್ಥೆಗಳ ಪಾತ್ರ ಶ್ಲಾಘನೀಯ. ಸ್ವಚ್ಛತಾ ಶ್ರಮದಾನ ಹಾಗೂ ವನಮೋತ್ಸವ ಕಾರ್ಯಕ್ರಮಗಳಲ್ಲಿ ನಮ್ಮ ಮುಂದಿನ ಪೀಳಿಗೆಯನ್ನು ಭಾಗವಹಿಸುವಂತೆ ನೋಡಿಕೊಳ್ಳುವುದು ಅತ್ಯಂತ ಅಗತ್ಯ ಎಂದು ಅಭಿಪ್ರಾಯ ಪಟ್ಟರು.
ವಿಶ್ವಕರ್ಮ ಸಹಕಾರ ಬ್ಯಾಂಕಿನ ಅಧ್ಯಕ್ಷ ಎಸ್. ಆರ್. ಹರೀಶ್ ಆಚಾರ್ಯ ಮಾತನಾಡಿ ಬ್ಯಾಂಕಿನ ಸ್ವರ್ಣ ಜಯಂತಿಯ ಸುಸಂದರ್ಭದಲ್ಲಿ ಆಯೋಜಿಸುತ್ತಿರುವ ಸ್ವಚ್ಛತೆಯ ಮೂಲಕ ಸಮಾಜ ಜಾಗೃತಿಯನ್ನು ನಿರ್ಮಾಣ ಮಾಡುವ ಉದ್ದೇಶವನ್ನು ಇಟ್ಟುಕೊಂಡು ಈ ಕಾರ್ಯಕ್ರಮವನ್ನು ಮಾಡಲಾಗುತ್ತಿದೆ. ಇದು 50ನೇ ಕಾರ್ಯಕ್ರಮವಾಗುತ್ತಿದ್ದು, ಇದರ ಸಮಾರೋಪದ ಶ್ರಮದಾನ ಸ್ವಚ್ಛತಾ ಕಾರ್ಯಕ್ರಮವನ್ನು ನಮ್ಮ ಬ್ಯಾಂಕಿನ ಮಂಗಳೂರು, ಉಡುಪಿ, ಕಾರ್ಕಳ, ಉಜಿರೆ, ಮೆಲ್ಕಾರ್ ಶಾಖೆಗಳಲ್ಲಿ ಇಂದು ಏಕಕಾಲದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ನಂತರ ಪರಿಸರ ಸಂರಕ್ಷಕ ಡಾ. ರಾಧಾಕೃಷ್ಣ ನಾಯರ್, ಬ್ಯಾಂಕಿನ ಅಧ್ಯಕ್ಷ ಡಾ. ಎಸ್ ಆರ್ ಹರೀಶ್ ಆಚಾರ್ಯ, ವಲಯ ಅರಣ್ಯಾಧಿಕಾರಿ ರಾಜೇಶ್ ಬಳೆಗಾರ್, ರೋಟರಿ ಕ್ಲಬ್ ಮಂಗಳೂರು ಇದರ ಅಧ್ಯಕ್ಷರಾದ ರೋ. ಭಾಸ್ಕರ್ ರೈ ಕಟ್ಟ, ಅವೇಕ್ ಕುಡ್ಲಾ ಪರಿಕಲ್ಪನೆಯ ಉಮಾನಾಥ ಕೋಟೇಕಾರ್ ಗಿಡ ನೆಡುವ ಮೂಲಕ ಶ್ರಮದಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮಂಗಳೂರಿನ ಬಿ ಇ ಎಂ ಶಾಲೆಯ ಆವರಣದಲ್ಲಿ ಪರಿಸರ ದಿನದ ಆಚರಣೆ ಹಾಗೂ ನಂತರ ಕಾರ್ ಸ್ಟ್ರೀಟ್, ಡೊಂಗರೆಕೇರಿ ಸುತ್ತಮುತ್ತಲಿನ ಪರಿಸರಗಳಲ್ಲಿ ಸ್ವಚ್ಛತೆಯ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಶ್ರಮದಾನ ನಡೆಯಿತು.
ಕಾರ್ಯಕ್ರಮದಲ್ಲಿ ಶ್ರೀ ಕಾಳಿಕಾಂಬ ವಿನಾಯಕ ದೇವಸ್ಥಾನದ ಆಡಳಿತ ಅಧಿಕಾರಿ ಉಮೇಶ್ ಆಚಾರ್ಯ, ಕಾರ್ಪೊರೇಟರ್ ಜಯಶ್ರೀ ಕುಡ್ವ, ಜಿಲ್ಲಾ ಚಿನ್ನದ ಕೆಲಸಗಾರರ ಸಂಘದ ಅಧ್ಯಕ್ಷ ಕೆ. ಎಲ್. ಹರೀಶ್, ಗುರುಸೇವಾ ಪರಿಷತ್ತಿನ ಗಣೇಶ್ ಕೆಮ್ಮಣ್ಣು, ವಿಶ್ವಕರ್ಮ ಕಲಾ ಪರಿಷತ್ ಇದರ ಅಧ್ಯಕ್ಷ ಡಾ. ಎಸ್ ಪಿ ಗುರುದಾಸ್, ಶ್ರೀ ಕಾಳಿಕಾಂಬ ಸೇವಾ ಸಮಿತಿ ಇದರ ಅಧ್ಯಕ್ಷ ಜಗದೀಶ್ ಸಿದ್ದಕಟ್ಟೆ, ವಿಶ್ವ ಬ್ರಾಹ್ಮಣ ಮಹಿಳಾ ಸಮಿತಿ ಇದರ ಅಧ್ಯಕ್ಷೆ ಅರುಣಾ ಸುರೇಶ್, ವಿಶ್ವಕರ್ಮ ಸಹಕಾರ ಬ್ಯಾಂಕಿನ ನಿರ್ದೇಶಕರಾದ ಜಯಶ್ರೀ ಆಚಾರ್, ಗುರುಪ್ರಸಾದ್ ಶೆಟ್ಟಿ, ಪ್ರಶಾಂತ್ ಆಚಾರ್ಯ, ವ್ಯವಸ್ಥಾಪಕ ನಿರ್ದೇಶಕರಾದ ವಸಂತ ಅಡ್ಯಂತಾಯ, ಬಿ ಇ ಎಂ ಹೈ ಸ್ಕೂಲ್ ಇದರ ಮುಖ್ಯ ಶಿಕ್ಷಕ ಯಶವಂತ ಮಾಡ, ಬಿ ಇ ಎಂ ಪ್ರೈಮರಿ ಶಾಲೆ ಇದರ ಮುಖ್ಯ ಶಿಕ್ಷಕಿ ವನಿತಾ ಸುರೇಶ್, ಸಂಚಾಲಕ ಪ್ರಕಾಶ್ ಹಲೇಜಿ, ಪ್ರಮುಖರಾದ ಕೆ ಜೆ ಗುರುರಾಜ್ ಮತ್ತಿತರು ಉಪಸ್ಥಿತರಿದ್ದರು. ಈ ಸಂದರ್ಭ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮಗಳಲ್ಲಿ ಸಹಕರಿಸಿದ ಸಂಘ-ಸಂಸ್ಥೆಗಳನ್ನು ಗೌರವಿಸಲಾಯಿತು.
ಅನೇಕ ಸಮಾಜಮುಖಿ ಸಂಘ ಸಂಸ್ಥೆಗಳು, ಬ್ಯಾಂಕಿನ ಗ್ರಾಹಕರು, ಸಿಬ್ಬಂದಿ ವರ್ಗ ಸ್ವಯಂಸೇವಕರಾಗಿ ಸ್ವಚ್ಛ ಭಾರತ್ ಶ್ರಮದಾನ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಬ್ಯಾಂಕಿನ ನಿರ್ದೇಶಕ ಹಾಗೂ ಕಾರ್ಯಕ್ರಮದ ಸಂಚಾಲಕ ಭರತ್ ನಿಡ್ಪಳ್ಳಿ ನಿರೂಪಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com

