ಕಾರ್ಕಳ: ಬೆಳ್ಳಿಹಬ್ಬದ ಸಂಭ್ರಮಾಚರಣೆಯಲ್ಲಿರುವ ಕಾರ್ಕಳದ ಪ್ರತಿಷ್ಠಿತ ಶ್ರೀ ದುರ್ಗಾಪಮೇಶ್ವರಿ ವಿವಿಧೋದ್ಧೇಶ ಸಹಕಾರಿ ಸಂಘವು ಕಳೆದ ಆರ್ಥಿಕ ವರ್ಷದಲ್ಲಿ ರೂ. 52.10ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಸಂತೋಷ್ ರಾವ್ ತಿಳಿಸಿದ್ದಾರೆ.
https://chat.whatsapp.com/FCEnlTkAKCC0MGPhXtX4i4
ಸಂಘವು 2025-26ನೇ ಆರ್ಥಿಕ ಸಾಲಿನಲ್ಲಿ 218.26 ಕೋಟಿ ವ್ಯವಹಾರ ನಡೆಸಿ, ವಾರ್ಷಿಕ ಅಂತ್ಯಕ್ಕೆ 36.69 ಲಕ್ಷ ಪಾಲು ಬಂಡವಾಳ ಹೊಂದಿದೆ. 48.10 ಕೋಟಿ ಠೇವಣಿ ಸಂಗ್ರಹವಾಗಿದ್ದು, 38.48 ಕೋಟಿ ಸಾಲ ವಿತರಿಸಿದ್ದು, 54.09 ಕೋಟಿ ದುಡಿಮೆ ಬಂಡವಾಳ ಹೊಂದಿದೆ. ಬೆಳೆಯುತ್ತಿರುವ ಜೋಡುರಸ್ತೆಯ ಕೇಂದ್ರಭಾಗದಲ್ಲಿ ಸ್ವಂತ ಕಟ್ಟಡದಲ್ಲಿ ಕೇಂದ್ರ ಕಚೇರಿ ಹಾಗೂ ಕೆಳ ಅಂತಸ್ತಿನಲ್ಲಿ ಮುಖ್ಯ ಶಾಖೆಯನ್ನು ಹೊಂದಿರುವ ಶ್ರೀ ದುರ್ಗಾಪರಮೇಶ್ವರಿ ಸಹಕಾರಿ ಸಂಘವು ಹೆಬ್ರಿ, ಮುನಿಯಾಲು, ಬಜಗೋಳಿ, ಬೆಳ್ಮಣ್, ಬೈಲೂರು, ಸಾಣೂರು, ಇನ್ನಾಗಳಲ್ಲಿ ಶಾಖೆಗಳನ್ನು ಹೊಂದಿದ್ದು ಗ್ರಾಹಕರಿಗೆ ಉತ್ತಮ ಸೇವೆ ನೀಡುವುದರ ಮೂಲಕ ಸಹಕಾರಿಗಳ ವಿಶ್ವಾಸಕ್ಕೆ ಪಾತ್ರವಾಗಿ ಲಾಭಾಂಶ ಹಾಗೂ ಠೇವಣಿ ವೃದ್ಧಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಆರ್ಥಿಕ ಪ್ರಗತಿ: 2024-2025ನೇ ಸಾಲಿನಲ್ಲಿ 175.33 ಕೋಟಿ ರೂ. ವಾರ್ಷಿಕ ವಹಿವಾಟು ನಡೆಸಿ, 60.63 ಲಕ್ಷ ರೂ.ನಿವ್ವಳ ಲಾಭ ಗಳಿಸಿತ್ತು. 33.03 ಲಕ್ಷ ರೂ. ಬಂಡವಾಳ ಹೊಂದಿದ್ದು ಒಟ್ಟು 38.45 ಕೋಟಿ ರೂ. ಠೇವಣಿ ಸಂಗ್ರಹಿಸಿದೆ. ಸದಸ್ಯರಿಗೆ ಎಲ್ಲಾ ರೀತಿಯ ಸಾಲ ವಿತರಿಸಿದ್ದು, 31.82 ಕೋಟಿ ರೂ. ಸಾಲ (ಹೊರಬಾಕಿ) ನೀಡಿತ್ತು. 3.18 ಕೋಟಿ ರೂ. ನಿಧಿಗಳು, 5.50 ಕೋಟಿ ರೂ. ಹೂಡಿಕೆಗಳಿದ್ದು, 44.13 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿದೆ.
ಠೇವಣಿಗಳು: ಸಂಘವು 2025-26ರ ಆರ್ಥಿಕ ವರ್ಷದಲ್ಲಿ ಸಂಚಯ ಠೇವಣಿ, ನಿರಖು ಠೇವಣಿ, ಮಾಸಿಕ ಠೇವಣಿ, ಭಾರತ್ ವಿಕಾಸ್ ಪತ್ರ, ಚಾಲ್ತಿ ಠೇವಣಿ, ಹನಿದೈನಿಕ ಠೇವಣಿ, ಪಕ್ವತ ಠೇವಣಿ ಇದ್ದು, ಒಟ್ಟು 48 ಕೋಟಿ ಠೇವಣಿ ಸಂಗ್ರಹಿಸಿದೆ. ವರ್ಷದಿಂದ ವರ್ಷಕ್ಕೆ ಠೇವಣಿ ಸಂಗ್ರಹದಲ್ಲೂ ಗಣನೀಯ ಏರಿಕೆ ಕಂಡಿದೆ. ಇದರೊಂದಿಗೆ ಠೇವಣಿದಾರರಿಗೆ ಉತ್ತಮ ಬಡ್ಡಿಯನ್ನು ಸಂಘವು ನೀಡುತ್ತಾ ಬಂದಿದೆ.
ಸಾಲ ಸೌಲಭ್ಯಗಳು: ಸಂಘವು ಸದಸ್ಯರಿಗೆ ಆಸ್ತಿ ಅಡಮಾನ ಸಾಲ, ಚಿನ್ನಾಭರಣ ಸಾಲ, ಇತರ ಉದ್ದೇಶ ಸಾಲ, ವಾಹನ ಸಾಲ, ತುರ್ತು ಸಾಲ, ಭದ್ರತಾ ಸಾಲ, ಠೇವಣಾತಿ ಸಾಲ, ಹನಿ ದೈನಿಕ ಸಾಲ, ಓವರ್ ಡ್ರಾಫ್ಟ್ ಸಾಲ, ಜಾಮೀನು ಸಾಲ, ಮನೆ ಸಾಲ, ಗ್ರೂಪ್ ಸಾಲಗಳ ಮೂಲಕ ಸಂಘದ ಸದಸ್ಯರಿಗೆ ಆರ್ಥಿಕ ಪ್ರೋತ್ಸಾಹ ನೀಡುತ್ತ ಬಂದಿದ್ದು ರೂ. 38 ಕೋಟಿ ಸಾಲ ನೀಡಿದೆ.

ಸಾಮಾಜಿಕ ಸೇವೆ: ಕಳೆದ ಆರ್ಥಿಕ ವರ್ಷದಲ್ಲಿ ಸುಮಾರು 3.50 ಲಕ್ಷದಷ್ಟು ದೇಣಿಗೆ ನೀಡುವುದರ ಮೂಲಕ ಸಾಮಾಜಿಕ ಚಟುವಟಿಕೆಯಲ್ಲೂ ತನ್ನ ಛಾಪು ಮೂಡಿಸಿದೆ. ಕಾರ್ಕಳ ಸರಕಾರಿ ಆಸ್ಪತ್ರೆಗೆ ಆಮ್ಲಜನಕ ಘಟಕಕ್ಕೆ ದೇಣಿಗೆ ಹಾಗೂ ರೆಫ್ರಿಜರೇಟರ್ ಕೊಡುಗೆ, ಚೇತನ ವಿಶೇಷ ಶಾಲೆಗೆ ರೆಫ್ರಿಜರೇಟರ್ ಹಸ್ತಾಂತರ, ದಾಖಲೆ ಸಂಖ್ಯೆಯಲ್ಲಿ ರಕ್ತದಾನ ಶಿಬಿರ, ಸುರಕ್ಷಾ ಸೇವಾ ಆಶ್ರಮಕ್ಕೆ ದಿನಸಿ ಸಾಮಗ್ರಿಗಳ ಪೂರೈಕೆ ಹಾಗೂ ಊಟದ ಬಟ್ಟಲು ಕೊಡುಗೆ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಸ್ರಿ ಬೈಲೂರು ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೈಲೂರು ಮೈನ್ ಇಲ್ಲಿಯ ಮಕ್ಕಳಿಗೆ ನೋಟ್ ಪುಸ್ತಕ ವಿತರಣೆ, ಸಾಣೂರು ಪ್ರೌಢಶಾಲೆಗೆ ಗುರುತಿನ ಚೀಟಿ ವಿತರಣೆ ಮೂಲಕ ಶೈಕ್ಷಣಿಕ ಕ್ಷೇತ್ರಕ್ಕೂ ತಮ್ಮ ಕೊಡುಗೆ ನೀಡಿದೆ. ಕಾರ್ಕಳ ತಾಲೂಕಿನಾದ್ಯಂತ ದೇವಸ್ಥಾನಗಳ ದೈವಸ್ಥಾನಗಳ ಜೀರ್ಣೋದ್ಧಾರಕ್ಕೆ ಸಂಘದ ವತಿಯಿಂದ ದೇಣಿಗೆ ನೀಡುತ್ತ ತನ್ನಿಂದಾದ ಸೇವೆ ನೀಡುತ್ತ ಬಂದಿದೆ.
ಪ್ರಸಕ್ತ ಸಾಲಿನಲ್ಲಿ ಶ್ರೀ ದುರ್ಗಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಜೋಡುರಸ್ತೆ ಇಲ್ಲಿಯ ಮಕ್ಕಳಿಗೆ ಬ್ಯಾಗ್, ಅಯ್ಯಪ್ಪನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಹಾಗೂ ಕುಕ್ಕುಂದೂರು ಶ್ರೀ ದುರ್ಗಾದೇವಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ವಿತರಣೆ ಮಾಡಲಾಗುವುದು ಎಂದು ಸಂತೋಷ್ ರಾವ್ ತಿಳಿಸಿದ್ದಾರೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com




