Close Menu
    Top News

    ಚೆಕ್‌ ಬೌನ್ಸ್‌ ಪ್ರಕರಣಕ್ಕೆ ಸೀಲು, ಸಹಿ ಕಡ್ಡಾಯವಲ್ಲ; ಕಂಪ್ಯೂಟರ್ ಆಧರಿತ ಮೆಮೊ ಕೂಡ ಸಾಕ್ಷಿಯಾಗಿ ಮಾನ್ಯ: ಹೈಕೋರ್ಟ್ ಮಹತ್ವದ ತೀರ್ಪು

    April 22, 2026

    ಊರಿನ ಸ್ವಚ್ಛತೆಗಾಗಿ ವಿಶ್ವಕರ್ಮ ಬ್ಯಾಂಕ್‌ನ ಕೆಲಸ ಶ್ಲಾಘನೀಯ

    April 22, 2026

    ಏಪ್ರಿಲ್‌ 26ರಂದು ಶ್ರೀಶಾ ಸೊಸೈಟಿ ಪ್ರಾಯೋಜಕತ್ವದಲ್ಲಿ ಹರಿದಾಸರ ಕೃತಿ ಕೀರ್ತನೆಗಳ ಗಾಯನ

    April 22, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಸಹಕಾರಿ ಸಂಘಗಳು ಸಮಾಜಮುಖಿಯಾಗಿ ಬೆಳವಣಿಗೆ
    News

    ಸಹಕಾರಿ ಸಂಘಗಳು ಸಮಾಜಮುಖಿಯಾಗಿ ಬೆಳವಣಿಗೆ

    adminBy adminApril 9, 2026

    ಎಸ್.ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಸೊಸೈಟಿಯ ನವೀಕೃತ ಬೆಳ್ಳಂಪಳ್ಳಿ ಶಾಖೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಕಾಳಹಸ್ತೇoದ್ರ ಸ್ವಾಮೀಜಿ ಆಶೀರ್ವಚನ

    ಉಡುಪಿ: ಸಹಕಾರಿ ಸಂಘಗಳು ಸವಾಜಮುಖಿಯಾಗಿ ಬೆಳವಣಿಗೆ ಹೊಂದಬೇಕು. ಆ ಕೆಲಸವನ್ನು ಎಸ್.ಕೆ. ಗೋಲ್ಡ್ ಸ್ಮಿತ್ಸ್ ಸೊಸೈಟಿ ಮಾಡುತ್ತಿದೆ. ಸವಾಜದ ಜೊತೆಗೆ ಬೆರೆತುಕೊಂಡು ನಮ್ಮ ಸಂಸ್ಥೆ ಎನ್ನುವ ಭಾವನೆ ಜನರಲ್ಲಿ ಮೂಡಿಸಿದೆ ಎಂದು ಆನೆಗುಂದಿ ಮಹಾಸಂಸ್ಥಾನದ ಜಗದ್ಗುರು ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿ ಹೇಳಿದರು.

    https://chat.whatsapp.com/FCEnlTkAKCC0MGPhXtX4i4
    ಬುಧವಾರ ಎಸ್.ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿಯ ಹವಾನಿಯಂತ್ರಿತ ನವೀಕತ ಬೆಳ್ಳಂಪಳ್ಳಿ ಶಾಖೆ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
    ಜಗದ್ಗುರು ಅನಂತ ಶ್ರೀ ವಿಭೂಷಿತ ಶಿವಸುಜ್ಞಾನ ತೀರ್ಥ ಮಹಾಸ್ವಾಮೀಜಿ ಆಶೀರ್ವಚನ ನೀಡಿ, ಎಸ್ ಕೆ ಗೋಲ್ಡ್ ಸ್ಮಿತ್ಸ್ ಸೊಸೈಟಿಯು ಸಾರ್ವಜನಿಕ ರಂಗಕ್ಕೆ ಅತ್ಯದ್ಬುತವಾದ ಸೇವೆಯನ್ನು ನೀಡಿದೆ. ಆಡಳಿತ ಮಂಡಳಿ, ಸಿಬ್ಬಂದಿ, ಗ್ರಾಹಕರು ಎಲ್ಲರೂ ಸೇರಿ ಈ ಸಂಸ್ಥೆಯನ್ನು ಬೆಳೆಸಿದ್ದಾರೆ. ಎಲ್ಲರ ಸಂಯೋಜನೆಯ ಪ್ರತಿಫಲವೇ ಸಂಸ್ಥೆಯ ಸಾಧನೆಗೆ ಕಾರಣವಾಗಿದೆ. ಈ ಸಂಸ್ಥೆ ಹಲವಾರು ವಷರ್ಗಳಿಂದ ಸಾಮಾಜಿಕ ರಂಗಕ್ಕೂ, ಧಾರ್ಮಿಕ ರಂಗಕ್ಕೂ ಸೇವೆ ನೀಡುತ್ತ ಬಂದಿದೆ. ಇನ್ನಷ್ಟು ಬಹುಮುಖಿ ಕೆಲಸಗಳಿಗೆ ಈ ಶಾಖೆ ಪ್ರೇರಣೆ ನೀಡಲಿ ಎಂದರು.


    ಸೊಸೈಟಿಯ ಅಧ್ಯಕ್ಷ ಪಿ. ಉಪೇಂದ್ರ ಆಚಾರ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಸ್ಥೆ ಒಟ್ಟು 18 ಶಾಖೆಗಳನ್ನು ಹೊಂದಿದ್ದು, ಈ ವರ್ಷ ಮೂರು ಹೊಸ ಶಾಖೆಗಳನ್ನು ತೆರೆಯುವ ಯೋಜನೆ ಇದೆ. ಮುಂದಿನ ದಿನಗಳಲ್ಲಿ ಸಮಾಜಮುಖಿಯಾಗಿ ಇನ್ನಷ್ಟು ತೊಡಗಿಸಿಕೊಳ್ಳಲಾಗುವುದು. ಠೇವಣಿಯಲ್ಲಿ ಶೇ.25 ವೃದ್ಧಿಯಾಗಿದೆ. ಒಂದೇ ವಷರ್ದಲ್ಲಿ 64 ಕೋಟಿ ಠೇವಣಿ ಸಂಗ್ರಹವಾಗಿದೆ. ಲಾಭದಲ್ಲಿ ಶೇ.33ರಷ್ಟು ವೃದ್ಧಿಯಾಗಿದೆ. ಕಳೆದ ಆರ್ಥಿಕ ವರ್ಷದಲ್ಲಿ 8 .6 ಕೋಟಿ ಲಾಭ ಪಡೆದಿದೆ. ಸಾಲದಲ್ಲಿ ಶೇ. 25 ವೃದ್ಧಿಯಾಗಿದೆ ಎಂದು ಹೇಳಿದರು.
    ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ ಮುಖ್ಯ ಅತಿಥಿಯಾಗಿದ್ದರು. ರೈತ ಸಹಕಾರಿ ಸಂಘದ ಅಧ್ಯಕ್ಷ ಬಿ. ಅಶೋಕ್ ಕುಮಾರ್ ಶೆಟ್ಟಿ, ನಿವತ್ತ ಮುಖ್ಯ ಶಿಕ್ಷಕರಾದ ಸೀತಾರಾಮ ಶೆಟ್ಟಿಗಾರ್, ವಿಶ್ವಕರ್ಮ ಸಮಾಜೋದ್ಧಾರಕ ಸಂಘದ ಅಧ್ಯಕ್ಷ ಅಚ್ಚುತ ಆಚಾರ್ಯ, ಕಟ್ಟಡ ಮಾಲಕ ಪ್ರಸನ್ನ ಪ್ರಭು ಉಪಸ್ಥಿತರಿದ್ದರು.
    ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಮಂಜಯ್ಯ ಆಚಾರ್ಯ, ರಾಮು ಆಚಾರ್ಯ, ಸುಧಾಕರ ಸೇರಿಗಾರ್, ರತ್ನಾಕರ್ ಶೆಟ್ಟಿ, ಅಪ್ರಾಯ ಪ್ರಭು, ಗೋವಿಂದರಾಜ ಹೆಗ್ಡೆ ಇವರನ್ನು ಸನ್ಮಾನಿಸಲಾಯಿತು. ಗಣೇಶ್ ಆಚಾರ್ಯ ಮತ್ತು ಪ್ರಸಾದ್ ಆಚಾರ್ಯ ಪೆರ್ಡೂರು ಇವರನ್ನು ಗೌರವಿಸಲಾಯಿತು. ರವೀಂದ್ರ ಆಚಾರ್ಯ ಪೆರ್ಡೂರು ಇವರಿಗೆ 10000 ರೂ. ಆರೋಗ್ಯ ನಿಧಿ ನೀಡಲಾಯಿತು.
    ಸಂಸ್ಥೆಯ ನಿರ್ದೇಶಕರಾದ ಕೆ.ಯಜ್ಞೇಶ್ವರ ಆಚಾರ್ಯ, ವೈ.ವಿ ವಿಶ್ವಜ್ಞಮೂರ್ತಿ, ವಿ. ಜಯ ಆಚಾರ್ಯ, ಕೆ ಶಶಿಕಾಂತ್ ಆಚಾರ್ಯ, ಮಲ್ಲಪ್ಪ ಎನ್. ಪತ್ತಾರ್, ರೋಹಿಣಿ ಎಂ.ಪಿ., ಶ್ರೀಮತಿ ಜ್ಯೋತಿ ಎಂ.ವಿ., ರಮೇಶ್ ರಾವ್ ಯು., ಕೆ. ಪ್ರಕಾಶ್ ಆಚಾರ್ಯ, ಮಂಜುನಾಥ್ ಆಚಾರ್ಯ, ಚಂದ್ರಶೇಖರ್ ಎ. ಎಸ್. ಉಪಸಿತರಿದ್ದರು. ಸಂಘದ ಉಪಾಧ್ಯಕ್ಷ ಎ.ಆನಂದ ಆಚಾರ್ಯ ಸ್ವಾಗತಿಸಿದರು. ಪ್ರಧಾನ ವ್ಯವಸ್ಥಾಪಕ ಯಜ್ಞೇಶ್ವರ ಪ್ರಾಸ್ತಾವಿಕ ವಾತುಗಳನ್ನಾಡಿದರು. ಬೆಳ್ಳಂಪಳ್ಳಿ ಶಾಖಾ ಪ್ರಭಾರ ವ್ಯವಸ್ಥಾಪಕ ಮೋಹನದಾಸ್ ಆಚಾರ್ಯ ಟಿ.ಬಿ. ವಂದಿಸಿದರು. ಉಡುಪಿ ಶಾಖೆಯ ಶ್ರೀಕಾಂತ್ ಹಾಗೂ ಮಂಗಳೂರು ಶಾಖಾ ಲೆಕ್ಕಾಧಿಕಾರಿ ಉಷಾ ಮನೋಜ್ ಕಾರ್ಯಕ್ರಮ ನಿರೂಪಿಸಿದರು.

    ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
    EMAIL: sahakaraspandana@gmail.com

    Anegundi Kalahastendra Swameeji Bellampalli Cooperative Cooperative Department Cooperative Registrar Shree Shivasujnana Swameeji SK Goldsmiths Industrial Co Operative Society Upendra Acharya Yajneshwara
    Previous Articleಬಂಟ್ವಾಳ ಕಥೋಲಿಕ್ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿಗೆ ರೂ.3.40 ಕೋಟಿ ನಿವ್ವಳ ಲಾಭ
    Next Article ಎಸ್.ಕೆ.ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ ಆಪರೇಟಿವ್ ಸೊಸೈಟಿಯ ಉಚಿತ ಅಪಘಾತ ವಿಮೆ ಸೌಲಭ್ಯ ವಿತರಣೆ

    Related Posts

    ಚೆಕ್‌ ಬೌನ್ಸ್‌ ಪ್ರಕರಣಕ್ಕೆ ಸೀಲು, ಸಹಿ ಕಡ್ಡಾಯವಲ್ಲ; ಕಂಪ್ಯೂಟರ್ ಆಧರಿತ ಮೆಮೊ ಕೂಡ ಸಾಕ್ಷಿಯಾಗಿ ಮಾನ್ಯ: ಹೈಕೋರ್ಟ್ ಮಹತ್ವದ ತೀರ್ಪು

    April 22, 2026

    ಊರಿನ ಸ್ವಚ್ಛತೆಗಾಗಿ ವಿಶ್ವಕರ್ಮ ಬ್ಯಾಂಕ್‌ನ ಕೆಲಸ ಶ್ಲಾಘನೀಯ

    April 22, 2026

    ಏಪ್ರಿಲ್‌ 26ರಂದು ಶ್ರೀಶಾ ಸೊಸೈಟಿ ಪ್ರಾಯೋಜಕತ್ವದಲ್ಲಿ ಹರಿದಾಸರ ಕೃತಿ ಕೀರ್ತನೆಗಳ ಗಾಯನ

    April 22, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    ಚೆಕ್‌ ಬೌನ್ಸ್‌ ಪ್ರಕರಣಕ್ಕೆ ಸೀಲು, ಸಹಿ ಕಡ್ಡಾಯವಲ್ಲ; ಕಂಪ್ಯೂಟರ್ ಆಧರಿತ ಮೆಮೊ ಕೂಡ ಸಾಕ್ಷಿಯಾಗಿ ಮಾನ್ಯ: ಹೈಕೋರ್ಟ್ ಮಹತ್ವದ ತೀರ್ಪು

    April 22, 2026

    ಊರಿನ ಸ್ವಚ್ಛತೆಗಾಗಿ ವಿಶ್ವಕರ್ಮ ಬ್ಯಾಂಕ್‌ನ ಕೆಲಸ ಶ್ಲಾಘನೀಯ

    April 22, 2026

    ಏಪ್ರಿಲ್‌ 26ರಂದು ಶ್ರೀಶಾ ಸೊಸೈಟಿ ಪ್ರಾಯೋಜಕತ್ವದಲ್ಲಿ ಹರಿದಾಸರ ಕೃತಿ ಕೀರ್ತನೆಗಳ ಗಾಯನ

    April 22, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.