ಕೇಂದ್ರ ಹಣಕಾಸು ಸಚಿವರಿಗೆ ಕರ್ನಾಟಕದ ಪಟ್ಟಣ ಸಹಕಾರಿ ಬ್ಯಾಂಕುಗಳ ಮನವಿ
ಬೆಂಗಳೂರು: 2025ರ ಆದಾಯ ತೆರಿಗೆ ಕಾಯ್ದೆಯ ಅಡಿಯಲ್ಲಿ ಸಹಕಾರಿ ಸಂಘಗಳಿಗೆ ರಿಯಾಯಿತಿಯ ತೆರಿಗೆ ಚೌಕಟ್ಟನ್ನು ತರ್ಕಬದ್ಧಗೊಳಿಸುವಂತೆ ಕೋರಿ ಹಲವಾರು ಪಟ್ಟಣ ಸಹಕಾರಿ ಬ್ಯಾಂಕುಗಳು (ಯುಸಿಬಿ) ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದಿದ್ದು, ಶೇ.22ರ ತೆರಿಗೆ ದರವನ್ನು ಶೇ.18ಕ್ಕೆ ಇಳಿಸುವಂತೆ ಮನವಿ ಮಾಡಿದೆ.
https://chat.whatsapp.com/FCEnlTkAKCC0MGPhXtX4i4
ಕಾರ್ಪೊರೇಟ್ ಬ್ಯಾಂಕುಗಳೊಂದಿಗೆ ಸ್ಪರ್ಧಾತ್ಮಕ ಸಮಾನತೆ ಹೊಂದಲು ಮತ್ತು ಸಹಕಾರಿ ಬ್ಯಾಂಕಿಂಗ್ ಪರಿಸರ ವ್ಯವಸ್ಥೆಯ ದೀರ್ಘಕಾಲದ ಸ್ಥಿರತೆ ಕಾಯ್ದುಕೊಳ್ಳಲು ಕರ್ನಾಟಕದ ನಗರ ಸಹಕಾರಿ ಬ್ಯಾಂಕಿಂಗ್ ವಲಯವು ತೆರಿಗೆ ಪ್ರಮಾಣವನ್ನು ಕಡಿಮೆ ಮಾಡಲು ಕೋರಿದೆ. ತೆರಿಗೆ ವಿನಾಯಿತಿಯ ವಿಷಯದಲ್ಲಿ ಪಟ್ಟಣ ಸಹಕಾರಿ ಸಂಘಗಳು ಕೆಲವು ಷರತ್ತುಗಳಿಗೆ ಒಳಪಟ್ಟು ರಿಯಾಯಿತಿ ತೆರಿಗೆ ಆಡಳಿತವನ್ನು ಆಯ್ಕೆ ಮಾಡಲು ಅನುವು ಮಾಡಿಕೊಡುತ್ತದೆ. ತೆರಿಗೆ ರಿಯಾಯಿತಿಯನ್ನು ಮುಂದುವರಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಪಟ್ಟಣ ಸಹಕಾರಿ ಬ್ಯಾಂಕುಗಳು ಸ್ವಾಗತಿಸಿದರೂ, ಸಹಕಾರಿ ಬ್ಯಾಂಕುಗಳ ಮೇಲಿನ ಪರಿಣಾಮಕಾರಿ ತೆರಿಗೆ ಹೊರೆ ಗಮನಾರ್ಹವಾಗಿ ಹೆಚ್ಚಾಗಿದೆ ಎಂದು ಕೇಂದ್ರ ಸಚಿವರ ಗಮನಕ್ಕೆ ತಂದಿದ್ದಾರೆ.
ಸಹಕಾರಿ ಸಂಸ್ಥೆಗಳಿಗೆ ರಿಯಾಯಿತಿ ಮೂಲ ತೆರಿಗೆ ದರವನ್ನು ಪ್ರಸ್ತುತ 22%ರಿಂದ 18% ಅಥವಾ ಅದಕ್ಕಿಂತ ಕಡಿಮೆ ಮಾಡಲು ಬ್ಯಾಂಕುಗಳು ಕೇಂದ್ರ ಸರ್ಕಾರವನ್ನು ಒತ್ತಾಯಿಸಿವೆ. ಅಂತಹ ಕ್ರಮವು ಹೆಚ್ಚಿನ ಆಂತರಿಕ ಬಂಡವಾಳ ಉತ್ಪಾದನೆಗೆ ಅನುವು ಮಾಡಿಕೊಡುತ್ತದೆ, ಬಂಡವಾಳ ಸಮರ್ಪಕವಾಗಿ ಹರಿದುಬರಲು ಕಾರಣವಾಗಿ, ಸೀಮಿತ ಬಂಡವಾಳಗಳೊಂದಿಗೆ ಕಾರ್ಯನಿರ್ವಹಿಸುವ ಸಣ್ಣ ಮತ್ತು ಮಧ್ಯಮ ಗಾತ್ರದ ನಗರ ಸಹಕಾರಿ ಬ್ಯಾಂಕುಗಳಿಗೆ ಅಗತ್ಯವಾದ ಆರ್ಥಿಕ ಸ್ಥಿರತೆಯನ್ನು ಒದಗಿಸುತ್ತದೆ ತಮ್ಮ ಪತ್ರದಲ್ಲಿ ಗಮನ ಸೆಳೆದಿವೆ. ರಿಯಾಯಿತಿ ದರದ ಅಡಿಯಲ್ಲಿಸರ್‌ಚಾರ್ಜ್ ದರಗಳನ್ನೂ ತರ್ಕಬದ್ಧಗೊಳಿಸುವಂತೆ ಬ್ಯಾಂಕುಗಳು ವಿನಂತಿಸಿವೆ. ಪ್ರಸ್ತುತ ಸರ್‌ಚಾರ್ಜ್ ದರವು ಸಹಕಾರಿ ಸಂಘಗಳು ಮತ್ತು ಅನುಕೂಲಕರ ತೆರಿಗೆ ಪರಿಸ್ಥಿತಿಗಳಲ್ಲಿ ಕಾರ್ಯನಿರ್ವಹಿಸುವ ಸಣ್ಣ ಕಾರ್ಪೊರೇಟ್ ಸಂಸ್ಥೆಗಳ ಮಧ್ಯೆ ಅಸಮಾನತೆಯನ್ನು ಸೃಷ್ಟಿಸುತ್ತದೆ ಎಂದು ಗಮನ ಸೆಳೆದಿದ್ದಾರೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

