ಪುತ್ತೂರು: ಇಲ್ಲಿನ ಕುಲಾಲ ಸಹಕಾರ ಭವನದಲ್ಲಿ ಪ್ರಧಾನ ಕಚೇರಿ ಹೊಂದಿರುವ ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ಉಪ್ಪಿನಂಗಡಿ ಶಾಖೆಯ ಸ್ಥಳಾಂತರ ಹಾಗೂ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿವೇತನ ವಿತರಣೆ ಸಮಾರಂಭವು ಮಾರ್ಚ್ 1ರಂದು ಬೆಳಗ್ಗೆ 10.30ಕ್ಕೆ ಉಪ್ಪಿನಂಗಡಿ ಮುಖ್ಯ ರಸ್ತೆಯ ಗಾಂಧಿ ಪಾರ್ಕ್ ಬಳಿಯ ರಾಮ್ ಗೋಪಾಲ್ ಕಾಂಪ್ಲೆಕ್ಸ್ ನಲ್ಲಿ ಆಯೋಜಿಸಲಾಗಿದೆ.
https://chat.whatsapp.com/FCEnlTkAKCC0MGPhXtX4i4
ಶಾಖೆಯ ಕಟ್ಟಡದ ಕೊಠಡಿಯನ್ನು ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟಿಸಲಿದ್ದಾರೆ. ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘ ನಿಯಮಿತದ ಅಧ್ಯಕ್ಷರು, ವಕೀಲರಾದ ಭಾಸ್ಕರ ಎಂ. ಪೆರುವಾಯಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ದಕ್ಷಿಣ ಕನ್ನಡ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಅಧ್ಯಕ್ಷರಾದ ಮಯೂರ್ ಉಳ್ಳಾಲ್, ಪುತ್ತೂರಿನ ವಕೀಲ ಬಿ.ನರಸಿಂಹ ಪ್ರಸಾದ್, ಸಹಕಾರ ಅಭಿವೃದ್ಧಿ ಅಧಿಕಾರಿ ಶೋಭಾ ಎನ್. ಎಸ್., ಕೊಂಬೆಟ್ಟು ಸರಕಾರಿ ಪದವಿಪೂರ್ವ ಕಾಲೇಜಿನ ಉಪಪ್ರಾಂಶುಪಾಲರಾದ ವಸಂತ ಮೂಲ್ಯ ಪಿ., ಉಪ್ಪಿನಂಗಡಿ ಶಾಲಿವಾಹನ ಫ್ಯುಯೆಲ್ಸ್, ಮಾಲೀಕರಾದ ಚಂದ್ರಶೇಖರ ತಾಳ್ತಾಜೆ, ಬಿ.ಸಿ.ರೋಡಿನ ವಕೀಲ ಉಮಾಕರ ಬಂಗೇರ, ಸಿದ್ದಕಟ್ಟೆ ಜನೌಷಧಿ ಕೇಂದ್ರ ಮಾಲೀಕರಾದ ಮನೋಜ್ ಕುಲಾಲ್ ಸಿದ್ದಕಟ್ಟೆ, ವರ್ಕಾಡಿ ಪಂಚಾಯತ್ ಸದಸ್ಯರಾದ ಗೋಪಾಲಕೃಷ್ಣ ಪಜ್ವ, ಉದ್ಯಮಿ ಕೆ.ರಾಜೇಶ್ ನಾಯಕ್ ಭಾಗವಹಿಸಲಿದ್ದಾರೆ.
ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘ ನಿಯಮಿತದ ಉಪಾಧ್ಯಕ್ಷರಾದ ದಾಮೋದರ ಕುಲಾಲ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಜನಾರ್ದನ ಮೂಲ್ಯ, ಶಾಖಾ ವ್ಯವಸ್ಥಾಪಕರಾದ ಭವಾನಿ ಎ., ಸಂಘದ ನಿರ್ದೇಶಕರಾದ ಬಿ.ಎಸ್. ಕುಲಾಲ್, ಗಣೇಶ್ ಪಿ., ಪದ್ಮಕುಮಾರ್ ಎಚ್, ಪೂವಪ್ಪ ಕಡಂಬಾರು, ಸೇಸಪ್ಪ ಕುಲಾಲ್, ಪ್ರಶಾಂತ್ ಬಂಜನ್, ನಾಗೇಶ್ ಕುಲಾಲ್, ರೇಖಾ ದಿನೇಶ್, ರಂಜಿತ ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಲಿದ್ದಾರೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

