ಅರೆಕಾನಟ್ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಎಸ್ ಆರ್ ಸತೀಶ್ಚಂದ್ರ ಹೇಳಿಕೆ
ಮಂಗಳೂರು: ಅಡಕೆಯ ಕುರಿತು ರಚನಾತ್ಮಕ ಸಂಶೋಧನೆಗಳು ನಡೆಯಬೇಕು. ಅಡಕೆ ಬೆಳೆಯ ಕುರಿತು ನಡೆಯುವ ಯಾವುದೇ ರಚನಾತ್ಮಕ, ವೈಜ್ಞಾನಿಕ ಸಂಶೋಧನೆಗಳು ನಡೆದರೆ ಅದಕ್ಕೆ ಕ್ಯಾಂಪ್ಕೊ ಸಂಸ್ಥೆಯು ಬೆಂಬಲವಾಗಿ ನಿಲ್ಲಲಿದೆ. ಪ್ರಸ್ತುತ ಬಿಡುಗಡೆ ಆಗಿರುವ ಪುಸ್ತಕ ಅಡಕೆ ಕುರಿತು ಯಾವುದೇ ಮಾಹಿತಿ ಒದಗಿಸಲು ಮುಂದಿನ ಜನಾಂಗಕ್ಕೆ ಉಪಯುಕ್ತ ಮಾಹಿತಿ ನೀಡಲು ಸಹಾಯವಾಗಲಿದೆ ಎಂದು ಕ್ಯಾಂಪ್ಕೊ ಅಧ್ಯಕ್ಷ ಎಸ್ ಆರ್ ಸತೀಶ್ಚಂದ್ರ ಅಭಿಪ್ರಾಯಪಟ್ಟರು.
https://chat.whatsapp.com/FCEnlTkAKCC0MGPhXtX4i4
ಕ್ಯಾಂಪ್ಕೊ ಪ್ರಧಾನ ಕಚೇರಿಯಲ್ಲಿ ಬುಧವಾರ ಡಾ.ಪ್ರಸನ್ನ ಬೇಲೂರು ಬರೆದು, ಸೆಂಟ್ರಲ್ ಅಡಕೆ ಮತ್ತು ಕೋಕೋ ಮಾರ್ಕೆಟಿಂಗ್ ಆಂಡ್ ಪ್ರೊಸೆಸಿಂಗ್ ಕೋಆಪರೇಟಿವ್ ಲಿಮಿಟೆಡ್ (CAMPCO), ವೈಟ್ ಫಾಲ್ಕನ್ ಪಬ್ಲಿಷಿಂಗ್ ಪುಕಟಿಸಿದ ‘ಅರೆಕಾ ನಟ್ – ಹಿಸ್ಟರಿ ಕನ್ ಸ್ಟಿಟ್ಯುಯೆಂಟ್ಸ್, ಕ್ಯಾನ್ಸರ್ & ಬಿಯಾಂಡ್’ ಪುಸ್ತಕ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದಕ್ಷಿಣ ಕನ್ನಡ ಜಿಲ್ಲೆಯ ಸಮಗ್ರ ಬೆಳವಣಿಗೆಯಲ್ಲಿ ಅಡಕೆ ಬೆಳೆಯ ಸಿಂಹಪಾಲು ಇದೆ. ದೇಶದ ಅತೀ ಶ್ರೀಮಂತ ಜಿಲ್ಲೆಗಳ ಪೈಕಿ ದಕ್ಷಿಣ ಕನ್ನಡ ಎಂಟನೇ ಸ್ಥಾನದಲ್ಲಿದೆ ಎಂದು ಪತ್ರಿಕೆಯೊಂದು ನಡೆಸಿದ ಸಂಶೋಧನೆ ತಿಳಿಸುತ್ತದೆ. ಜಿಲ್ಲೆಗೆ ಈ ಸ್ಥಾನ ಲಭಿಸಲು ಅಡಕೆ ಬೆಳೆಯೂ ಪ್ರಮುಖ ಕಾರಣ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಸಂಶೋಧಕ ವಿಘ್ನೇಶ್ವರ ವರ್ಮುಡಿ ಮಾತನಾಡಿ, ಈ ಪುಸ್ತಕವು ಅಡಕೆ ಬಗ್ಗೆ ಉಪಯುಕ್ತ ಮಾಹಿತಿಯನ್ನು ಹೊಂದಿದೆ. ಸ್ವತಃ ಅಡಕೆ ಬೆಳೆಗಾರರಾಗಿ, ಬಳಕೆದಾರರಾಗಿ ಪ್ರಸನ್ನ ಬೇಲೂರು ಅವರು ಈ ಪುಸ್ತಕ ಬರೆದಿದ್ದು ಮಾಹಿತಿ ಪೂರ್ಣವಾಗಿದೆ. ಪುಸ್ತಕದಲ್ಲಿ ಅಡಕೆ ಕುರಿತ ಇತಿಹಾಸವಿದೆ. ಉಪಯೋಗಗಳ ಮಾಹಿತಿ ಇದೆ. ಕ್ಯಾನ್ಸರ್ ಕಾರಕವೋ ಅಲ್ಲವೋ ಎಂಬ ವಿಶ್ಲೇಷಣೆ ಇದೆ. ಇದರಲ್ಲಿನ ವಿಷಯಕ್ಕೆ ಇನ್ನಷ್ಟು ಅಧ್ಯಯನಗಳು ಸೇರಬೇಕಿದೆ ಎಂದರು.
ಕರ್ನಾಟಕದ 28 ಜಿಲ್ಲೆಗಳಲ್ಲಿ ಅಡಕೆ ಬೆಳೆಯುತ್ತಾರೆ. ಒಂದೊಮ್ಮೆ ಸರ್ಕಾರ ಅಡಕೆಗೆ ಸಹಕಾರ ನೀಡದಿದ್ದರೆ 28 ಲೋಕಸಭಾ ಸದಸ್ಯರನ್ನು ಕಳೆದುಕೊಳ್ಳಬೇಕಾಗುತ್ತದೆ ಎಂಬ ಭಾವನೆ ಬರಬೇಕು ಎಂದು ಹೇಳಿದರು.



ಸರ್ಕಾರಕ್ಕೆ ಅಡಕೆ ಬೆಳೆಯಿಂದ ಆದಾಯ, ಉದ್ಯೋಗ ಲಭಿಸುತ್ತದೆ. ಅಡಕೆಯಿಂದ ಗ್ರಾಮ ಮಟ್ಟದಿಂದ ರಾಷ್ಟ್ರೀಯ ಮಟ್ಟದ ತನಕ ಹಣದ ಆಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬ್ಯಾಂಕುಗಳ ಬೆಳವಣಿಗೆ, ಶಿಕ್ಷಣ ಸಂಸ್ಥೆಗಳ ಬೆಳವಣಿಗೆ ಆಗಿದೆ. ಅಡಕೆ ಬೆಳೆಯ ಸಮಸ್ಯೆಗಳ ಬಗ್ಗೆ ಬೆಳೆಗಾರರು ಚಿಂತನೆ ಮಾಡಬೇಕು. ಚಿಂತನೆಯ ಯೋಜನೆಗಳನ್ನು ಸರ್ಕಾರಕ್ಕೆ ಮನವರಿಕೆ ಮಾಡಿ ಕೊಡುವ ಕೆಲಸವಾಗಬೇಕು ಎಂದು ಹೇಳಿದರು.
ಮುಖ್ಯ ಅತಿಥಿ ಅಖಿಲ ಭಾರತ ಅಡಕೆ ಬೆಳೆಗಾರರ ಸಂಘದ ಅಧ್ಯಕ್ಷರಾದ ಮಹೇಶ್ ಪುಚ್ಛಪ್ಪಾಡಿ ಮಾತನಾಡಿ, ಅಡಕೆ ಕ್ಯಾನ್ಸರ್ ಕಾರಕ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ಮಾಡಿದಾಗ ಅದನ್ನು ಅಲ್ಲಗಳೆಯಲು ನಮ್ಮ ಬಳಿ ಯಾವುದೇ ದಾಖಲೆಗಳು ಇರಲಿಲ್ಲ. ಈಗ ಒಂದು ಉತ್ತಮ ದಾಖಲೆ ಸಿಕ್ಕಿದೆ ಎಂದು ಹೇಳಿದರು.
ಎನ್.ಐ.ಟಿ.ಕೆ ನಿರ್ದೇಶಕ ಪ್ರೊ. ರವಿ ಪುಸ್ತಕ ಬಿಡುಗಡೆ ಮಾಡಿದರು. ಪುಸ್ತಕ ಬರೆದ ಪ್ರಸನ್ನ ಬೇಲೂರು ಅವರನ್ನು ಗೌರವಿಸಲಾಯಿತು. ಕ್ಯಾಂಪ್ಕೊ ನಿರ್ದೇಶಕ ಡಾ. ಬಿ ವಿ ಸತ್ಯನಾರಾಯಣ ಸ್ವಾಗತಿಸಿದರು. ಡಿಜಿಎಮ್ ಶ್ಯಾಮ್ ವಂದಿಸಿದರು. ಚೀಫ್ ಮ್ಯಾನೇಜರ್ ಜಯ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.
ಅಡಿಕೆಯು ದಕ್ಷಿಣ ಮತ್ತು ಆತ್ಮೀಯ ಏಷ್ಯಾದ ಸಾಂಸ್ಕೃತಿಕವಾಗಿ ಮಹತ್ವದ ಮತ್ತು ಆರ್ಥಿಕವಾಗಿ ಪ್ರಮುಖ ಕೃಷಿ ಸರಕುಗಳಾಗಿವೆ. ಆದರೂ ಇದರ ಅರ್ಹತೆಗಳನ್ನು ಸಾಮಾನ್ಯವಾಗಿ ವೈಜ್ಞಾನಿಕವಾಗಿ ಚರ್ಚಿಸಲಾಗುತ್ತದೆ. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕದಲ್ಲಿ ಪ್ರೊಫೆಸರ್ ಮತ್ತು ಜೀವರಾಸಾಯನಿಕ ಎಂಜಿನಿಯರಿಂಗ್‌ನಲ್ಲಿ ಪರಿಣತಿ ಹೊಂದಿರುವ ಪಿಎಚ್‌ಡಿ ಹೊಂದಿರುವ ರಾಸಾಯನಿಕ ಎಂಜಿನಿಯರ್ ಡಾ. ಪ್ರಸನ್ನ ಬೇಲೂರು ಅವರು ಬರೆದಿರುವ ಈ ಪುಸ್ತಕವು ಅಡಿಕೆಯ ಕುರಿತು ಸಮಗ್ರ ವೈಜ್ಞಾನಿಕ, ಐತಿಹಾಸಿಕ ಮತ್ತು ಸಾಮಾಜಿಕ-ಆರ್ಥಿಕ ದೃಷ್ಟಿಕೋನವನ್ನು ಪ್ರಸ್ತುತಪಡಿಸುತ್ತದೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

