ಬಂಟ್ವಾಳ: ರಾಜ್ಯದ ಪ್ರತಿಷ್ಠಿತ ಪತ್ರಿಕೆ “ಕನ್ನಡ ಪ್ರಭ” ಹಾಗೂ ರಾಜ್ಯದ ಪ್ರಮುಖ ಸುದ್ದಿವಾಹಿನಿ “”ಏಷಿಯಾನೆಟ್ ಸುವರ್ಣನ್ಯೂಸ್” ಕೊಡಮಾಡಿದ ಕರ್ನಾಟಕ ಸಹಕಾರ ಶಿರೋಮಣಿ 2025 ಪ್ರಶಸ್ತಿ ಪಡೆದಿರುವ ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಅವರನ್ನು ಸಂಗಬೆಟ್ಟು ಗ್ರಾಮ ಪಂಚಾಯತ್ ಹಾಗೂ ಕುಕ್ಕಿಪಾಡಿ ಗ್ರಾಮ ಪಂಚಾಯತ್ ವತಿಯಿಂದ ಅಭಿನಂದಿಸಲಾಯಿತು.
https://chat.whatsapp.com/FCEnlTkAKCC0MGPhXtX4i4
ಸಂಗಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಾಜೀವಿ ಕೋಟಿಯಪ್ಪ ಪೂಜಾರಿ, ಉಪಾಧ್ಯಕ್ಷ ಸುರೇಶ್ ಕುಲಾಲ್, ಮಾಜಿ ಅಧ್ಯಕ್ಷ ಸತೀಶ್ ಪೂಜಾರಿ ಅಲಕ್ಕೆ, ಸದಸ್ಯರಾದ ಸಂದೇಶ ಶೆಟ್ಟಿ, ದಾಮೋದರ ಪೂಜಾರಿ, ಉದಯ ಪೂಜಾರಿ, ದೇವಪ್ಪ ಕರ್ಕೇರ, ಸುನೀಲ್ ಶೆಟ್ಟಿಗಾರ್, ವಿಮಲಾ ಮೋಹನ್, ಶಕುಂತಲಾ, ಶಾಂತ, ಪ್ರೇಮ, ವಿದ್ಯಾ ಪ್ರಭು, ಹೇಮಲತಾ, ಬೆನಡಿಕ್ಟ್ ಡಿಕೋಸ್ತ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪದ್ಮಾ ನಾಯ್ಕ್, ಸಿಬ್ಬಂದಿಗಳಾದ ಮಹಾಬಲ ನಾಯ್ಕ್, ಸುರೇಶ, ಸುಮತ, ಮಹಮ್ಮದ್ ಶಾಫಿ, ಕೇಶವತಿ, ಗ್ರಂಥಾಲಯ ಮೇಲ್ವಿಚಾರಕಿ ಶೋಭಾ, ಪ್ರಮುಖರಾದ ದೀಪಕ್ ಶೆಟ್ಟಿಗಾರ್, ಉಮೇಶ್ ಗೌಡ, ಪ್ರವೀಣ್ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು. ಪಂಚಾಯತ್ ಕಾರ್ಯದರ್ಶಿ ರೋಹಿಣಿ ಸ್ವಾಗತಿಸಿದರು. ಸಿಬ್ಬಂದಿ ಪ್ರಜ್ವಲ್ ಕಾರ್ಯಕ್ರಮ ನಿರೂಪಿಸಿದರು.

ಕುಕ್ಕಿಪಾಡಿ ಗ್ರಾಮ ಪಂಚಾಯತ್ ವತಿಯಿಂದ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶೇಖರ್ ಶೆಟ್ಟಿ, ಉಪಾಧ್ಯಕ್ಷೆ ಬೇಬಿ ಪೂಜಾರಿ ದೇವಸ, ಸದಸ್ಯರಾದ ಲಿಂಗಪ್ಪ ಪೂಜಾರಿ, ಯೋಗೀಶ್ ಆಚಾರ್ಯ, ದಿನೇಶ್ ಸುಂದರ ಶಾಂತಿ, ಚಂದ್ರ ಪೂಜಾರಿ, ಸುಜಾತಾ ಪೂಜಾರಿ, ಪ್ರತಿಭಾ ಶೆಟ್ಟಿ, ಶೋಭಾ ಕುಲಾಲ್, ಪುಷ್ಪ, ಗೀತಾ ನಾಯ್ಕ್, ಪೂರ್ಣಿಮಾ ರವಿರಾಜ್, ಕಾರ್ಯದರ್ಶಿ ಪ್ರೇಮಾ ನಾಯ್ಕ್, ಸಿ.ಎ. ಬ್ಯಾಂಕ್ ನಿರ್ದೇಶಕ ರಾಜೇಶ್ ಶೆಟ್ಟಿ ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪದ್ಮಾ ನಾಯ್ಕ್ ಸ್ವಾಗತಿಸಿ ವಂದಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
EMAIL: sahakaraspandana@gmail.com




