Close Menu
    Top News

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಶಿರ್ತಾಡಿಯ ನವಮೈತ್ರಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಮೈತ್ರಿ ಸೌಧ ಫೆಬ್ರವರಿ 8ರಂದು ಉದ್ಘಾಟನೆ
    News

    ಶಿರ್ತಾಡಿಯ ನವಮೈತ್ರಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಮೈತ್ರಿ ಸೌಧ ಫೆಬ್ರವರಿ 8ರಂದು ಉದ್ಘಾಟನೆ

    adminBy adminFebruary 6, 2026

    ಮೂಡುಬಿದಿರೆ: ಮೂಡುಬಿದಿರೆ ತಾಲೂಕಿನ ಗ್ರಾಮಾಂತರ ಪ್ರದೇಶ ಶಿರ್ತಾಡಿಯಲ್ಲಿ 13 ವರ್ಷಗಳ ಹಿಂದೆ ಪ್ರಾರಂಭವಾದ ನವಮೈತ್ರಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಮೈತ್ರಿ ಸೌಧ -ಸಹಕಾರಿ ಸಂಘದ ವಾಣಿಜ್ಯ ಸಂಕೀರ್ಣ ಹಾಗೂ ಸಂಘದ ಕೇಂದ್ರ ಕಚೇರಿಯ ಉದ್ಘಾಟನಾ ಸಮಾರಂಭ ಫೆ.8ರ ಭಾನುವಾರ ಲೋಕಾರ್ಪಣೆಗೊಳ್ಳಲಿದೆ.

    https://chat.whatsapp.com/FCEnlTkAKCC0MGPhXtX4i4
    ಫೆಬ್ರವರಿ 8ರ ಸಂಜೆ 5.30ಕ್ಕೆ ಮೈತ್ರಿ ಸೌಧವನ್ನು ಶಿರ್ತಾಡಿಯ ಭುವನಜ್ಯೋತಿ ರೆಸಿಡೆನ್ಶಿಯಲ್‌ ಶಾಲೆಯ ಪ್ರಾಂಶುಪಾಲರಾದ ಪ್ರಶಾಂತ್‌ ಡಿಸೋಜ ಉದ್ಘಾಟಿಸಲಿದ್ದಾರೆ. ವಕೀಲ ಮಯೂರಕೀರ್ತಿ ಸಹಕಾರಿಯ ಕೇಂದ್ರ ಕಚೇರಿಯನ್ನು ಉದ್ಘಾಟಿಸಲಿದ್ದಾರೆ. ದಕ್ಷಿಣ ಕನ್ನಡ ಒಕ್ಕೂಟ ಸೌಹಾರ್ದ ಸಹಕಾರಿಯ ಅಧ್ಯಕ್ಷರಾದ ಭಾಸ್ಕರ ದೇವಸ್ಯ, ಕರ್ನಾಟಕ ಸೌಹಾರ್ದ ಸಂಯುಕ್ತ ಸಹಕಾರಿಯ ಪ್ರಾಂತೀಯ ಅಧಿಕಾರಿ ಗುರುಪ್ರಸಾದ್‌ ಬಂಗೇರ, ಮಾತೃಭೂಮಿ ಸೌಹಾರ್ದ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೃಷ್ಣ ಕೊಂಪದವು, ಶಿರ್ತಾಡಿಯ ಹೆಲೆನ್‌ ಮರಿಯ ಲೋಬೊ, ನಾರಾವಿಯ ಆಶಾ ಸುರೇಶ್‌ ಗೌರವ ಉಪಸ್ಥಿತಿ ಇರಲಿದ್ದಾರೆ. ಸಭಾ ಕಾರ್ಯಕ್ರಮದ ನಂತರ ರಾತ್ರಿ 7 ಗಂಟೆಗೆ ಶರತ್‌ ಶೆಟ್ಟಿ ಕಿನ್ನಿಗೋಳಿ ನೇತೃತ್ವದ ವಿಜಯ ಕಲಾವಿದರು ಕಿನ್ನಿಗೋಳಿ ಇವರಿಂದ ವಿಜಯ ಕುಮಾರ್‌ ಕೊಡಿಯಾಲ್‌ಬೈಲ್‌ ನಿರ್ದೇಶನದ ಅಮ್ಮು ಆಮುಂಡರಾ ತುಳು ನಾಟಕ ಪ್ರದರ್ಶನಗೊಳ್ಳಲಿದೆ.
    ನವಮೈತ್ರಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾದ ಸತೀಶ್‌ ವಿ.ಶೆಟ್ಟಿ, ಉಪಾಧ್ಯಕ್ಷರಾದ ವಿನಯ ಹೆಗ್ಡೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂದೀಪ್‌ ಜೆ.ಕೆ, ನಿರ್ದೇಶಕರಾದ ಕೆ.ಮಹಾವೀರ ಜೈನ್‌, ಎಸ್‌.ಪ್ರವೀಣ್‌ ಕುಮಾರ್‌, ಮಹಾವೀರ ಮುದ್ಯ, ಲ್ಯಾನ್ಸಿ ಡೇಸಾ, ಫ್ರಾಂಕಿ ಎಲ್‌.ಪಿಂಟೊ, ರಕ್ಷಿತ್‌ ಆರ್‌., ಅರುಣ್‌ ಶೆಟ್ಟಿ, ಸದಾನಂದ ಪೂಜಾರಿ, ಬಬಿತಾ ಆರ್‌.ಶೆಟ್ಟಿ, ಶಾರದಾ ಸುವರ್ಣ, ರವೀಂದ್ರ ಬಿ.ಅಮೀನ್‌, ಶಾಖೆಗಳ ವ್ಯವಸ್ಥಾಪಕರು ಮತ್ತು ಸಿಬ್ಬಂದಿ ವರ್ಗದವರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.


    2012ರ ಜೂನ್‌ 20ರಂದು 1228 ಸದಸ್ಯ ಬಲದೊಂದಿಗೆ ಆರಂಭವಾದ ನವಮೈತ್ರಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘವು ಇದೀಗ ಸ್ವಂತ ಜಾಗದಲ್ಲಿ ಕಟ್ಟಡ ಹೊಂದಿ ಲಾಭದಾಯಕವಾಗಿ ಕಾರ್ಯನಿರ್ವಹಿಸುತ್ತಿದೆ. ಶಿರ್ತಾಡಿ -ಅಳಿಯೂರು ರಸ್ತೆಗೆ ತಾಗಿಕೊಂಡಿರುವ ಸ್ವಂತ ವಿಶಾಲ ಜಾಗದಲ್ಲಿ ಸುಮಾರು 28 ಸಾವಿರ ಚದರಡಿಯ ಜಾಗದಲ್ಲಿ ಮೈತ್ರಿ ಸೌಧ ಕಟ್ಟಡ ಸಂಪೂರ್ಣವಾಗಿ ಸಜ್ಜಾಗಿ ಸಾರ್ವಜನಿಕ ಸೇವೆಗೆ ತೆರೆದುಕೊಳ್ಳಲಿದೆ. ನೂತನ ಕಟ್ಟಡದಲ್ಲಿ 13 ವಾಣಿಜ್ಯ ಕೇಂದ್ರಗಳು, 18 ವಾಸ್ತವ್ಯದ ಮನೆಗಳು ಲಿಫ್ಟ್‌ ವ್ಯವಸ್ಥೆಯೊಂದಿಗೆ ನಿರ್ಮಾಣವಾಗಿದೆ. ಸುಮಾರು ಎರಡು ಸಾವಿರ ಚದರಡಿಯ ವಿಸ್ತೀರ್ಣದಲ್ಲಿ ಸುಸಜ್ಜಿತ ಭದ್ರತಾ ಕೊಠಡಿಯೊಂದಿಗೆ ಸಂಘದ ಕೇಂದ್ರ ಕಚೇರಿ ನಿರ್ಮಾಣವಾಗಿದ್ದು, ಇಲ್ಲಿಯೇ ಸಾರ್ವಜನಿಕರಿಗೆ ಸೇವೆ ನೀಡಲಿದೆ. ನಾಲ್ಕು ಕೋಟಿ ರೂ. ಮೌಲ್ಯದ ಕಟ್ಟಡದಲ್ಲಿ ಜಿಮ್‌, ನೃತ್ಯ, ತರಬೇತಿಗೆ ಅನುಕೂಲವಾಗುವ ಹಾಲ್‌ ವ್ಯವಸ್ಥೆ ಇದೆ. 13 ವರ್ಷಗಳಿಂದ ಸಾವಿರಾರು ಜನರಿಗೆ ಆರ್ಥಿಕ ಚೈತನ್ಯ ಪಡೆಯಲು ಅನುಕೂಲ ಕಲ್ಪಿಸಿದ್ದು, ಪ್ರಸಕ್ತ ಸಾಲಿನಲ್ಲಿ 28 ಕೋಟಿ ರೂ. ವ್ಯವಹಾರ ನಡೆಸಿದೆ. ಅಳದಂಗಡಿ, ನಾರಾವಿ, ಶಿರ್ತಾಡಿಯಲ್ಲಿ ಶಾಖಾ ಕಚೇರಿಗಳನ್ನು ಹೊಂದಿದ್ದು, 3610 ಸದಸ್ಯ ಬಲದೊಂದಿಗೆ 17.07 ಕೋಟಿ ರೂ. ಠೇವಣಿ ಹಾಗೂ 15.46 ಕೋಟಿ ರೂ. ಸಾಲ ಒದಗಿಸಿ ಸಶಕ್ತವಾಗಿ ಮುನ್ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಮತ್ತೆ ಎರಡು ಶಾಖೆಗಳನ್ನು ತೆರೆಯಲು ಯೋಜನೆ ರೂಪಿಸಲಾಗಿದೆ.

    ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

    EMAIL: sahakaraspandana@gmail.com

    Ammu Aamundara Krishna Kompadavu Maitri Soudha Mayura Keerthi Navamaitri Vividhoddesha Souharda Sahakari Sangha Shirtady Prashanth Dsouza Shirtady
    Previous Articleಫೆ.8ರಂದು ಜಪ್ಪಿನಮೊಗರು ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ಉಚಿತ ಸಾಮಾನ್ಯ ವೈದ್ಯಕೀಯ, ನೇತ್ರ ತಪಾಸಣಾ ಮತ್ತು ದಂತ ಚಿಕಿತ್ಸಾ ಶಿಬಿರ
    Next Article ಸ್ಟಾರ್ಟ್‌ಅಪ್ ಇಂಡಿಯಾ ವ್ಯಾಪ್ತಿಗೆ ಸಹಕಾರ ಸಂಘಗಳು

    Related Posts

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.