ಬಳ್ಳಾರಿ: ಶ್ರೀ ಶರಣ ಸಕ್ಕರೆ ಕರಡೀಶ ಸೌಹಾರ್ದ ಪತ್ತಿನ ಸಹಕಾರ ಸಂಘದ ನಾಲ್ಕನೇ ಶಾಖೆಯು ಹೊಸಪೇಟೆಯಲ್ಲಿ ಫೆಬ್ರವರಿ 8ರಂದು ಲೋಕಾರ್ಪಣೆಗೊಳ್ಳಲಿದೆ. ವಿಜಯನಗರ ಜಿಲ್ಲೆಯ ಹೊಸಪೇಟೆಯ ವಿಜಯನಗರ ಮಹಾವಿದ್ಯಾಲಯದ ಹಿಂಭಾಗದ ಜಗದ್ಗುರು ಸಂಗನ ಬಸವ ಸ್ವಾಮಿಗಳ ಮಾರ್ಗ, ಚಿರಂಜೀವಿ ಆಸ್ಪತ್ರೆಯ ಎದುರುಗಡೆಯ ವೀರಶೈವ ವಿದ್ಯಾವರ್ಧಕ ಸಂಘದ ಆವರಣದಲ್ಲಿ ಫೆಬ್ರವರಿ ೮ರಂದು ಬೆಳಗ್ಗೆ 10 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.
https://chat.whatsapp.com/FCEnlTkAKCC0MGPhXtX4i4
೨೦೧೭ರಲ್ಲಿ ಪ್ರಾರಂಭವಾದ ಶ್ರೀ ಶರಣ ಸಕ್ಕರೆ ಕರಡೀಶ ಸೌಹಾರ್ದ ಪತ್ತಿನ ಸಹಕಾರ ಸಂಘವು ದಶಮಾನೋತ್ಸವ ಹೊಸ್ತಿಲಲ್ಲಿದೆ. 2200 ಸದಸ್ಯರಿಂದ 42 ಲಕ್ಷ ರೂ. ಷೇರು ಹಣದೊಂದಿಗೆ ಬಳ್ಳಾರಿಯಲ್ಲಿ ಪ್ರಾರಂಭವಾದ ಈ ಸಹಕಾರಿ ಸಂಘವು ವೃತ್ತಿಪರವಾಗಿ ಮುನ್ನಡೆದು ಸಿರಗುಪ್ಪ, ಕಂಪ್ಲಿ ಮತ್ತು ಹೂವಿನ ಹಡಗಲಿಯಲ್ಲಿ ಶಾಖೆಗಳನ್ನು ಹೊಂದಿ ವ್ಯವಹಾರವನ್ನು ವೃದ್ಧಿಸಿಕೊಂಡಿದೆ. ಪ್ರತಿವರ್ಷ ಶೇ.14ರಿಂದ 15ರವರೆಗೆ ಲಾಭಾಂಶ ನೀಡುತ್ತಿದ್ದು, ಹೊಸಪೇಟೆಯಲ್ಲಿ ನೂತನ ಶಾಖೆಗೆ ಅಡಿಪಾಯ ಹಾಕಿದೆ.
ಶ್ರೀ ಶರಣ ಸಕ್ಕರೆ ಕರಡೀಶ ಸೌಹಾರ್ದ ಪತ್ತಿನ ಸಹಕಾರ ಸಂಘವು ಅನೇಕ ಜನಪರ ಹಾಗೂ ಸಮಾಜಮುಖಿ ಕೆಲಸಗಳನ್ನು ಮಾಡುತ್ತ ಬಂದಿದ್ದು, ಸದಸ್ಯರ ಅನುಕೂಲಕ್ಕಾಗಿ ನೆಫ್ಟ್, ಆರ್‌ಟಿಜಿಎಸ್, ಲಾಕರ್, ಇ-ಸ್ಟ್ಯಾಂಪ್, ಎಟಿಎಂ ಇತ್ಯಾದಿ ಸೌಲಭ್ಯಗಳನ್ನು ಒದಗಿಸಿದೆ. ಆಭರಣ ಸಾಲ, ಗೃಹ ಸಾಲ, ವಾಹನ ಸಾಲ, ಅಡಮಾನ ಸಾಲ, ಜಾಮೀನು ಆಧಾರಿತ ಸಾಲ, ವೇತನ ಆಧಾರಿತ ಸಾಲ, ಮಹಿಳಾ ಗುಂಪು ಸಾಲ, ಶ್ರೀ ಶರಣೆ ಅಕ್ಕಮಹಾದೇವಿ ಕಲ್ಯಾಣ ನಿಧಿ ಸಮೃದ್ಧಿ ಯೋಜನೆ, ಶ್ರೀ ಶರಣ ರಾಯ್‌ಬಹದ್ದೂರ್ ಕರಡೀಶ ವಿದ್ಯಾನಿಧಿ, ಶ್ರೀ ಗುರುಬಸವ ಅಕ್ಷಯ ತೃತೀಯ ಸುವರ್ಣ ನಿಧಿ ಯೋಜನೆ, ಪಿಗ್ಮಿ ಯೋಜನೆಯಂಥ ಹಲವಾರು ಯೋಜನೆಗಳನ್ನು ನೀಡುತ್ತಿದೆ. ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ಕಾರ್ಯವ್ಯಾಪ್ತಿ ಹೊಂದಿರುವ ಶ್ರೀ ಶರಣ ಸಕ್ಕರೆ ಕರಡೀಶ ಸೌಹಾರ್ದ ಪತ್ತಿನ ಸಹಕಾರ ಸಂಘದ ಉತ್ತಮ ಪ್ರಗತಿಯನ್ನು ಗುರುತಿಸಿ 2022-23ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ವಾರ್ಷಿಕ ಮಹಾಸಭೆಯಲ್ಲಿ ಉತ್ತಮ ಸೌಹಾರ್ದ ಸಹಕಾರಿ ಸಂಘವೆಂಬ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.


ಉದ್ಘಾಟನಾ ಕಾರ್ಯಕ್ರಮದಲ್ಲಿ ಸಂಘದ ಆಡಳಿತ ಮಂಡಳಿ ಅಧ್ಯಕ್ಷರಾದ ಕಲ್ಗುಡಿ ಮಂಜುನಾಥ, ಉಪಾಧ್ಯಕ್ಷರಾದ ತೆಂಗಿನಕಾಯಿ ಮಹಾಂತೇಶ್, ನಿರ್ದೇಶಕರಾದ ಬಸಪ್ಪ ಕೇಣಿ, ಬೈಲುವುದ್ದಿಗೇರಿ ಎರ್ರಿಸ್ವಾಮಿ, ಹಾವಿನಾಳ್ ಬಸವರಾಜ್, ಜಿ.ವೀರೇಶಪ್ಪ, ಹೋತೂರು ಹೇಮಾದ್ರಿ, ಜಿ.ಜಿಡೇಮೂರ್ತಿ, ಕೆ.ಎಂ.ಚನ್ನರಾಮೇಶ್ವರ, ಬಾಡದ ಪ್ರಕಾಶ್, ಶಿವಾ ರಮೇಶ್, ವಂಟೆ ನಾಗರಾಜ್, ಹಾವಿನಾಳ್ ನೀಲಾವತಿ, ಜಿ.ಉಮಾದೇವಿ, ವೃತ್ತಿಪರ ನಿರ್ದೇಶಕರಾದ ಮುಂಡವಾಡ ಉಮೇಶ್, ಜಾನೆಕುಂಟೆ ತಿಪೇರುದ್ರಪ್ಪ, ಗಾಳಿ ರಾಜಶೇಖರ್, ಬಿ.ಬಸವರಾಜ್ ಭಾಗವಹಿಸಲಿದ್ದಾರೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

