Close Menu
    Top News

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ನವಜಾತ ಶಿಶುವಿಗೂ ಯಶಸ್ವಿನಿ ರಕ್ಷಾಕವಚ
    News

    ನವಜಾತ ಶಿಶುವಿಗೂ ಯಶಸ್ವಿನಿ ರಕ್ಷಾಕವಚ

    adminBy adminJanuary 6, 2026

    ತಾಯಿಯ ಆಧಾರ್‌ ಕಾರ್ಡ್‌ ಮೇಲೆ ಚಿಕಿತ್ಸೆ, ಸಹಕಾರಿ ಸಂಘಗಳ ಸದಸ್ಯರಿಗೆ ಅನ್ವಯ

    ಬೆಂಗಳೂರು: ರಾಜ್ಯದ ಸಾವಿರಾರು ಸಹಕಾರಿ ಸಂಘಗಳ ಲಕ್ಷಾಂತರ ಸದಸ್ಯರಿಗೆ ಚಿಕಿತ್ಸೆಗೆ ವರದಾನವಾಗಿರುವ ಯಶಸ್ವಿನಿ ಯೋಜನೆಯನ್ನು ಮುಂದುವರಿಸಲು ಸರ್ಕಾರ ಹಸಿರು ನಿಶಾನೆ ತೋರಿಸಿದ್ದು ಈ ಬಾರಿ ನವಜಾತ ಶಿಶುಗಳಿಗೂ ಯಶಸ್ವಿನಿ ಮೂಲಕ ನೋಂದಣಿಗೆ ಅವಕಾಶ ನೀಡಲಾಗಿದೆ.

    https://chat.whatsapp.com/FCEnlTkAKCC0MGPhXtX4i4
    ಈ ಕುರಿತು ಸಮಗ್ರ ಮಾರ್ಗಸೂಚಿ ಬಿಡುಗಡೆ ಮಾಡಿರುವ ಸಹಕಾರ ಇಲಾಖೆ ನವಜಾತ ಶಿಶುಗಳಿಗೂ ಚಿಕಿತ್ಸೆಗೆ ಅವಕಾಶ ಕಲ್ಪಿಸಿದೆ. ಜನವರಿ 3ರಿಂದಲೇ ನೋಂದಣಿ ಆರಂಭವಾಗಿದ್ದು, ಈ ಬಾರಿ ರಾಜ್ಯಾದ್ಯಂತ 50 ಸಾವಿರಕ್ಕೂ ಅಧಿಕ ಸದಸ್ಯರನ್ನು ನೋಂದಾಯಿಸುವ ಗುರಿ ಹೊಂದಲಾಗಿದೆ. ತಾಯಿಯ ಆಧಾರ್‌ ಕಾರ್ಡ್‌ ಮೂಲಕ ನವಜಾತ ಶಿಶುಗಳ ಆರೋಗ್ಯಕ್ಕೆ ರಕ್ಷಾಕವಚವಾಗಿ ಯಶಸ್ವಿನಿಯನ್ನು ಬಳಸಿಕೊಳ್ಳಲು ಸಹಕಾರ ಇಲಾಖೆ ಮುಂದಾಗಿದೆ.
    ಯಶಸ್ವಿನಿ ಯೋಜನೆಯಲ್ಲಿ ನೋಂದಣಿ ಮಾಡುವವರಿಗೆ ಮಿತಿ ನಿಗದಿಪಡಿಸಲಾಗಿದೆ. ಗ್ರಾಮೀಣ ಮತ್ತು ನಗರ ಪ್ರದೇಶದ ಸದಸ್ಯರಿಗೆ ಪ್ರತ್ಯೇಕ ನೋಂದಣಿ ಶುಲ್ಕ ನಿಗದಿ ಮಾಡಲಾಗಿದ್ದು, ಗ್ರಾಮೀಣ ಭಾಗದಲ್ಲಿ ನಾಲ್ಕು ಜನ ಇರುವ ಕುಟುಂಬಕ್ಕೆ ವಾರ್ಷಿಕ 500 ರೂ., ಹೆಚ್ಚುವರಿ ಸದಸ್ಯರಿದ್ದರೆ ತಲಾ 100 ರೂ. ಹೆಚ್ಚುವರಿ ಪಾವತಿಸಬೇಕು. ನಗರ ಪ್ರದೇಶದ ಕುಟುಂಬಗಳಿಗೆ ವಾರ್ಷಿಕ ಒಂದು ಸಾವಿರ ರೂ., ಹೆಚ್ಚುವರಿ ಸದಸ್ಯರಿದ್ದರೆ ತಲಾ 200 ರೂ. ಹೆಚ್ಚುವರಿ ಪಾವತಿಸಬೇಕು. ಮಾರ್ಚ್‌ 31ರೊಳಗೆ ನೋಂದಣಿ ಮುಗಿಸಬೇಕು.
    ವೆಬ್‌ಸೈಟ್‌ನಲ್ಲಿ ಚಿಕಿತ್ಸೆಯ ಮಾಹಿತಿ
    ಒಟ್ಟು 2128 ಚಿಕಿತ್ಸೆಗಳು ಲಭ್ಯವಿದ್ದು ಇವುಗಳಲ್ಲು 478 ಐಸಿಯು ಚಿಕಿತ್ಸೆಗಳು ಸೇರಿವೆ. ಕುಟುಂಬದ ವ್ಯಾಖ್ಯಾನದ ಪ್ರಕಾರ ಪ್ರಧಾನ ಅರ್ಜಿದಾರ, ಅವರ ತಂದೆ, ತಾಯಿ, ಪತಿ/ಪತ್ನಿ, ಮಕ್ಕಳು ಮತ್ತು ಮೊಮ್ಮಕ್ಕಳು ಯೋಜನೆಯಡಿ ಬರಲಿದ್ದಾರೆ. ಯೋಜನೆಯ ಬಗೆಗಿನ ಹೆಚ್ಚಿನ ಮಾಹಿತಿಗಳು ಹೆಚ್ಚಿನ ವಿವರಗಳು, ಆಸ್ಪತ್ರೆಗಳ ವಿವರಗಳು ಸಹಕಾರ ಸಿಂಧು ಅಥವಾ ಯಶಸ್ವಿನಿ ಟ್ರಸ್ಟ್‌ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಯಶಸ್ವಿನಿ ಯೋಜನೆಯಡಿ ನೋಂದಣಿಯಾದ ಸದಸ್ಯರಿಗೆ ಯೂನಿಕ್‌ ಐಡಿ ಸಂಖ್ಯೆ ಹೊಂದಿರುವ ಕಾರ್ಡ್‌ಗಳನ್ನು ಏಪ್ರಿಲ್‌ 1ರಿಂದ ವಿತರಿಸಲಾಗುವುದು.

    ಚಿಕಿತ್ಸಾ ಮಿತಿ ಎಷ್ಟು?
    ಪ್ರತಿ ಕುಟುಂಬಕ್ಕೆ ಗರಿಷ್ಠ ಐದು ಲಕ್ಷ ರೂ.ವರೆಗೆ ನಗದು ರಹಿತ ವೈದ್ಯಕೀಯ ಸೇವೆ ಲಭ್ಯವಿದೆ. ಯೋಜನೆಯ ಲಾಭ ಪಡೆಯಲು ಸಹಕಾರ ಸಂಘಗಳಲ್ಲಿ ಸದಸ್ಯರಾಗಿರಬೇಕು. ಸಹಕಾರ ಸಂಘಗಳ ನೌಕರರಾಗಿದ್ದಲ್ಲಿ ಕನಿಷ್ಠ ಮೂರು ವರ್ಷ ಸೇವೆ ಸಲ್ಲಿಸಿರಬೇಕು ಹಾಗೂ ಅವರ ಗರಿಷ್ಠ ವೇತನ 30,000 ರೂ. ಮೀರಿರಬಾರದು. ಒಂದು ವೇಳೆ ಸುಳ್ಳು ಮಾಹಿತಿ ನೀಡಿ ನೋಂದಣಿ ಮಾಡಿದ್ದರೆ ಅಂಥವರ ಸದಸ್ಯತ್ವ ರದ್ದಾಗಲಿದೆಯಲ್ಲದೆ, ಪಾವತಿಸಿದ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು. ಒಟ್ಟು 2128 ವಿವಿಧ ಚಿಕಿತ್ಸೆಗಳು ಯೋಜನೆಯಲ್ಲಿ ಲಭ್ಯವಿದೆ. ಜನರಲ್‌ ವಾರ್ಡ್‌ಗಳಲ್ಲಿ ಚಿಕಿತ್ಸೆ ಪಡೆಯಬಹುದು, ಆದರೆ ಸ್ಪೆಷಲ್‌ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯಲು ಫಲಾನುಭವಿಯೇ ವೆಚ್ಚ ಭರಿಸಬೇಕು.

    ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

    EMAIL: sahakaraspandana@gmail.com

    Banking Co Operative ministry Cooperative Cooperative Department Free Health Card Yashaswini health Card
    Previous Articleಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆ ನವೀಕರಣ, ಹೊಸ ನೋಂದಣಿ ಪ್ರಾರಂಭ
    Next Article ಪಂಜಿಮೊಗರಿನಲ್ಲಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದಿಂದ ಉಚಿತ ವೈದ್ಯಕೀಯ ತಪಾಸಣಾ ಶಿಬಿರ

    Related Posts

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.