ಬೆಂಗಳೂರು: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಕೋ ಆಪರೇಟಿವ್ ಮ್ಯಾನೇಜ್‌ಮೆಂಟ್ ವತಿಯಿಂದ ಆರು ತಿಂಗಳ ಅವಧಿಯ ರೆಗ್ಯುಲರ್ ಡಿಪ್ಲೊಮಾ ಇನ್ ಕೋ ಆಪರೇಟಿವ್ ಮ್ಯಾನೇಜ್‌ಮೆಂಟ್ (ಡಿಸಿಎಂ) ತರಬೇತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಜನವರಿ -ಜೂನ್ ತಿಂಗಳ ಬ್ಯಾಚ್‌ಗೆ ಆಸಕ್ತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: 31-12-2025.
https://chat.whatsapp.com/FCEnlTkAKCC0MGPhXtX4i4
ಆಸಕ್ತ ಅಭ್ಯರ್ಥಿಗಳು, ಸಹಕಾರ ಸಂಘಗಳ, ಸಂಸ್ಥೆಗಳ, ಸಹಕಾರ ಇಲಾಖೆ ಮತ್ತು ಬ್ಯಾಂಕುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರು ಕೂಡ ಅರ್ಜಿ ಸಲ್ಲಿಸಬಹುದು.
* ತರಬೇತಿ ಪಡೆಯಲು ಕನಿಷ್ಠ ವಿದ್ಯಾರ್ಹತೆ ಪಿ.ಯು.ಸಿ ಪರೀಕ್ಷೆ ಉತ್ತೀರ್ಣರಾಗಿರಬೇಕು.
* ಅರ್ಜಿಯನ್ನು ದಿನಾಂಕ: 31-12-2025ರ ಒಳಗಾಗಿ ಸಲ್ಲಿಸುವುದು.
* ತರಬೇತಿ ಪಡೆಯುವ ಎಲ್ಲಾ ಅಭ್ಯರ್ಥಿಗಳಿಗೆ ಮಾಹೆಯಾನ ರೂ. 500/- ಶಿಷ್ಯವೇತನ ನೀಡಲಾಗುವುದು.
* ಈ ತರಬೇತಿಯು ಕೆ.ಎ.ಎಸ್ ಮತ್ತು ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲಕರ ಹಾಗೂ ಸಹಕಾರ ಸಂಸ್ಥೆಗಳ ನೇಮಕಾತಿ ಪರೀಕ್ಷೆಯಲ್ಲಿ ಆದ್ಯತೆ ಇರುತ್ತದೆ.
* ಅರ್ಜಿ ದೊರೆಯುವ ಸ್ಥಳ ಕೆ.ಐ.ಸಿ.ಎಂ, ನಂ 1/3, 2ನೇ ಮಹಡಿ, 3ನೇ ಮುಖ್ಯ ರಸ್ತೆ, ಚಾಮರಾಜಪೇಟೆ ಬೆಂಗಳೂರು-18.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 080-35541407, 9449007661, 8105681745
ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಕೋ ಆಪರೇಟಿವ್ ಮ್ಯಾನೇಜ್‌ಮೆಂಟ್, ಸಹಕಾರ ಭವನ, ಬೆಂಗಳೂರು ನಗರ ಜಿಲ್ಲಾ ಸಹಕಾರ ಒಕ್ಕೂಟದ ಕಟ್ಟಡ, ನಂ 1/3, 2ನೇ ಮಹಡಿ, 3ನೇ ಮುಖ್ಯರಸ್ತೆ, ಚಾಮರಾಜಪೇಟೆ, ಬೆಂಗಳೂರು-560018
Email-kicmprinci@gmail.com


