ಮಂಗಳೂರು: ಪಾದೇಶಿಕ ಸಹಕಾರ ನಿರ್ವಹಣಾ ಸಂಸ್ಥೆ ಬೆಂಗಳೂರು, ಇವರು ನೀಡುತ್ತಿರುವ Higher Diploma in Co-Operative Management (HDCM) ದೂರ ಶಿಕ್ಷಣ ಕೋರ್ಸ್ ಅನ್ನು ಮಂಗಳೂರು ಕೇಂದ್ರಿತವಾಗಿ ಆತ್ಮಶಕ್ತಿ ವಿವಿಧೋದ್ಧೇಶ ಸಹಕಾರಿ ಸಂಘ (ನಿ.) ಮಂಗಳೂರು ಇವರ ಸಹಭಾಗಿತ್ವದಲ್ಲಿ ಮುಂದಿನ ಬ್ಯಾಚ್‌ಗೆ ನೋಂದಣಿ ಪ್ರಕ್ರಿಯೆಯನ್ನು ದಿನಾಂಕ: 22/12/2025ರಿಂದ ಪ್ರಾರಂಭಿಸಲಾಗಿದೆ.
https://chat.whatsapp.com/FCEnlTkAKCC0MGPhXtX4i4
ಸಹಕಾರ ಕಾಯ್ದೆ ಮತ್ತು ನಿಯಮಗಳಲ್ಲಿ ಪತ್ತಿನ ಸಹಕಾರ ಸಂಘಗಳ ನೇಮಕಾತಿ ಮತ್ತು ಒಬ್ಬ ನೌಕರನ ಯಾವುದೇ ಉನ್ನತ ಹುದ್ದೆಗೆ ಪದೋನ್ನತಿ ನೀಡುವಾಗ ಅರ್ಹತೆಯಲ್ಲಿ Higher Diploma in Co-Operative Management ಕೋರ್ಸ್ ಅನ್ನು ನಿಗದಿಪಡಿಸಿರುವುದರಿಂದ ಮುಂದಿನ ದಿನಗಳಲ್ಲಿ ಈ ಶಿಕ್ಷಣದ ಅಗತ್ಯವಿರುತ್ತದೆ. ಆತ್ಮಶಕ್ತಿ ವಿವಿಧೋದ್ಧೇಶ ಸಹಕಾರಿ ಸಂಘವು ಪ್ರಾದೇಶಿಕ ಸಹಕಾರ ನಿರ್ವಹಣಾ ಸಂಸ್ಥೆ (RICM) ಬೆಂಗಳೂರು ಇದರ ಸಹಯೋಗದೊಂದಿಗೆ ಈಗಾಗಲೇ ಒಟ್ಟು ಎಂಟು ಬ್ಯಾಚ್‌ಗಳನ್ನು ಯಶಸ್ವಿಯಾಗಿ ನಡೆಸುತ್ತ ಬಂದಿದ್ದು, ೮೦೦ಕ್ಕೂ ಮಿಕ್ಕಿ ಶಿಕ್ಷಣಾರ್ಥಿಗಳು ಇದರ ಪ್ರಾಯೋಜನ ಪಡೆದಿದ್ದು, ಜಿಲ್ಲೆಯ ಸಹಕಾರ ಸಂಘಗಳ ಹಿರಿಯ ಸಿಬ್ಬಂದಿಗಳು ಸೇರಿದಂತೆ ಎಲ್ಲಾ ಸಿಬ್ಬಂದಿಗಳಿಗೆ ದೂರ ಶಿಕ್ಷಣ ಮಾದರಿಯಲ್ಲಿ ಮಂಗಳೂರು ಕೇಂದ್ರೀಕೃತವಾಗಿ ತರಗತಿಗಳು, ಮೌಖಿಕ ಪರೀಕ್ಷೆ ಮತ್ತು ಮುಖ್ಯ ಪರೀಕ್ಷೆಗಳು ನಡೆಯಲಿದ್ದು HDCM ಶಿಕ್ಷಣವನ್ನು ಪಡೆಯಲು ಅನುಕೂಲಕರವಾಗಲಿದೆ. ಅಲ್ಲದೇ ತರಗತಿಗಳು ಮತ್ತು ಎಲ್ಲಾ ಪರೀಕ್ಷೆಗಳು ರಜಾದಿನಗಳಂದು ನಡೆಯಲಿರುವುದರಿಂದ ಸಹಕಾರ ಸಂಘಗಳ ಸಿಬ್ಬಂದಿಗಳಿಗೆ ಪೂರಕವಾಗಲಿದೆ. ಒಂಭತ್ತು ತಿಂಗಳ ಅವಧಿಯ ಕೋರ್ಸಿನಲ್ಲಿ ೧೩ ವಿಷಯ ಹೊಂದಿದ್ದು ಎರಡು ಸೆಮಿಸ್ಟರ್‌ನಲ್ಲಿ ತರಬೇತಿ ನಡೆಯಲಿದೆ.
ಆಸಕ್ತ ಸಹಕಾರ ಸಂಘಗಳ ಸಿಬ್ಬಂದಿಗಳು ಹಾಗೂ ಪದವೀದರರು HDCM ಕೋರ್ಸಿನ ವಿವರಗಳನ್ನು ಮತ್ತು ಅರ್ಜಿಯನ್ನು ಆತ್ಮಶಕ್ತಿ ವಿವಿಧೋದ್ಧೇಶ ಸಹಕಾರಿ ಸಂಘ ಇದರ ಹತ್ತಿರದ ಶಾಖೆಯಲ್ಲಿ ಪಡೆದು ಭರ್ತಿ ಮಾಡಿ ನಿಗದಿತ ಶುಲ್ಕದೊಂದಿಗೆ ದಿನಾಂಕ 31-01-2026ರ ಒಳಗೆ ಆತ್ಮಶಕ್ತಿ ವಿವಿಧೋದ್ಧೇಶ ಸಹಕಾರಿ ಸಂಘ (ನಿ.) ಪ್ರಧಾನ ಕಛೇರಿ: ಆತ್ಮಶಕ್ತಿ ಸೌಧ, ಬೈರಾಡಿಕೆರೆ ಹತ್ತಿರ, ಪಡೀಲ್, ಮಂಗಳೂರು-07ಅಥವಾ ಸಂಘದ ಹತ್ತಿರದ ಶಾಖೆಗೆ ತಲುಪುವಂತೆ ಕಳುಹಿಸಿಕೊಡಲು ವಿನಂತಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ : 0824-2003355, 2007755, 2008855, 8150063555, 8151069555 ಕ್ಕೆ ಸಂಪರ್ಕಿಸಬಹುದು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

