Close Menu
    Top News

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಪುತ್ತೂರಿನ ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ಆಶ್ರಯದಲ್ಲಿ ಪಿಲಿಕುಳ ನಿಸರ್ಗಧಾಮದಲ್ಲಿ ಗಾಂಧಿ ಶಿಲ್ಪ ಬಜಾರ್ ಕರಕುಶಲ ವಸ್ತುಪ್ರದರ್ಶನ ಮೇಳ
    News

    ಪುತ್ತೂರಿನ ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ಆಶ್ರಯದಲ್ಲಿ ಪಿಲಿಕುಳ ನಿಸರ್ಗಧಾಮದಲ್ಲಿ ಗಾಂಧಿ ಶಿಲ್ಪ ಬಜಾರ್ ಕರಕುಶಲ ವಸ್ತುಪ್ರದರ್ಶನ ಮೇಳ

    adminBy adminDecember 23, 2025

    ಮಂಗಳೂರು: ಗ್ರಾಮೀಣ ಕರಕುಶಲ ಕಲೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪುತ್ತೂರಿನ ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘವು, ಕೇಂದ್ರ ಸರಕಾರದ ಜವಳಿ ಸಚಿವಾಲಯದ ಆಶ್ರಯದಲ್ಲಿ ಪಿಲಿಕುಳ ನಿಸರ್ಗಧಾಮದಲ್ಲಿ ಏಳು ದಿನಗಳ ಕಾಲ ಗಾಂಧಿ ಶಿಲ್ಪ ಬಜಾರ್ 2025 ಕರಕುಶಲ ಮೇಳ ಹಮ್ಮಿಕೊಂಡಿದೆ.

    https://chat.whatsapp.com/FCEnlTkAKCC0MGPhXtX4i4
    ಈ ಕರಕುಶಲ ಮೇಳದಲ್ಲಿ ದೇಶದಾದ್ಯಂತ ಇರುವ ಪ್ರಮುಖ ಕರಕುಶಲಕಾರರು ತಾವು ಉತ್ಪಾದಿಸಿದ ಉತ್ಪನ್ನಗಳನ್ನು ಪ್ರದರ್ಶನ ಮಾರಾಟ ಮಾಡಲಿದ್ದಾರೆ. ಕರಕುಶಲ ಕಲೆಗಳು ಈ ದೇಶದ ಪಾರಂಪರೀಕತೆ ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ಕುಂಬಾರಿಕೆ, ಬಿದಿರಿನ ಉತ್ಪನ್ನಗಳು, ಕಸೂತಿ ಬಟ್ಟೆ, ಚರ್ಮದ ಉತ್ಪನ್ನಗಳು, ಲೋಹ ಕಲಾಕಾರರು, ಮರದ ಕೆತ್ತನೆಗಳು, ಅಲಂಕಾರಿಕ ಆಭರಣಗಳು ಇತ್ಯಾದಿ ಹಲವಾರು ಕಲಾಕರರು ತಾವು ಮಾಡಿದ ಉತ್ಪನ್ನಗಳ ಪ್ರದರ್ಶನ ನಡೆಯಲಿದೆ.
    1958ನೇ ವರ್ಷದಲ್ಲಿ ಕುಂಬಾರಿಕೆ ಕೈಗಾರಿಕೆಯ ಬೆಳವಣಿಗೆಗಾಗಿ ಪ್ರಾರಂಭವಾದ ಸಹಕಾರ ಸಂಘವು ಹಂತಹಂತವಾಗಿ ಬೆಳವಣಿಗೆ ಹೊಂದಿ ತನ್ನ ಕಾರ್ಯಕ್ಷೇತ್ರವನ್ನು ನಾಲ್ಕು ಜಿಲ್ಲೆಗಳಿಗೆ ವಿಸ್ತರಿಸಿಕೊಂಡಿದೆ. ಕುಂಬಾರಿಕೆ ಕೈಗಾರಿಕೆಯ ಬೆಳವಣಿಗೆ ಅಲ್ಲದೆ ಇತರ ಎಲ್ಲಾ ಕರಕುಶಲ ವಸ್ತುಗಳಿಗೂ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈ ವಸ್ತುಪ್ರದರ್ಶನ ಆಯೋಜಿಸಲಾಗಿದೆ.
    ಈ ಕರಕುಶಲ ಮೇಳವನ್ನು ಡಿಸೆಂಬರ್‌ 24ರಂದು ಸಾಯಂಕಾಲ 4.30ಕ್ಕೆ ಸಂಸದರಾದ ಕ್ಯಾ.ಬ್ರಿಜೇಶ್ ಚೌಟ ಉದ್ಘಾಟಿಸಲಿದ್ದಾರೆ. ಶಾಸಕರಾದ ಉಮನಾಥ ಕೋಟ್ಯಾನ್, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್ ವಿ., ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಡಾ.ಅರುಣ್ ಕುಮಾರ್ ಶೆಟ್ಟಿ, ಕರಕುಶಲ ಪ್ರಾದೇಶಿಕ ಆಯುಕ್ತರಾದ ಲಕ್ಷ್ಮಣ್ ರಾವ್ ಅತುಕುರಿ, ಕರಕುಶಲ ಸೇವಾ ಕೇಂದ್ರ ಮಂಗಳೂರು ಇದರ ಸಹಾಯಕ ನಿರ್ದೇಶಕರಾದ ರಾಜೇಶ್ವರಿ ಕೆ.ಎಂ., ಜಿಲ್ಲಾ ಕೈಗಾರಿಕಾ ಕೇಂದ್ರ ಮಂಗಳೂರು ಇದರ ಜಂಟಿ ನಿರ್ದೇಶಕರಾದ ಗೋಕುಲ್‌ದಾಸ್‌ ನಾಯಕ್, ಸಹಕಾರ ಸಂಘಗಳ ಉಪ ನಿಬಂಧಕ ಎಚ್‌.ಎನ್‌ ರಮೇಶ್, ಮೂಡುಶೆಡ್ಡೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅನಿಲ್ ಕುಮಾರ್ ಭಾಗವಹಿಸಲಿದ್ದಾರೆ. ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ಅಧ್ಯಕ್ಷರಾದ ಭಾಸ್ಕರ ಎಂ ಪೆರುವಾಯಿ ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

    ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

    EMAIL: sahakaraspandana@gmail.com

    Gandhi Shilpa Bazar Karakushala Vastu Pradarshana Kumbarara Gudi Kaigarika Sahakara Sangha Putturu Pilikula
    Previous Articleಆತ್ಮಶಕ್ತಿ ಸಹಕಾರಿಯ ಆರೋಗ್ಯ ಶಿಬಿರಗಳಿಂದ ಜನರಿಗೆ ತುಂಬ ಅನುಕೂಲ
    Next Article ಸಹಕಾರ ಉನ್ನತ ಡಿಪ್ಲೋಮಾ (HDCM) ತರಬೇತಿಗೆ ಅರ್ಜಿ ಆಹ್ವಾನ

    Related Posts

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.