ಮಂಗಳೂರು: ಸಹಕಾರಿ ಸಂಘಗಳು ಸಾಮಾಜಿಕ ಸೇವೆಯಲ್ಲೂ ತೊಡಗಿಸಿಕೊಳ್ಳುತ್ತವೆ ಎಂಬ ಮಾದರಿ ಸಂದೇಶದೊಂದಿಗೆ ಇಲ್ಲಿನ ಮಿರಾಕಲ್ಸ್ ಆಫ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘವು ಕ್ರಿಸ್‌ಮಸ್ ಹಬ್ಬದ ವಿಶೇಷವಾಗಿ ಆಹಾರ ವಿತರಣಾ ಸೇವಾ ಕಾರ್ಯ ಹಮ್ಮಿಕೊಂಡಿತ್ತು.
https://chat.whatsapp.com/FCEnlTkAKCC0MGPhXtX4i4
ಮಂಗಳೂರಿನ ವೆನ್‌ಲಾಕ್ ಮತ್ತು ಲೇಡಿಗೋಶನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ರೋಗಿಗಳ ಸುಮಾರು 600ರಷ್ಟು ಪರಿಚಾರಕರಿಗೆ ಶನಿವಾರ ಆಹಾರ ವಿತರಣಾ ಸೇವೆಯ ಮೂಲಕ ಊಟದ ವ್ಯವಸ್ಥೆ ಮಾಡಿತ್ತು. ಎಂ ಫ್ರೆಂಡ್ಸ್ ತಂಡ ಸಹಯೋಗ ನೀಡಿತ್ತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ನಿರ್ದೇಶಕರಾದ ಭಾರತಿ ಜಿ. ಭಟ್ ಆಗಮಿಸಿದ್ದರು. ಎಂ ಫ್ರೆಂಡ್ಸ್‌ನ ಕಾರ್ಯಕರ್ತರಾದ ಹನೀಫ್ ಹಾಜಿ, ರಶೀದ್, ಸಲೀಮ್ ಉಳ್ಳಾಲ, ಮಿರಾಕಲ್ಸ್ ಸಹಕಾರಿಯ ಆಡಳಿತ ಮಂಡಳಿ ಅಧ್ಯಕ್ಷರಾದ ಜ್ಯೂಸ್ ಪಾಲ್ ಬಿ.ವೇಗಸ್, ವ್ಯವಸ್ಥಾಪಕ ನಿರ್ದೇಶಕರಾದ ಮೊಹಮ್ಮದ್ ಇಕ್ಬಾಲ್ ಶೇಖ್, ಶಾಖಾ ವ್ಯವಸ್ಥಾಪಕರಾದ ಜೈಸನ್ ಆಲ್ವಿನ್ ಪಿಂಟೋ ಹಾಗೂ ಸಹಕಾರಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
EMAIL: sahakaraspandana@gmail.com


