ಪರಿಸರ ಸ್ವಚ್ಛತೆಗಾಗಿ ಎಲ್ಲರಲ್ಲೂ ಜಾಗೃತಿ: ಡಾ. ಎಸ್ ಆರ್ ಹರೀಶ್ ಆಚಾರ್ಯ ಅಭಿಪ್ರಾಯ
ಕಾರ್ಕಳ: ಸ್ವಚ್ಛತೆಯ ಜಾಗೃತಿ ಪ್ರತಿಯೊಬ್ಬರ ಮೂಲಭೂತ ಕರ್ತವ್ಯವಾಗಬೇಕು. ನಮ್ಮ ಮನೆಯ ಕಸದ ನಿರ್ವಹಣೆಯ ಜವಾಬ್ದಾರಿಯನ್ನು ನಾವು ಕಸ ಹುಟ್ಟುವ ಮೂಲದಲ್ಲೇ ಸಮರ್ಪಕವಾಗಿ ನಿರ್ವಹಣೆ ಮಾಡಬೇಕು. ಆಗ ನಮ್ಮ ಪರಿಸರ ಸ್ವಚ್ಛ ಪರಿಸರವಾಗುತ್ತದೆ ಎಂದು ವಿಶ್ವಕರ್ಮ ಸಹಕಾರ ಬ್ಯಾಂಕ್ ಅಧ್ಯಕ್ಷರಾದ ಡಾ. ಎಸ್ ಆರ್ ಹರೀಶ್ ಆಚಾರ್ಯ ಹೇಳಿದರು.
ವಿಶ್ವಕರ್ಮ ಸಹಕಾರ ಬ್ಯಾಂಕಿನ ಕಾರ್ಕಳ ಶಾಖೆಯ ಆಶ್ರಯದಲ್ಲಿ “ಸ್ವಚ್ಛತಾ ಹೀ ಸೇವಾ” ಧ್ಯೇಯದೊಂದಿಗೆ ಭಾನುವಾರ ನಡೆದ 13ನೇ ಸ್ವಚ್ಛ ಭಾರತ್ ಶ್ರಮದಾನದಲ್ಲಿ ಮಾತನಾಡಿದರು.
https://chat.whatsapp.com/FCEnlTkAKCC0MGPhXtX4i4
ಕಾರ್ಕಳ ಜೈನ ಮಠದ ಸ್ವಸ್ತಿ ಶ್ರೀ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವದಿಸಿದರು. ಜೈನ್ ಮಿಲನ್ ಕಾರ್ಕಳದ ಅಧ್ಯಕ್ಷರಾದ ಅಶೋಕ್ ಎಚ್ ಎಂ., ಜೆಸಿಐ ಕಾರ್ಕಳದ ಅಧ್ಯಕ್ಷರಾದ ಶ್ವೇತಾ ಎಸ್ ಜೈನ್ ಮತ್ತು ರೋಟರಿ ಕ್ಲಬ್ ಕಾರ್ಕಳದ ಪಬ್ಲಿಕ್ ಇಮೇಜ್ ಇದರ ಅಧ್ಯಕ್ಷರಾದ ರೊಟೇರಿಯನ್ ಪಿಹೆಚ್ಎಫ್ ರೇಖಾ ಉಪಾಧ್ಯಾಯ ಇವರು ಹಸಿರು ನಿಶಾನೆ ತೋರಿಸಿ ಶ್ರಮದಾನಕ್ಕೆ ಚಾಲನೆ ನೀಡಿದರು.
ಕಾರ್ಕಳ ಜೈನ ಮಠ, ಚತುರ್ಮುಖ ಬಸದಿ ಪರಿಸರ ಹಾಗೂ ಗೊಮ್ಮಟ ಬೆಟ್ಟದ ಆಸುಪಾಸಿನ ಪರಿಸರದಲ್ಲಿ ಸ್ವಯಂಸೇವಕರು ಶ್ರಮದಾನ ಮಾಡಿದರು. ವಿಶ್ವಕರ್ಮ ಸಹಕಾರ ಬ್ಯಾಂಕಿನ ಉಪಾಧ್ಯಕ್ಷರಾದ ಜಗದೀಶ್ ಆಚಾರ್ಯ ಪಡುಪಣಂಬೂರು, ನಿರ್ದೇಶಕರಾದ ಡಿ.ಭಾಸ್ಕರ ಆಚಾರ್ಯ, ಬೆಳುವಾಯಿ ಸೀತಾರಾಮ ಆಚಾರ್ಯ, ಭರತ್ ನಿಡ್ಪಳ್ಳಿ, ಜಿನವಾಣಿ ಮಹಿಳಾ ಒಕ್ಕೂಟದ ಅಧ್ಯಕ್ಷರಾದ ವಿನಯ ವೈ ಆರಿಗ ಮತ್ತು ಸದಸ್ಯರು ಶಿವಭಕ್ತ ಭಜನಾ ಮಂಡಳಿ ದಾನಶಾಲೆ ಇದರ ಪದಾಧಿಕಾರಿಗಳು ಹಾಗೂ ಸದಸ್ಯರು, ಸ್ವಚ್ಛ ಬ್ರಿಗೇಡ್ ಕಾರ್ಕಳದ ಸಂಯೋಜಕರಾದ ಫೆಲಿಕ್ಸ್ ಜೋಸೆಫ್ ವಾಸ್, ಪದಾಧಿಕಾರಿಗಳಾದ ರಾಜೇಂದ್ರ ಅಮೀನ್, ಜಯರಾಮ, ನಿಖಿಲ್ ಕುಮಾರ್ ಹಾಗೂ ಸದಸ್ಯರು, ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕರ್ತರಾದ ಗುಣವರ್ಮ ಜೈನ್, ಹರೀಶ್ ಆಚಾರ್ಯ ಹಾಗೂ ಸತೀಶ್ ಆಚಾರ್ಯ, ರೋಟರಿ ಕ್ಲಬ್, ಲಯನ್ಸ್ ಕ್ಲಬ್ ಹಾಗೂ ಜೆಸಿಐ ಸದಸ್ಯರು, ಸಿಎ ಪ್ರಭಾತ್, ಕಾರ್ಕಳ ಟೈಗರ್ಸ್ ಪದಾಧಿಕಾರಿಗಳು ಹಾಗೂ ಸದಸ್ಯರು, ಕಾರ್ಕಳ ತಾಲೂಕು ಚಿನ್ನದ ಕೆಲಸಗಾರರ ಸಂಘದ ಅಧ್ಯಕ್ಷರಾದ ಎಂ.ರಮೇಶ್ ಆಚಾರ್, ಅಧ್ಯಕ್ಷರು ಮತ್ತು ಸದಸ್ಯರು, ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ಜಿಲ್ಲಾಧ್ಯಕ್ಷರಾದ ಪ್ರಕಾಶ್ ರಾವ್, ಕಾರ್ಕಳ ಕನೆಕ್ಟ್‌ನ ವಿಜೇತ್, ಶ್ರೀ ಭುವನೇಂದ್ರ ಕಾಲೇಜಿನ ರೇಂಜರ್ಸ್ ಆಂಡ್ ರೋವರ್ಸ್‌ನ ಪ್ರದರ್ಶ ಕೆ, ವಿಶ್ವಕರ್ಮ ಸಹಕಾರ ಬ್ಯಾಂಕಿನ ಕಾರ್ಕಳ ಶಾಖೆಯ ಶಾಖಾಧಿಕಾರಿ ನಿತಿನ್ ಕೆ. ಹಾಗೂ ಸಿಬ್ಬಂದಿಗಳು, ಬ್ಯಾಂಕಿನ ಸದಸ್ಯರು, ಗ್ರಾಹಕರು ಹಾಗೂ ಹಿತೈಷಿಗಳು ಭಾಗವಹಿಸಿ ಶ್ರಮದಾನದಲ್ಲಿ ಕೈ ಜೋಡಿಸಿ ಸಹಕರಿಸಿದರು.

ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

