ಮಾಸ್ ಲಿಮಿಟೆಡ್ ಅಧ್ಯಕ್ಷ ಸಹಕಾರ ರತ್ನ ಕೆ.ಸೀತಾರಾಮ ರೈ ಸವಣೂರು ಹೇಳಿಕೆ
ಸುಳ್ಯ: ಗ್ರಾಮೀಣ ಭಾಗದ ಕೃಷಿಕರು ಬೆಳೆಯುವ ಅಡಕೆಗೆ ಉತ್ತಮ ದರ ನೀಡಲು ಮಾಸ್ ಸಂಸ್ಥೆ ಬದ್ಧವಾಗಿದೆ. ಆದ್ದರಿಂದ ಮಾಸ್ ಅಡಕೆ ಖರೀದಿ ಕೇಂದ್ರದ ಪ್ರಯೋಜನವನ್ನು ರೈತರು ಪಡೆದುಕೊಳ್ಳಬೇಕು ಎಂದು ಮಂಗಳೂರು ಮಾಸ್ ಲಿಮಿಟೆಡ್ ಅಧ್ಯಕ್ಷ ಸಹಕಾರ ರತ್ನ ಕೆ.ಸೀತಾರಾಮ ರೈ ಸವಣೂರು ಹೇಳಿದರು.
https://chat.whatsapp.com/GnJ3FvCten7JlVtjNJYA58
ಮಂಗಳೂರು ಕೃಷಿಕರ ಸಹಕಾರಿ ಸಂಘ ಮಂಗಳೂರು ‘ಮಾಸ್ ಲಿಮಿಟೆಡ್’ನಿಂದ ಉಬರಡ್ಕ ಮಿತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಹಯೋಗದಲ್ಲಿ ತೆರೆಯಲಾದ ಅಡಕೆ ಖರೀದಿ ಕೇಂದ್ರ ಉದ್ಘಾಟಿಸಿ ಮಾತನಾಡಿದರು.
ಅಡಕೆ ಕೃಷಿಕರ ಹಿತ ಕಾಪಾಡುವ ಹಿತದೃಷ್ಟಿಯಿಂದ 2001ರಲ್ಲಿ ಮಾಸ್ ಸಂಸ್ಥೆ ಆರಂಭಗೊಂಡಿತು. 24 ವರ್ಷಗಳಲ್ಲಿ ಅತ್ಯುತ್ತಮ ಸೇವೆ ನೀಡಿದ್ದು, ಮಾಸ್‌ನ 12ನೇ ಅಡಕೆ ಖರೀದಿ ಕೇಂದ್ರ ಇಲ್ಲಿ ಉದ್ಘಾಟನೆಯಾಗಿದೆ. ಸುಳ್ಯದಲ್ಲಿ ಸುಸಜ್ಜಿತ ಅಡಕೆ ಸಂಸ್ಕರಣಾ ಘಟಕ ಕಾರ್ಯಾಚರಿಸುತ್ತಿದೆ ಎಂದು ಹೇಳಿದರು.
ಉಬರಡ್ಕ ಮಿತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ದಾಮೋದರ ಗೌಡ ಮದುವೆಗದ್ದೆ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಸರ್ಕಾರದ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಪಿ.ಸಿ.ಜಯರಾಮ ಅವರನ್ನು ಸನ್ಮಾನಿಸಲಾಯಿತು. ಮಾಸ್ ಸಂಸ್ಥೆ ಅಧ್ಯಕ್ಷ ಕೆ.ಸೀತಾರಾಮ ರೈ ಸವಣೂರು, ನಿರ್ದೇಶಕ ನಿತ್ಯಾನಂದ ಮುಂಡೋಡಿ ಅವರನ್ನು ಸನ್ಮಾನಿಸಲಾಯಿತು. ಉಬರಡ್ಕ ಮಿತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಪೂರ್ಣಿಮಾ, ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಸ್ಥಾಪಕಾಧ್ಯಕ್ಷ ಪಿ.ಸಿ.ಜಯರಾಮ, ಮಾಸ್ ಸಂಸ್ಥೆ ನಿರ್ದೇಶಕ ನಿತ್ಯಾನಂದ ಮುಂಡೋಡಿ, ಉಬರಡ್ಕ ನರಸಿಂಹ ದೇವಸ್ಥಾನದ ಮೊಕ್ತೇಸರರಾದ ಜತ್ತಪ್ಪ ಗೌಡ, ಉಬರಡ್ಕ- ಮಿತ್ತೂರು ಜೋಡು ದೈವಗಳ ದೈವಸ್ಥಾನ ಅಧ್ಯಕ್ಷ ವೆಂಕಟ್ರಮಣ ಕೆದಂಬಾಡಿ, ಸುಳ್ಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ರವೀಂದ್ರ, ಡಿಸಿಸಿ ಬ್ಯಾಂಕ್ ವಲಯ ಮೇಲ್ವಿಚಾರಕ ರತನ್, ಸಿಇಒ ಜಯಪ್ರಕಾಶ್ ಯು., ಮಾಸ್‌ನ ಮುಖ್ಯ ಮಾರುಕಟ್ಟೆ ಅಧಿಕಾರಿ ಕೆ.ಎಂ.ಲೋಕೇಶ್ ಮತ್ತಿತರರು ಹಾಜರಿದ್ದರು.
ಮಾಸ್ ಸಿಇಒ ಟಿ.ಮಹಾಬಲೇಶ್ವರ ಭಟ್ ಸ್ವಾಗತಿಸಿದರು. ದೀಕ್ಷಿತಾ ಪ್ರಾರ್ಥಿಸಿದರು. ವಿಜಯಕುಮಾರ್ ಉಬರಡ್ಕ ಕಾರ್ಯಕ್ರಮ ನಿರೂಪಿಸಿದರು. ಉಬರಡ್ಕ ಮಿತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ರಾಜೇಶ್ ಭಟ್ ನೆಕ್ಕಿಲ ವಂದಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

