Close Menu
    Top News

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಊರಿನ ಬೆಳವಣಿಗೆಯಲ್ಲಿ ಸಹಕಾರಿ ಸಂಘಗಳ ಪಾತ್ರ ಮಹತ್ತರ
    News

    ಊರಿನ ಬೆಳವಣಿಗೆಯಲ್ಲಿ ಸಹಕಾರಿ ಸಂಘಗಳ ಪಾತ್ರ ಮಹತ್ತರ

    adminBy adminDecember 9, 2025

    ರೋಯಲ್‌ ಸೌಹಾರ್ದ ಸಹಕಾರಿ ಸಂಘದ ಕೆಯ್ಯೂರು ಶಾಖೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಸವಣೂರು ಸೀತಾರಾಮ ರೈ ಹೇಳಿಕೆ

    ಪುತ್ತೂರು: ಆರ್ಥಿಕ ವ್ಯವಸ್ಥೆಯನ್ನು ಗಮನಿಸಿದರೆ ದಕ್ಷಿಣ ಕನ್ನಡ ಜಿಲ್ಲೆಯಲಿ ಶೇ.38ರಷ್ಟು ವ್ಯವಸ್ಥೆಗಳು ಸಹಕಾರಿ ಕ್ಷೇತ್ರದಿಂದಲೇ ನಡಯುತ್ತಿವೆ. ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಯ ವಿಚಾರದಲ್ಲಿ ಸಹಕಾರಿ ಕ್ಷೇತ್ರವು ಪ್ರಮುಖ ಪಾತ್ರ ವಹಿಸುತ್ತದೆ. ಒಬ್ಬ ವ್ಯಕ್ತಿ ಸೇರಿದಂತೆ ಊರಿನ ಅಭಿವೃದ್ಧಿಯಲ್ಲಿ ಸಹಕಾರಿ ಸಂಘಗಳ ಪಾತ್ರ ಮಹತ್ತರವಾಗಿದೆ ಎಂದು ಆದರ್ಶ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಸವಣೂರು ಕೆ.ಸೀತಾರಾಮ ರೈ ಹೇಳಿದರು.

    https://chat.whatsapp.com/JVAtKKe2M19AFO3W5629ZS?mode=ems_copy_t

    ಡಿ.6ರಂದು ಕೆಯ್ಯೂರು ಬ್ರಹ್ಮಶ್ರೀ ಕಾಂಪ್ಲೆಕ್ಸ್‌ನಲ್ಲಿ ರಾಜ್ಯಮಟ್ಟದ ಸೌಹಾರ್ದ ಸಹಕಾರ ಸಂಘ ರೋಯಲ್‌ ಸೌಹಾರ್ದ ಸಹಕಾರಿ ಸಂಘದ ಕೆಯ್ಯೂರು ಶಾಖೆಯ ಉದ್ಘಾಟನಾ ಸಮಾರಂಭದಲ್ಲಿ ಕಚೇರಿ ಹಾಗೂ ಭದ್ರತಾ ಕೊಠಡಿಯನ್ನು ಉದ್ಘಾಟಿಸಿ ಮಾತನಾಡಿದರು. ರಾಜ್ಯಮಟ್ಟದ ಸಹಕಾರಿ ಸಂಘವಾಗಿರುವ ರೋಯಲ್‌ ಸೌಹಾರ್ದ ಸೌಹಾರ್ದ ಸಹಕಾರಿಯ ಎರಡನೇ ಶಾಖೆಯು ಕೆಯ್ಯೂರಿನಲ್ಲಿ ಆರಂಭವಾಗಿರುವುದು ಈ ಗ್ರಾಮದ ಜನರಿಗೆ ಸಿಕ್ಕಿದ ಭಾಗ್ಯವಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಶಾಖೆಗಳು ಆರಂಭಗೊಳ್ಳಲಿ ಎಂದು ಶುಭ ಹಾರೈಸಿದರು.
    ಸಹಕಾರಿ ಸಂಘದ ಉಪಾಧ್ಯಕ್ಷರಾದ ಜಗಜೀವನ್‌ದಾಸ್‌ ರೈಯವರು ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘವು 2015-16ರಲ್ಲಿ ಪುತ್ತೂರಿನಲ್ಲಿ ಆರಂಭವಾಗಿದ್ದು, ಮುಂದಿನ 2026-25ನೇ ಸಾಲಿಗೆ ದಶಮಾನೋತ್ಸವ ಸಂಭ್ರಮದಲ್ಲಿದೆ. ಮುಂದಿನ ಹಂತದಲ್ಲಿ ಮತ್ತೊಂದು ಶಾಖೆಯನ್ನು ತೆರೆಯುವ ಉದ್ದೇಶವನ್ನು ಹೊಂದಿದ್ದೇವೆ. ನಿಮ್ಮೆಲ್ಲರ ಸಹಕಾರ ಇರಲಿ ಎಂದು ಆಶಿಸಿದರು.
    ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ನಿರ್ದೇಶಕರಾದ ಭಾರತಿ ಜಿ.ಭಟ್‌ ಮಾತನಾಡಿ, ನಾವೆಲ್ಲರೂ ಕುಟುಂಬ ವ್ಯವಸ್ಥೆಯಿಂದಲೇ ಸಹಕಾರಿಗಳಾಗಿದ್ದೇವೆ. ಸಹಕಾರ ಇಲ್ಲದೆ ಜೀವನವೇ ಇಲ್ಲ. ಸಹಕಾರಿ ಕ್ಷೇತ್ರಕ್ಕೆ ದೇಶವನ್ನು ವಿಶ್ವಗುರು ಮಾಡುವ ಅದ್ಭುತ ಶಕ್ತಿ ಇದೆ. ಸೌಹಾರ್ದ ಸಹಕಾರಿಯು ಸಾಮಾಜಿಕ ಕಳಕಳಿಯನ್ನು ಹೊಂದಿರುವ ಸಂಸ್ಥೆ. ಇದರಲ್ಲಿ ವ್ಯಕ್ತಿಯ ಅಭಿವೃದ್ಧಿಯೊಂದಿಗೆ ಊರಿನ ಅಭಿವೃದ್ಧಿಯ ಧ್ಯೇಯವೂ ಇದೆ. ರೋಯಲ್‌ ಸೌಹಾರ್ದ ಸಹಕಾರಿ ಸಂಘವು ಮುಂದಿನ ದಿನಗಳಲ್ಲಿ ಉತ್ತಮ ಯಶಸ್ಸು ಪಡೆದು ರಾಜ್ಯಮಟ್ಟದ ಸಂಸ್ಥೆಯಾಗಿ ಹೆಸರು ಗಳಿಸಲಿ ಎಂದು ಶುಭ ಹಾರೈಸಿದರು.


    ಗಣಕಯಂತ್ರ ಮತ್ತು ಕೋರ್‌ ಬ್ಯಾಂಕಿಂಗ್‌ ವ್ಯವಸ್ಥೆಯನ್ನು ಉದ್ಘಾಟಿಸಿ ಮಾತನಾಡಿದ ಪರ್ಪುಂಜ ರಾಮಜಾಲು ಶ್ರೀ ಬ್ರಹ್ಮಬೈದರ್ಕಳ ಗರಡಿಯ ಆಡಳಿತ ಮೊಕ್ತೇಸರ ಕೆ.ಸಂಜೀವ ಪೂಜಾರಿ ಕೂರೇಲು ಮಾತನಾಡಿ, ರೋಯಲ್‌ ಸೌಹಾರ್ದ ಸಹಕಾರಿ ಸಂಘದ ಇಡೀ ಬೆಳವಣಿಗೆಯನ್ನು ಗಮನಿಸಿದರೆ ಮತ್ತಷ್ಟು ಶಾಖೆಯನ್ನು ತೆರೆಯುವ ಅವಕಾಶವಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಶಾಖೆ ತೆರೆಯುವಂತಾಗಲಿ ಎಂದು ಶುಭ ಹಾರೈಸಿದರು. ಪ್ರಥಮ ಶಾಖೆ ತೆರೆಯುವ ಸಂದರ್ಭದಲ್ಲೇ ಕೋರ್‌ ಬ್ಯಾಂಕಿಂಗ್‌ ವ್ಯವಸ್ಥೆಯನ್ನು ಮಾಡಿರುವ ಹೆಗ್ಗಳಿಕೆ ರೋಯಲ್‌ ಸೌಹಾರ್ದ ಸಹಕಾರಿಗೆ ಇದೆ. ಪ್ರಧಾನ ಕಚೇರಿಯಲ್ಲಿ ಖಾತೆ ಹೊಂದಿರುವ ಸದಸ್ಯರಿಗೆ ಕೆಯ್ಯೂರು ಶಾಖೆಯಲ್ಲಿ ಕೂಡ ನೇರವಾಗಿ ವ್ಯವಹಾರ ಮಾಡಬಹುದು. ಹಣವನ್ನು ಜಮೆ ಕೂಡ ಮಾಡಬಹುಉದ. ಇಂಥ ವ್ಯವಸ್ಥೆ ಮಾಡಿರುವುದರಿಂದ ಸಾಕಷ್ಟು ಜನರಿಗೆ ಪ್ರಯೋಜನವಾಗಿದೆ. ಮುಂದಿನ ಶಾಖೆಯನ್ನು ಕಾವು ಗ್ರಾಮೀಣ ಪ್ರದೇಶದಲ್ಲಿ ಮಾಡಬೇಕು ಎಂದು ಅವರು ಮನವಿ ಮಾಡಿದರು.
    ಸ್ವಸಹಾಯ ಸಂಘದ ಪುಸ್ತಕ ವಿತರಣೆ ಮಾಡಿದ ದ್ವಾರಕಾ ಕಾರ್ಪೊರೇಷನ್‌ ಲಿಮಿಟೆಡ್‌ನ ಮ್ಯಾನೇಜಿಂಗ್‌ ಡೈರೆಕ್ಟರ್‌ ಗೋಪಾಲಕೃಷ್ಣ ಭಟ್‌ ಮಾತನಾಡಿ, ಆರ್ಥಿಕ ವ್ಯವಸ್ಥೆಗೆ ಈ ಸಂಘವು ಹೊಸ ಭಾಷ್ಯ ಬರೆಯಲಿ. ಕೆಯ್ಯೂರು ಶಾಖೆ ರಾಜ್ಯಮಟ್ಟದಲ್ಲಿ ಹೆಸರು ಮಾಡಲಿ ಎಂದು ಶುಭ ಹಾರೈಸಿದರು.


    ಸ್ವಸಹಾಯ ಸಂಘ ಪುರಸ್ಕಾರ ಮಾಡಿದ ಪುತ್ತೂರು ರೋಯಲ್‌ ಸೌಹಾರ್ದ ಸಹಕಾರಿಯ ಸ್ಥಾಪಕಾಧ್ಯಕ್ಷ ಸಹಕಾರ ರತ್ನ ದಂಬೆಕ್ಕಾನ ಸದಾಶಿವ ರೈ ಮಾತನಾಡಿ, ಸಂಘದ ಆರಂಭದ ಬೆನ್ನಲ್ಲೇ ನೋಟು ಬ್ಯಾಣ್‌ ಆದ ಕಾರಣ ಸಂಘವನ್ನು ಮುನ್ನಡೆಸಲು ಕಷ್ಟವಾಯಿತು. ಇದು ಹಣವಂತರು ಹುಟ್ಟುಹಾಕಿದ ಸಂಘವಲ್ಲ, ಆ ಸಂದರ್ಭದಲ್ಲಿ ನಮ್ಮ ಜೊತೆ ಕೆಲವರು ಬೆನ್ನೆಲುಬಾಗಿ ನಿಂತು ಸಹಕಾರ ನೀಡಿದ್ದಾರೆ. ಅವರನ್ನು ನಾವು ಎಂದಿಗೂ ಮರೆಯುವುದಿಲ್ಲ. ಈ ಸಂಘವನ್ನು ಉತ್ತಮವಾಗಿ ಮುನ್ನಡೆಸಿ ಶಾಖೆ ತೆರೆಯಲು ಮಾಡಿದ ಆಡಳಿತ ಮಂಡಳಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
    ಉಳಿತಾಯ ಖಾತೆ ಪುಸ್ತಕ ವಿತರಿಸಿ ಮಾತನಾಡಿದ ಕೆಯ್ಯೂರು ಗ್ರಾಮ ಪಂಚಾಯತ್‌ ಅಧ್ಯಕ್ಷ ಶರತ್‌ ಕುಮಾರ್‌ ಮಾಡಾವು, ರಾಜ್ಯಮಟ್ಟದ ಸೌಹಾರ್ದ ಸಹಕಾರಿಯಾಗಿರುವ ರೋಯಲ್‌ ಸೌಹಾರ್ದ ಸಹಕಾರಿ ಸಂಘದ ಶಾಖೆ ಕೆಯ್ಯೂರಿನಲ್ಲಿ ಆರಂಭಗೊಂಡು ಗ್ರಾಮಕ್ಕೆ ಹೆಮ್ಮೆ ತಂದಿದೆ. ಸ್ವಾಭಿಮಾನಿ ಬದುಕಿಗೆ ಸೌಹಾರ್ದ ಸಹಕಾರಿ ಸಂಘಗಳ ಕೊಡುಗೆ ಮಹತ್ತರವಾದುದು. ಈ ನಿಟ್ಟಿನಲ್ಲಿ ದಂಬೆಕ್ಕಾನ ಸದಾಶಿವ ರೈಯವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.
    ಪ್ರಥಮ ಸಾಲ ವಿತರಣೆ ಮಾಡಿದ ರೋಯಲ್‌ ಸೌಹಾರ್ದ ಸಹಕಾರಿ ಸಂಘದ ಕೆಯ್ಯೂರು ಶಾಖೆಯ ಸಲಹಾ ಸಮಿತಿ ಅಧ್ಯಕ್ಷರಾದ ಉಮಾಕಾಂತ್‌ ಬೈಲಾಡಿ ಮಾತನಾಡಿ, ಸಾಲದ ವ್ಯವಸ್ತೆಯಿಂದ ಹಿಡಿದು ಕೆಯ್ಯೂರು ಶಾಖೆಗಳಲ್ಲಿ ಗ್ರಾಹಕರಿಗೆ ಎಲ್ಲಾ ವ್ಯವಸ್ಥೆಗಳೂ ಲಭ್ಯವಿರುತ್ತದೆ. ಗ್ರಾಹಕರು ಸಂಘಕ್ಕೆ ಬಂದು ಅಕೌಂಟ್‌ ತೆರೆಯುವ ಮೂಲಕ ಸಂಘದಿಂದ ದೊರೆಯುವ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ತಿಳಿಸಿದರು.
    ಅಧ್ಯಕ್ಷತೆ ವಹಿಸಿ ಮಾತನಾಡಿದ ರೋಯಲ್‌ ಸೌಹಾರ್ದ ಸಹಕಾರಿ ಸಂಘದ ಕೆಯ್ಯೂರು ಶಾಖೆಯ ಅಧ್ಯಕ್ಷರಾದ ಎ.ಕೆ ಜಯರಾಮ ರೈಯವರು ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಸಹಕಾರಿ ಕ್ಷೇತ್ರ ದಿನದಿಂದ ದಿನಕ್ಕೆ ಬೆಲೆಯುತ್ತಿದ್ದು, ಕೆಯ್ಯೂರಿನಂಥ ಗ್ರಾಮೀಣ ಪ್ರದೇಶದಲ್ಲಿ ರೋಯಲ್‌ ಸೌಹಾರ್ದ ಸಹಕಾರಿ ಸಂಘವನ್ನು ಎಲ್ಲರ ಸಹಕಾರದೊಂದಿಗೆ ಆರಂಭಿಸಿದ್ದೇವೆ. ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರ ಈ ಸಂಘದ ಮೇಲಿರಲಿ. ಕೆಯ್ಯೂರು ಸಂಘದ ಯಶಸ್ಸಿನ ಬೆನ್ನಲ್ಲೇ ಕಾವು ಭಾಗದಲ್ಲೂ ಒಂದು ಶಾಖೆ ತೆರೆಯಲಿದ್ದೇವೆ. ಇದಕ್ಕೆ ಎಲ್ಲರ ಸಹಕಾರ ಇರಲಿ ಎಂದು ಆಶಿಸಿದರು.


    ಪಿಗ್ಮಿ ಕಸ್ಟಮ್‌ ಆಪ್‌ ಬಿಡುಗಡೆ ಮಾಡಿದ ಕೆಯ್ಯೂರು ಬ್ರಹ್ಮಶ್ರೀ ಕಾಂಪ್ಲೆಕ್ಸ್‌ ಮಾಲೀಕ, ಕೆಯ್ಯೂರು ಗ್ರಾಮ ಪಂಚಾಯತ್‌ ಸದಸ್ಯರಾದ ಜಯಂತ ಪೂಜಾರಿ ಕೆಂಗುಡೇಲು, ರೋಯಲ್‌ ಸೌಹಾರ್ದ ಸಹಕಾರಿಯ ಸಲಹಾ ಸಮಿತಿ ಉಪಾಧ್ಯಕ್ಷ, ಕೆಯ್ಯೂರು ಗ್ರಾಮ ಪಂಚಾಯತ್‌ ಸದಸ್ಯ ಅಬ್ದುಲ್‌ ಖಾದರ್‌ ಮೇರ್ಲ, ಕೆಯ್ಯೂರು ಶಾಖಾ ವ್ಯವಸ್ಥಾಪಕ ರಕ್ಷಿತ್‌ ಯು., ರೋಯಲ್‌ ಸೌಹಾರ್ದ ಸಹಕಾರಿಯ ಬಿರ್ದೇಶಕ ಆನಂದ ಎಂ.ಬೆಂಗಳೂರು, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಅಭಿವೃದ್ಧಿ ಅಧಿಕಾರಿ ನಂದನ್‌ ಕುಮಾರ್‌ ಉಪಸ್ಥಿತರಿದ್ದರು. ಪ್ರಭಾ ಎಸ್‌.ರೈ ಶಂಕರ ಭಟ್‌ ಅವರಿಗೆ ಠೇವಣಿ ಪತ್ರ ಹಸ್ತಾಂತರ ಮಾಡಲಾಯಿತು. ಅನ್ನಪೂರ್ಣೇಶ್ವರಿ ಸ್ವಸಹಾಯ ಸಂಘದ ಅಧ್ಯಕ್ಷೆ ಜ್ಯೋತಿ ಕೆ.ಎಲ್‌, ಕಾರ್ಯದರ್ಶಿ ಪ್ರೇಮಾ ಅವರಿಗೆ ಸ್ವಸಹಾಯ ಸಂಘದ ಪುಸ್ತಕ ವಿತರಣೆ, ಆಯೂಬ್‌ ಎಂ ಅವರಿಗೆ ಪ್ರಥಮ ಸಾಲದ ಪತ್ರ ವಿತರಣೆ ಮಾಡಲಾಯಿತು. ಮೀನಾಕ್ಷಿ ವಿ. ರೈ ಅವರಿಗೆ ಪಿಗ್ಮಿ ಕಸ್ಟಮ್‌ ಆಫ್‌ ವಿತರಣೆ ಮಾಡಲಾಯಿತು. ನೂತನ ಶಾಖಾ ಕಚೇರಿಗೆ ಫರ್ನೀಚರ್‌, ಕಂಪ್ಯೂಟರ್‌ ವ್ಯವಸ್ಥೆ, ಸಿಸಿಟಿವಿ ಇತ್ಯಾದಿಗಳ ಜೋಡಣೆ ಸೇರಿದಂತೆ ವಿವಿಧ ರೀತಿಯ ಕೆಲಸಗಳನ್ನು ನಿರ್ವಹಿಸಿದ ಸತ್ಯನಾರಾಯಣ ಆಚಾರ್ಯ, ಆನಂದ ಆಚಾರ್ಯ, ಅನಿಲ್‌ ಕುಮಾರ್‌, ಪ್ರಜ್ವಲ್‌ ನಾಯಕ್‌, ನವೀನ್‌ ರೈ, ಮೋನಪ್ಪ ಪೂಜಾರಿ, ಮನಮೋಹನ್‌, ಬಾಲಕೃಷ್ಣ ಪೂಜಾರಿ ಪಲ್ಲತ್ತಡ್ಕ, ಅಶ್ರಫ್‌ ಮಾಡಾವು, ಹರೀಶ್‌ ಇವರನ್ನು ಗೌರವಿಸಲಾಯಿತು. ಅದೃಷ್ಟ ಗ್ರಾಹಕ ಕೂಪನ್‌ ಡ್ರಾದಲ್ಲಿ ಚಂದ್ರಶೇಖರ್‌ ಪೂಜಾರಿಯವರು ವಿಜೇತರಾದರು. ಗೌರವ ನಿರ್ದೇಶಕ ಶ್ರೀಪತಿ ಭಟ್‌ ಕೆಯ್ಯೂರು ಪ್ರಾರ್ಥಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಯಶವಂತ ಕುಮಾರ್‌ ಸ್ವಾಗತಿಸಿದರು. ರಮೇಶ್‌ ರೈ ಬೋಳೋಡಿ, ಬಾಲಕೃಷ್ಣ ರೈ ನೆಟ್ಟಾಳ, ಶಿವಶ್ರೀ ರಂಜನ್‌ ರೈ ದೇರ್ಲ, ಶೇಖರ ಪರವ, ಬಾಬು ಗೌಡ, ದೇವಪ್ಪ ಗೌಡ, ಸಂದೀಪ್‌ ರೈ ಚಿಲ್ಮೆತ್ತಾರು, ವಿಶ್ವನಾಥ ನಾಯ್ಕ್‌, ಭವಾನಿ ಬಾಲಕೃಷ್ಣ, ವಾಣಿಶ್ರೀ, ಯಶೋಧರ ಜೈನ್‌, ಬಟ್ಯಪ್ಪ ರೈ ದೇರ್ಲ, ಅಕ್ಷಯ ರೈ ದಂಬೆಕ್ಕಾನ ಭಾಗವಹಿಸಿದ್ದರು. ಸಂಸ್ಥೆಯ ನಿರ್ದೇಶಕ ಆನಂದ ರೈ ದೇವಿನಗರ ವಂದಿಸಿದರು. ಶಿಕ್ಷಕ ಬಾಲಕೃಷ್ಣ ಪೊರ್ದಾಳ್‌ ಕಾರ್ಯಕ್ರಮ ನಿರೂಪಿಸಿದರು.

    ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

    EMAIL: sahakaraspandana@gmail.com

    Brahmashree Complex Keyyuru Cooperative Department Cooperative Registrar Dambekana Sadashiva Rai Royal Souhrada Sahakari Sangha Putturu Savanuru Seetharama rai Souharda Sahakari
    Previous Articleಸಹಕಾರ ಎಂದರೆ ಒಂದು ಕಲ್ಪವೃಕ್ಷ
    Next Article ಸಪ್ತರ್ಷಿ ಸೌಹಾರ್ದ ಸಹಕಾರಿ ಸಂಘದ ದಿನಚರಿ ಪಂಚಾಂಗ ಬಿಡುಗಡೆ

    Related Posts

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.