Close Menu
    Top News

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಡಿ. 6ರಂದು ಸಹಕಾರ ರತ್ನ ಪುರಸ್ಕೃತ ಭಾಸ್ಕರ ಕೋಟ್ಯಾನ್‌ರಿಗೆ ನಾಗರಿಕ ಪೌರ ಸನ್ಮಾನ “ಭಾಸ್ಕರಾಭಿನಂದನ”
    News

    ಡಿ. 6ರಂದು ಸಹಕಾರ ರತ್ನ ಪುರಸ್ಕೃತ ಭಾಸ್ಕರ ಕೋಟ್ಯಾನ್‌ರಿಗೆ ನಾಗರಿಕ ಪೌರ ಸನ್ಮಾನ “ಭಾಸ್ಕರಾಭಿನಂದನ”

    adminBy adminDecember 4, 2025

    ಮಂಗಳೂರು: ಕರ್ನಾಟಕ ರಾಜ್ಯ ಸರ್ಕಾರದ ಪ್ರತಿಷ್ಠಿತ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ಸಹಕಾರ ಕ್ಷೇತ್ರ ಹಾಗೂ ಕಂಬಳ ಕ್ಷೇತ್ರದ ಸಾಧಕರಾದ ಕೊಳಕೆ ಇರ್ವತ್ತೂರು ಭಾಸ್ಕರ ಎಸ್‌.ಕೋಟ್ಯಾನ್‌ ಅವರಿಗೆ ನಾಗರಿಕ ಪೌರ ಸನ್ಮಾನ “ಭಾಸ್ಕರಾಭಿನಂದನ”  ಕಾರ್ಯಕ್ರಮ ಡಿಸೆಂಬರ್‌ 6ರಂದು ಮಂಗಳೂರು ಪುರಭವನದಲ್ಲಿ ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ.

    https://chat.whatsapp.com/JVAtKKe2M19AFO3W5629ZS?mode=ems_copy_t

    ಈ ಬಗ್ಗೆ ಗುರುವಾರ ಮಂಗಳೂರು ಪ್ರೆಸ್‌ ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಭಾಸ್ಕರಾಭಿನಂದನ ಸಮಿತಿಯ ಸಂಚಾಲಕರಾದ, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷರಾದ ಚಿತ್ತರಂಜನ್‌ ಬೋಳಾರ್‌, ಭಾಸ್ಕರ್‌ ಎಸ್‌.ಕೋಟ್ಯಾನ್‌ ಅವರು ಸಹಕಾರ, ಕಂಬಳ, ಕೃಷಿ, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಕ್ಕೆ ಕೊಡುಗೆ ನೀಡಿರುವ ದಕ್ಷಿಣ ಕನ್ನಡ ಜಿಲ್ಲೆಯ ಅಪೂರ್ವ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಅವರಿಗೆ ಈ ಬಾರಿಯ ಸಹಕಾರ ರತ್ನ ಪ್ರಶಸ್ತಿ ಲಭಿಸಿದೆ. ಈ ಹಿನ್ನೆಲೆಯಲ್ಲಿ ಅವರ ಅಭಿಮಾನಿ ಬಳಗದಿಂದ ನಾಗರಿಕ ಪೌರಸನ್ಮಾನ ಕಾರ್ಯಕ್ರಮ ಡಿ.6ರಂದು ನಡೆಯಲಿದೆ ಎಂದು ಹೇಳಿದರು. ಮಧ್ಯಾಹ್ನ 3ರಿಂದ ಮಂಜು ರೈ ಮೂಳೂರು ಅವರ ನೇತೃತ್ವದಲ್ಲಿ ಸಂಗೀತ, ಹಾಸ್ಯ. ಲಹರಿ ಕಾರ್ಯಕ್ರಮ ಆಯೋಜಿಸಲಾಗಿದೆ. 3.45ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಸೋಲೂರು ಮಠದ ಆರ್ಯ ಈಡಿಗ ಮಹಾಸಂಸ್ಥಾನದ ಪೀಠಾಧಿಪತಿಗಳಾದ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಆಶೀರ್ವಚನ ನೀಡುವರು. ಮಾಜಿ ಸಚಿವರಾದ ಕಾರ್ಕಳ ಶಾಸಕ ಸುನೀಲ್ ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಮಂಗಳೂರು ಸಂಸದ ಕ್ಯಾ.ಬ್ರಿಜೇಶ್ ಚೌಟ ದ್ವೀಪ ಪ್ರಜ್ವಲನೆ ಮಾಡಲಿರುವರು. ವಿಧಾನಸಭಾಧ್ಯಕ್ಷ ಯು.ಟಿ ಖಾದರ್ ಭಾಸ್ಕರಾಭಿನಂದನ ಸನ್ಮಾನ ನೆರವೇರಿಸುವರು. ಗೌರವ ಅತಿಥಿಗಳಾಗಿ ಶಾಸಕರಾದ ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜ, ಕಿಶೋರ್ ಕುಮಾರ್ ಪುತ್ತೂರು, ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್, ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಅಖಿಲ ಭಾರತ ಬಿಲ್ಲವರ ಯೂನಿಯನ್ ಅಧ್ಯಕ್ಷ ನವೀನ್‌ಚಂದ್ರ ಡಿ.ಸುವರ್ಣ, ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷ ಸೂರ್ಯಕಾಂತ್ ಜೆ.ಸುವರ್ಣ, ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ರವಿರಾಜ ಹೆಗ್ಡೆ, ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ದೀಪಾ ಕಂಫರ್ಟ್ ಆಡಳಿತ ನಿರ್ದೇಶಕರಾದ ಉರ್ಮಿಳಾ ರಮೇಶ್ ಕುಮಾರ್ ಭಾಗವಹಿಸಲಿದ್ದಾರೆ ಎಂದು ಚಿತ್ತರಂಜನ್‌ ಬೋಳಾರ್‌ ಮಾಹಿತಿ ನೀಡಿದರು.

    ವಿಶೇಷ ಆಹ್ವಾನಿತರಾಗಿ ಡಾ.ಉದಯಚಂದ್ರ ಡಿ. ಸುವರ್ಣ, ಶರತ್‌ಚಂದ್ರ ಸನಿಲ್, ಮಂಜುನಾಥ್ ಪೂಜಾರಿ, ಸದಾಶಿವ ಉಳ್ಳಾಲ್, ಹೆಚ್.ಸಾಯಿರಾಮ್, ಜಯರಾಜ್ ಸೋಮಸುಂದರ್, ಡಾ. ಸದಾನಂದ ಪೂಜಾರಿ, ಚಿತ್ತರಂಜನ್ ಗರೋಡಿ, ಶಂಕರ್ ಪೂಜಾರಿ, ಆರ್. ಪದ್ಮರಾಜ್, ಪಿತಾಂಬರ ಹೆರಾಜೆ, ರಕ್ಷಿತ್ ಶಿವರಾಂ, ಚಂದ್ರಹಾಸ ಅಡ್ಯಂತಾಯ, ಗಣೇಶ್‌ ಶೆಟ್ಟಿ, ಜಗದೀಪ್ ಡಿ. ಸುವರ್ಣ, ಅನಿಲ್ ಶೆಟ್ಟಿ ಮನ್ಯುತೋಟಗುತ್ತು, ಪ್ರಶಾಂತ್ ಸನಿಲ್, ಮನೋಜ್ ಸರಿಪಲ್ಲ, ಶರಣ್ ಪಂಪ್‌ವೆಲ್‌, ರವೀಂದ್ರ ಕಂಬಳಿ, ಸುಧೀರ್ ಕುಮಾರ್, ಗೀತಾಂಜಲಿ ಸುವರ್ಣ, ಲೀಲಾಕ್ಷ ಬಿ. ಕರ್ಕೇರ, ಜಯಂತ್ ನಡುಬೈಲ್, ಜಯವಿಕ್ರಂ, ಸುರೇಶ್ ಕೆ. ಪೂಜಾರಿ, ಎಂ.ಎಸ್. ಕೋಟ್ಯಾನ್, ಹರೀಶ್ ಜಿ. ಸಾಲ್ಯಾನ್, ಅಕ್ಷಿತ್ ಸುವರ್ಣ, ಭುವನೇಶ್ ಪಚ್ಚಿನಡ್ಕ, ಚಂದ್ರಶೇಖರ್‌ ನಾನಿಲ್, ವಾಮನ್ ಕೆ. ಮೊದಲಾದವರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

    ಭಾಸ್ಕರಾಭಿನಂದನಾ ಸಮಿತಿಯ ಪ್ರಧಾನ ಸಂಚಾಲಕರಾದ ಸದಾನಂದ ಪೂಜಾರಿ, ಸಂಚಾಲಕರಾದ ಕೆ.ಟಿ.ಸುವರ್ಣ, ಅವಿನಾಶ್ ಸುವರ್ಣ, ನಿಶಾನ್ ಪೂಜಾರಿ, ಸುಧಾಕರ ಕರ್ಕೇರ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

    ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

    EMAIL: sahakaraspandana@gmail.com

    Atmashakthi Vividhoddesha Sahakari Sangha Banking Bhaskar S Kotyan BHASKARAABHINANDANA Co Operative ministry Cooperative Cooperative Department
    Previous Articleಸಹಕಾರ ಕ್ಷೇತ್ರದ ಬೆಳವಣಿಗೆಯಲ್ಲಿ ಮಹಿಳೆಯರ ಕೊಡುಗೆ ಅಪಾರ
    Next Article ಶರ್ವಾಣಿ ಕ್ರೆಡಿಟ್ ಸೌಹಾರ್ದ ಸೊಸೈಟಿಯ ಕ್ಯಾಲೆಂಡರ್ ಬಿಡುಗಡೆ

    Related Posts

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.