ಸ್ವಚ್ಛತಾ ಶ್ರಮದಾನ ಉದ್ಘಾಟಿಸಿ ವಿಶ್ವಕರ್ಮ ಸಹಕಾರ ಬ್ಯಾಂಕಿನ ಅಧ್ಯಕ್ಷರಾದ ಡಾ. ಎಸ್ ಆರ್ ಹರೀಶ್ ಆಚಾರ್ಯ ಅಭಿಪ್ರಾಯ
ಬಂಟ್ವಾಳ: ಸ್ವಚ್ಛ ಪರಿಸರದ ನಿರ್ಮಾಣವು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವಾಗಬೇಕು. ಅದು ಸಾರ್ವತ್ರಿಕಗೊಂಡು ಜನಸಾಮಾನ್ಯರ ಚಳುವಳಿಯಾಗಬೇಕು. ಹಾಗಾದಾಗ ಮಾತ್ರ ಎಲ್ಲರ ಜವಾಬ್ದಾರಿಯುತ ಭಾಗೀದಾರಿಕೆಯಿಂದ ಸ್ವಚ್ಛ ಭಾರತ ನಿರ್ಮಾಣದ ಕನಸು ಸಾಕಾರಗೊಳ್ಳುತ್ತದೆ ಎಂದು ವಿಶ್ವಕರ್ಮ ಸಹಕಾರ ಬ್ಯಾಂಕಿನ ಅಧ್ಯಕ್ಷರಾದ ಡಾ. ಎಸ್. ಆರ್ ಹರೀಶ್ ಆಚಾರ್ಯ ಹೇಳಿದರು.
https://chat.whatsapp.com/JVAtKKe2M19AFO3W5629ZS?mode=ems_copy_t
ಅವರು ವಿಶ್ವಕರ್ಮ ಸಹಕಾರ ಬ್ಯಾಂಕಿನ ಮೆಲ್ಕಾರ್ ಶಾಖೆಯ ವತಿಯಿಂದ ಭಾನುವಾರ “ಸ್ವಚ್ಛತಾ ಹೀ ಸೇವಾ” ಧ್ಯೇಯದೊಂದಿಗೆ ನಡೆದ ಹತ್ತನೇ ಸ್ವಚ್ಛ ಭಾರತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶ್ರೀ ವೀರ ವಿಠ್ಠಲ ವೆಂಕಟ್ರಮಣ ದೇವಸ್ಥಾನ ಪಾಣೆಮಂಗಳೂರು ಇದರ ಆಡಳಿತ ಮೊಕ್ತೇಸರರಾದ ಎನ್.ಪ್ರಮೋದ್ ಭಟ್ ಮಾತನಾಡಿ, ಬ್ಯಾಂಕಿಂಗ್ ಸೇವೆಯೊಂದಿಗೆ ವಿಶ್ವಕರ್ಮ ಬ್ಯಾಂಕ್ ಸಮಾಜಮುಖಿಯಾಗಿ ಸ್ವಚ್ಛ ಭಾರತದಂತಹ ಶ್ರಮದಾನದ ಕಾರ್ಯಕ್ರಮವನ್ನು ನಿರಂತರ ಸಂಘಟಿಸುತ್ತಿರುವುದು ಪ್ರಶಂಸನೀಯ. ಇದರಲ್ಲಿ ಪರಿಸರದ ಪ್ರತೀ ಮನೆಯವರೂ ಕೈ ಜೋಡಿಸಿ ಸಹಕರಿಸುವ ಮೂಲಕ ಯಶಸ್ವಿಗೊಳಿಸೋಣ ಎಂದು ಹೇಳಿದರು.







ಬಂಟ್ವಾಳ ಎಸ್‌ವಿಎಸ್ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ವಿನೋದ್ ಹಾಗೂ ಎನ್.ಪ್ರಮೋದ್ ಭಟ್ ಜೊತೆಗೂಡಿ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿಸಿದರು. ಪಾಣೆಮಂಗಳೂರು ಪರಿಸರದ ಶ್ರೀ ಸತ್ಯದೇವತೆ ಕಲ್ಲುರ್ಟಿ ದೇವಸ್ಥಾನದಿಂದ ಶ್ರೀ ವೀರ ವಿಠ್ಠಲ ವೆಂಕಟ್ರಮಣ ದೇವಸ್ಥಾನದವರೆಗಿನ ಸುತ್ತಮುತ್ತಲಿನ ಪರಿಸರದಲ್ಲಿ ಸ್ವಚ್ಚತಾ ಶ್ರಮದಾನ ನಡೆಯಿತು. ವಿಶ್ವಕರ್ಮ ಬ್ಯಾಂಕಿನ ನಿರ್ದೇಶಕರಾದ ಬಿಜು ಜಯ ಆಚಾರ್ಯ, ಜಯಪ್ರಕಾಶ್ ಭಂಡಾರಿಬೆಟ್ಟು, ಭರತ್ ನಿಡ್ಪಳ್ಳಿ, ವ್ಯವಸ್ಥಾಪಕ ನಿರ್ದೇಶಕರಾದ ವಸಂತ ಅಡ್ಯಂತಾಯ, ಬಜಾರ್ ಗ್ರೂಪ್ ಮಾಲಕರಾದ ಲಯನ್ ಸುಧಾಕರ್ ಆಚಾರ್ಯ, ಯುವ ಸಂಗಮ ಮೆಲ್ಕಾರ್ ಇದರ ಗೌರವಾಧ್ಯಕ್ಷರಾದ ಎಂ.ಎನ್. ಕುಮಾರ್ ಹಾಗೂ ಸದಸ್ಯರು, ಶೌರ್ಯ ವಿಪತ್ತು ನಿರ್ವಹಣಾ ಸಮಿತಿ ಕಲ್ಲಡ್ಕ ಇದರ ಅಧ್ಯಕ್ಷರಾದ ಮಾಧವ ಸಾಲ್ಯಾನ್ ಕುದ್ರೆಬೆಟ್ಟು ಹಾಗೂ ಸದಸ್ಯರು, ಮಹಿಳಾ ಪ್ರೇರಣಾ ಸಂಘ ನರಿಕೊಂಬು ಇದರ ಅಧ್ಯಕ್ಷರಾದ ಅನಿತಾ ಮತ್ತು ಸದಸ್ಯರು, ಶ್ರೀ ವೀರಮಾರುತಿ ಭಜನಾ ಮಂಡಳಿಯ ಗಣೇಶ್ ಕಾಮತ್, ಎನ್ ವಿನೋದ್ ಭಟ್ ಹಾಗೂ ಸದಸ್ಯರು, ಶಾಖಾ ವ್ಯವಸ್ಥಾಪಕರಾದ ಉಷಾ ಕೆ ಹಾಗೂ ಸಿಬ್ಬಂದಿಗಳು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸದಸ್ಯರು, ಪದಾಧಿಕಾರಿಗಳು, ಬ್ಯಾಂಕಿನ ಸದಸ್ಯರು, ಗ್ರಾಹಕರು ಭಾಗವಹಿಸಿದ್ದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
EMAIL: sahakaraspandana@gmail.com









