ಉಡುಪಿ: ಛಾಯಾಗ್ರಹಣ ವಿಭಾಗದಲ್ಲಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪಡೆದಿರುವ ಮಣಿಪಾಲ ಸಾರಸ್ವತ ಸೌಹಾರ್ದ ಸಹಕಾರಿ ಸಂಘದ ಸಿಇಒ ಭುವನೇಶ್ ಪ್ರಭು ಹಿರೇಬೆಟ್ಟು ಹಾಗೂ ಯಕ್ಷಗಾನ ಕ್ಷೇತ್ರದಲ್ಲಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಕೋಡಿಕನ್ಯಾಣ ಶ್ರೀ ರಾಮಾಂಜನೇಯ ಸೌಹಾರ್ದ ಸಹಕಾರಿ ಸಂಘದ ಸಿಇಒ ರಾಘವೇಂದ್ರ ಕರ್ಕೇರ ಕೋಡಿ ಇವರ ಸಾಧನೆಯನ್ನು ಗುರುತಿಸಿ ಗೌರವಿಸಲಾಯಿತು.
https://chat.whatsapp.com/JVAtKKe2M19AFO3W5629ZS?mode=ems_copy_t
ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ಇದರ ಉಡುಪಿ ಜಿಲ್ಲಾ ಸೌಹಾರ್ದ ಅಭಿವೃದ್ಧಿ ಅಧಿಕಾರಿ ವಿಜಯ್ ಬಿ.ಎಸ್, ಕಚೇರಿ ಸಹಾಯಕ ಅರುಣ್ ಕುಮಾರ್, ಉಡುಪಿ ಸೌಹಾರ್ದ ಒಕ್ಕೂಟದ ಸಿಇಒ ಲೋಹಿತ್ ಸಾಲ್ಯಾನ್, ಅಗ್ರಜ ಸೌಹಾರ್ದ ಉಡುಪಿ ಇದರ ಗಣೇಶ್ ಕೋಟ್ಯಾನ್, ಭಾರತಿ ಸೌಹಾರ್ದ ಕಾಪು ಇದರ ಶಶಿಧರ ಕೋಟ್ಯಾನ್, ವೀರಭದ್ರ ಸೌಹಾರ್ದ ಪರ್ಕಳ ಇದರ ರತ್ನ ಶೆಟ್ಟಿ, ಪಂಚಮಿ ಸೌಹಾರ್ದ ಉಡುಪಿಯ ಸ್ವಾತಿ ಪ್ರಭು, ನಿರ್ಮಾಣ್ ಸೌಹಾರ್ದ ಉಡುಪಿ ಇದರ ಪ್ರದೀಪ ಕೆ., ಮಲ್ಪೆ ಮೀನು ವ್ಯಾಪಾರಸ್ಥ ಸೌಹಾರ್ದ ಸಹಕಾರಿ ಇದರ ಜೀವನ್ ಮಲ್ಪೆ, ಸುರಕ್ಷಾ ಸೌಹಾರ್ದ ಉಡುಪಿ ಇದರ ದೇಬ್ರಾ ಡಿಸೋಜ, ದಿವ್ಯ ಸೌಹಾರ್ದ ಕಟಪಾಡಿ ಇದರ ಸುಜಿ ಕರ್ಕಡ, ಸಾಯಿಗಣೇಶ್ ಸೌಹಾರ್ದ ಉಡುಪಿ ಇದರ ಸಂದೇಶ್, ಅನಂತಶ್ರೀ ಸೌಹಾರ್ದ ಉಡುಪಿ ಇದರ ಸಾಗರ್, ವಿಶ್ವಭಾರತಿ ಸೌಹಾರ್ದ ಉಡುಪಿ ಇದರ ಶಶಿಕಾಂತ್ ಉಳಿತ್ತಾಯ, ಹಂಸಚೈತನ್ಯ ಸೌಹಾರ್ದ ಉಡುಪಿ ಇದರ ಚಂದ್ರಶೇಖರ್ ಇವರು ಭುವನೇಶ್ ಪ್ರಭು ಹಾಗೂ ರಾಘವೇಂದ್ರ ಕರ್ಕೇರ ಅವರನ್ನು ಸನ್ಮಾನಿಸಿದರು.

ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
EMAIL: sahakaraspandana@gmail.com










