ಒಂದು ವಾರ ವಿಶೇಷ ಕಾರ್ಯಕ್ರಮಗಳ ಆಯೋಜನೆ
ಮೂಲ್ಕಿ: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ “ವಿಶಿಷ್ಟ ಸಾಧನಾ ಪ್ರಶಸ್ತಿ”ಯನ್ನು ಸತತ ಎರಡು ಬಾರಿ ಪಡೆದಿರುವ ಹಳೆಯಂಗಡಿಯ ಪ್ರಿಯದಶಿನಿ ಕೋ ಆಪರೇಟಿವ್ ಸೊಸೈಟಿ ಆಶ್ರಯದಲ್ಲಿ ಸಹಕಾರ ಸಪ್ತಾಹ 2025ರ ಅಂಗವಾಗಿ ಒಂದು ವಾರದ ಕಾರ್ಯಕ್ರಮ ಆಯೋಜಿಸಲಾಗಿದೆ.
https://chat.whatsapp.com/JVAtKKe2M19AFO3W5629ZS?mode=ems_copy_t
ನ.14ರಂದು ಸೊಸೈಟಿಯ ಹಳೆಯಂಗಡಿಯ ಪ್ರಧಾನ ಕಚೇರಿಯಲ್ಲಿ ಸಹಕಾರ ಸಪ್ತಾಹ ಧ್ವಜಾರೋಹಣವನ್ನು ಮುಲ್ಕಿ ವಿವಿಧೋದ್ದೇಶ ಸಹಕಾರ ಸಂಘ ( ಕ್ಷೀರಸಾಗರ) ಇದರ ಅಧ್ಯಕ್ಷರಾದ ಗೋಪಿನಾಥ ಪಡಂಗ ನೆರವೇರಿಸಲಿರುವರು. ಹಿರಿಯ ಸಹಕಾರಿಗಳಾದ ಹಳೆಯಂಗಡಿ ಪಿ.ಸಿ.ಎ ಬ್ಯಾಂಕ್ ಮಾಜಿ ಅಧ್ಯಕ್ಷರಾದ ಮಾಧವ ತಿಂಗಳಾಯ, ಹಳೆಯಂಗಡಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಸ್ಥಾಪಕಾಧ್ಯಕ್ಷರಾದ ಶರ್ಲಿ ಬಂಗೇರ ಮತ್ತು ಈ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಜೈಕೃಷ್ಣ ಕೋಟ್ಯಾನ್ ಅವರನ್ನು ಗೌರವಿಸಲಾಗುವುದು.
ನ.15ರಂದು ಹಳೆಯಂಗಡಿ ಇಂದಿರಾನಗರದ ಇಂದಿರಾ ಗಾಂಧಿ ಸಭಾಭವನದಲ್ಲಿ ಸಂಗಮ ಮಹಿಳಾ ಮಂಡಲ ಇಂದಿರಾನಗರ ಸಹಯೋಗದೊಂದಿಗೆ ದುರ್ಗಾ ಸಂಜೀವಿನಿ ಮಣಿಪಾಲ ಆಸ್ಪತ್ರೆ ಕಟೀಲು ಇವರ ವತಿಯಿಂದ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ನಡೆಯಲಿದೆ.
ದುರ್ಗಾ ಸಂಜೀವಿನಿ ಮಣಿಪಾಲ ಆಸ್ಪತ್ರೆ ಕಟೀಲು ಇದರ ಮುಖ್ಯ ಆಡಳಿತ ಅಧಿಕಾರಿ ಡಾ.ಎಚ್.ಶಿವಾನಂದ ಪ್ರಭು ಶಿಬಿರದ ಉದ್ಘಾಟನೆ ಮಾಡಲಿದ್ದು ಮುಖ್ಯ ಅತಿಥಿಗಳಾಗಿ ಹಳೆಯಂಗಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಜಲಜಾ ಪಾಣಾರ್, ಗ್ರಾಮ ಪಂಚಾಯತ್ ಸದಸ್ಯರಾದ ಅಬ್ದುಲ್ ಖಾದರ್, ಪದ್ಮಾವತಿ ಶೆಟ್ಟಿ, ಅಬ್ದುಲ್ ಅಜೀಜ್, ನೀತು ನಿರಂಜಲ, ಶಶಿಕಲಾ ಕರಿತೋಟ, ಸುಚಿತ್ರಾ ಪ್ರಸನ್ನ ಭಾಗವಹಿಸಲಿದ್ದಾರೆ.
ನ.16ರಂದು ಪಡುಬಿದ್ರಿ ಶಾಖೆ ಆಶ್ರಯದಲ್ಲಿ ಶ್ರೀನಿವಾಸ ಆಸ್ಪತ್ರೆ ಮುಕ್ಕ, ಪ್ರಾಥಮಿಕ ಆರೋಗ್ಯ ಕೇಂದ್ರ ಪಡುಬಿದ್ರಿ, ತರಂಗಿಣಿ ಮಿತ್ರ ಮಂಡಳಿ ಪಡುಬಿದ್ರಿ, S.P.V.P ಮತ್ತು P.G.H.S ಆರೋಗ್ಯ ನಿಧಿ ಚಾರಿಟೇಬಲ್ ಟ್ರಸ್ಟ್ ಪಡುಬಿದ್ರಿ ಇದರ ಸಹಯೋಗದಲ್ಲಿ ಗಣಪತಿ ಪ್ರೌಢಶಾಲೆ ಪಡುಬಿದ್ರಿ ಇಲ್ಲಿ ಉಚಿತ ವೈದ್ಯಕೀಯ ಸಾರ್ವಜನಿಕ ಶಿಬಿರ ನಡೆಯಲಿದೆ. ಈ ಕಾರ್ಯಕ್ರಮದ ಉದ್ಘಾಟಕರಾಗಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ಪಡುಬಿದ್ರಿ ಇದರ ಆನುವಂಶಿಕ ಮೊಕ್ತೇಸರ ಭವಾನಿಶಂಕರ್ ಹೆಗ್ಡೆ ಪೇಟೆ ಮನೆ, ಮುಖ್ಯ ಅತಿಥಿಗಳಾಗಿ ನವೀನ್ ಚಂದ್ರ ಜೆ ಶೆಟ್ಟಿ (ಅಧ್ಯಕ್ಷರು, ಗಣಪತಿ ಪ್ರೌಢಶಾಲಾ ಹಳೆ ವಿದ್ಯಾರ್ಥಿ ಸಂಘ ಪಡುಬಿದ್ರಿ), ಡಾ.ಶಶಿರಾಜ್ ಶೆಟ್ಟಿ (ಮುಖ್ಯ ಶಸ್ತ್ರಚಿಕಿತ್ಸಕರು ಎಲುಬು ಮತ್ತು ಮೂಳೆ ವಿಭಾಗ ಶ್ರೀನಿವಾಸ ಆಸ್ಪತ್ರೆ ಮುಕ್ಕ), ಡಾ.ರಾಜಶ್ರೀ ಕಿಣಿ (ವೈದ್ಯಾಧಿಕಾರಿಯವರು ಪ್ರಾಥಮಿಕ ಆರೋಗ್ಯ ಕೇಂದ್ರ ಪಡುಬಿದ್ರಿ), ಅನುರಾಧಾ ಪಿ.ಎಸ್ (ಮುಖ್ಯೋಪಾಧ್ಯಾಯರು ಗಣಪತಿ ಪ್ರೌಢಶಾಲೆ ಪಡುಬಿದ್ರಿ), ಅಶೋಕ ಕೆ (ಮುಖ್ಯೋಪಾಧ್ಯಾಯರು ಹಿರಿಯ ಪ್ರಾಥಮಿಕ ಶಾಲೆ) ಭಾಗವಹಿಸಲಿದ್ದು, ಪಿ.ಸದಾಶಿವ ಆಚಾರ್ (ಗೌರವಾಧ್ಯಕ್ಷರು ತರಂಗಿಣಿ ಮಿತ್ರ ಮಂಡಳಿ), ಗಣೇಶ್ ಪ್ರಸಾದ್ (ನಿರ್ದೇಶಕರು ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್ ಹಳೆಯಂಗಡಿ), ರಮಾಕಾಂತ್ ರಾವ್ ಕೋಶಾಧಿಕಾರಿ ಮತ್ತು ಆರೋಗ್ಯ ನಿಧಿ ಚಾರಿಟೇಬಲ್ ಟ್ರಸ್ಟ್ (ರಿ) ಪಡುಬಿದ್ರಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಹಿರಿಯ ಸಹಕಾರಿ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಮೂರ್ತೆದಾರರ ಮಹಾಮಂಡಲದ ಮಾಜಿ ಅಧ್ಯಕ್ಷರಾದ ಪಿ.ಕೆ ಸದಾನಂದ ಮತ್ತು ಪಡುಬಿದ್ರಿ ಸಹಕಾರ ವ್ಯವಸಾಯ ಸೊಸೈಟಿ ಸೊಸೈಟಿ ನಿರ್ದೇಶಕ ಗಿರೀಶ್ ಪಳಿಮಾರು ಇವರನ್ನು ಗೌರವಿಸಲಾಗುವುದು.
ನ.17ರಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾಮಟ್ಟದ ಹೈಸ್ಕೂಲ್ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಅವರ ಭಾವಚಿತ್ರ ಬಿಡಿಸುವ ಸ್ಪರ್ಧೆ ಏರ್ಪಡಿಸಲಾಗಿದೆ. ಚಿತ್ರನಟಿ ಚಿರಶ್ರೀ ಅಂಚನ್ ಉದ್ಘಾಟನೆ ಮಾಡಲಿದ್ದು ಮುಖ್ಯ ಅತಿಥಿಗಳಾಗಿ ಮಂಜುಳಾ ಶೆಟ್ಟಿ, ಸಹ ಶಿಕ್ಷಕರು, ಪಂಜದ ಗುತ್ತು ಶಾಂತರಾಮ ಸರ್ಕಾರಿ ಪ್ರೌಢಶಾಲೆ ಕೆಮ್ರಾಲ್ ಮತ್ತು ಗೋಪಾಲಕೃಷ್ಣ ಬಿ ಕೋಟ್ಯಾನ್ ಪೂಜಾ ಟ್ಯೂಷನ್ ಕ್ಲಾಸಸ್ ಹಳೆಯಂಗಡಿ ಐವರು ಭಾಗವಹಿಸಲಿದ್ದಾರೆ.
ನ.18ರಂದು ಕಿನ್ನಿಗೋಳಿ ಶಾಖೆಯ ಆಶ್ರಯದಲ್ಲಿ ಕಸ್ತೂರ್ಬಾ ಮೆಡಿಕಲ್ ಕಾಲೇಜು ದುರ್ಗಾ ಸಂಜೀವಿನಿ ಮಣಿಪಾಲ್ ಆಸ್ಪತ್ರೆ ಕಟೀಲು, ಸಮುದಾಯ ಆರೋಗ್ಯ ವಿಭಾಗ ಕೆ.ಎಂ.ಸಿ ಮಂಗಳೂರು, ಖಿಲ್ ರಿಯಾ ಜುಮ್ಮಾ ಮಸೀದಿ ಶಾಂತಿನಗರ ಗುತ್ತಕಾಡು, ನೂರುಲ್ ಹುದಾ ಅಸೋಸಿಯೇಷನ್ (ರಿ) ಶಾಂತಿನಗರ ಗುತ್ತಕಾಡು, ರೋಟರಿ ಕ್ಲಬ್ ಕಿನ್ನಿಗೋಳಿ, ಜನನಿ ಜನಸೇವಾ ಸಂಘ ಉಳ್ಳಂಜೆ ಕಟೀಲು ಇದರ ಆಶ್ರಯದಲ್ಲಿ ದುರ್ಗಾ ಸಂಜೀವಿನಿ ಮಣಿಪಾಲ ಆಸ್ಪತ್ರೆಯ ತಜ್ಞ ವೈದ್ಯರಿಂದ ಉಚಿತ ಸಾರ್ವಜನಿಕ ವೈದ್ಯಕೀಯ ತಪಾಸಣಾ ಶಿಬಿರ ನಡೆಯಲಿದ್ದು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟಿ.ಹೆಚ್ ಮಯ್ಯದ್ದಿ ಮಾಜಿ ಅಧ್ಯಕ್ಷರು ಕಿನ್ನಿಗೋಳಿ ಗ್ರಾಮ ಪಂಚಾಯತ್, ಮುಖ್ಯ ಅತಿಥಿಗಳಾಗಿ ರೋ. ಸಾಯಿನಾಥ ಶೆಟ್ಟಿ ಅಧ್ಯಕ್ಷರು ರೋಟರಿ ಕ್ಲಬ್ ಕಿನ್ನಿಗೋಳಿ, ನವಾಜ್ ಕಲ್ಕೆರೆ ಉಪಾಧ್ಯಕ್ಷರು ಖಿಲ್ ರಿಯಾ ಜುಮ್ಮಾ ಮಸೀದಿ ಶಾಂತಿನಗರ ಗುತ್ತಕಾಡು, ಪ್ರಮೋದ್ ಕುಮಾರ್ ಎ.ಪಿ.ಎಂ.ಸಿ ಮಂಗಳೂರು, ನೂರುದ್ದೀನ್ ಅಧ್ಯಕ್ಷರು ನೂರುಲ್ ಹುದಾ ಅಸೋಸಿಯೇಷನ್ ಶಾಂತಿನಗರ ಗುತ್ತಕಾಡು, ಟಿ.ಕೆ ಅಬ್ದುಲ್ ಖಾದರ್ ಮಾಜಿ ಅಧ್ಯಕ್ಷರು ಖಿಲ್ ರಿಯಾ ಜುಮ್ಮಾ ಮಸೀದಿ ಶಾಂತಿನಗರ ಗುತ್ತಕಾಡು, ರೋ ಪ್ರಕಾಶ್ ಕಿನ್ನಿಗೋಳಿ, ಅಧ್ಯಕ್ಷರು ಜನನಿ ಜನಸೇವಾ ಸಂಸ್ಥೆ ಉಲ್ಲಂಜೆ ಭಾಗವಹಿಸಲಿದ್ದಾರೆ. ಹಿರಿಯ ಸಹಕಾರಿಗಳಾದ ಶೇಷರಾಮ ಶೆಟ್ಟಿ ಮಾಜಿ ಉಪಾಧ್ಯಕ್ಷರು ಕಿನ್ನಿಗೋಳಿ ವ್ಯವಸಾಯ ಸೇವಾ ಸಹಕಾರಿ ಸಂಘ ಮತ್ತು ವನಜ ಶೆಟ್ಟಿ, ನಿವೃತ್ತ ಹಿರಿಯ ಅಧಿಕಾರಿ ಕಿನ್ನಿಗೋಳಿ ವ್ಯವಸಾಯ ಸೇವಾ ಸಹಕಾರ ಸಂಘ ಇವರನ್ನು ಸನ್ಮಾನಿಸಲಾಗುವುದು.
ನ.19ರಂದು ಮೂಡುಬಿದಿರೆ ಶಾಖೆಯ ಆಶ್ರಯದಲ್ಲಿ ಮೌಂಟ್ ರೋಜರಿ ಆಸ್ಪತ್ರೆ ಆಲಂಗಾರು ಮೂಡಬಿದಿರೆ ಮತ್ತು ಲಯನ್ಸ್ ಕ್ಲಬ್ ಅಲಂಗಾರು ಇದರ ಆಶ್ರಯದಲ್ಲಿ ಉಚಿತ ವೈದ್ಯಕೀಯ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದ್ದು ಮೂಡುಬಿದಿರೆ ಪುರಸಭೆ ಸದಸ್ಯರಾದ ಪಿ.ಕೆ ತೋಮಸ್ ಉದ್ಘಾಟನೆ ಮಾಡಲಿದ್ದಾರೆ. ಹಿರಿಯ ಸಹಕಾರಿಗಳಾದ ಕಲ್ಲಬೆಟ್ಟು ಕೋ ಆಪರೇಟಿವ್ ಸೊಸೈಟಿಯ ಮಾಜಿ ಅಧ್ಯಕ್ಷರಾದ ಸುರೇಶ್ ಕೋಟ್ಯಾನ್ ಮತ್ತು ನೆಲ್ಲಿಕಾರು ವ್ಯವಸಾಯ ಸಹಕಾರಿ ಸಂಘದ ಅರುಣ್ ಕುಮಾರ್ ಜೈನ್ ಅವರನ್ನು ಅಭಿನಂದಿಸಲಾಗುವುದು.
ನ.20ರಂದು ಸಮಾರೋಪ ಸಮಾರಂಭ ಹಳೆಯಂಗಡಿಯ ಪ್ರಧಾನ ಕಚೇರಿಯಲ್ಲಿ ನಡೆಯಲಿದ್ದು ಈ ಸೇವಾ ಕಾರ್ಯಕ್ರಮದ ಅಂಗವಾಗಿ ಅಶಕ್ತ ಅಂಗವಿಕಲರಿಗೆ ವೀಲ್ ಚೇರ್ ವಿತರಣೆ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಶ್ರೀ ಕೊಡಮಣಿತ್ತಾಯ ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಕೊಡಿಪಾಡಿ ಸುರತ್ಕಲ್ ಇದರ ಅಧ್ಯಕ್ಷ ರೂಪೇಶ್ ರೈ,
ಮುಖ್ಯ ಅತಿಥಿಗಳಾಗಿ ವಿಲ್ಮಾ ಡಿಕೋಸ್ತ ಸಮಾಜ ಸೇವಕರು ಕಿನ್ನಿಗೋಳಿ ಭಾಗವಹಿಸಲಿದ್ದಾರೆ ಎಂದು ಸೊಸೈಟಿ ಅಧ್ಯಕ್ಷರಾದ ಹೆಚ್ ವಸಂತ್ ಬೆರ್ನಾಡ್ ಪತ್ರಿಕೆಗೆ ತಿಳಿಸಿದ್ದಾರೆ. ಉಪಾಧ್ಯಕ್ಷರಾದ ಪ್ರತಿಭಾ ಕುಳಾಯಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಜೊತೆಗೆ ಇದ್ದರು.

