Close Menu
    Top News

    ಚೆಕ್‌ ಬೌನ್ಸ್‌ ಪ್ರಕರಣಕ್ಕೆ ಸೀಲು, ಸಹಿ ಕಡ್ಡಾಯವಲ್ಲ; ಕಂಪ್ಯೂಟರ್ ಆಧರಿತ ಮೆಮೊ ಕೂಡ ಸಾಕ್ಷಿಯಾಗಿ ಮಾನ್ಯ: ಹೈಕೋರ್ಟ್ ಮಹತ್ವದ ತೀರ್ಪು

    April 22, 2026

    ಊರಿನ ಸ್ವಚ್ಛತೆಗಾಗಿ ವಿಶ್ವಕರ್ಮ ಬ್ಯಾಂಕ್‌ನ ಕೆಲಸ ಶ್ಲಾಘನೀಯ

    April 22, 2026

    ಏಪ್ರಿಲ್‌ 26ರಂದು ಶ್ರೀಶಾ ಸೊಸೈಟಿ ಪ್ರಾಯೋಜಕತ್ವದಲ್ಲಿ ಹರಿದಾಸರ ಕೃತಿ ಕೀರ್ತನೆಗಳ ಗಾಯನ

    April 22, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಅಡಕೆ ಆಮದಿಗೆ ಕೇಂದ್ರ ಸರ್ಕಾರ ಕಡಿವಾಣ
    News

    ಅಡಕೆ ಆಮದಿಗೆ ಕೇಂದ್ರ ಸರ್ಕಾರ ಕಡಿವಾಣ

    adminBy adminOctober 17, 2025

    ಕೆ.ಜಿ.ಗೆ 351 ರೂ.ಗಿಂತ ಕಡಿಮೆ ಮೌಲ್ಯದ ಉತ್ಪನ್ನಕ್ಕೆ ನಿಷೇಧ

    ಮಂಗಳೂರು: ವಿದೇಶಗಳಿಂದ ಹುರಿದ ರೂಪದಲ್ಲಿ ಕನಿಷ್ಠ ದರದಲ್ಲಿ ಅಡಕೆ ಆಮದಾಗುತ್ತಿದ್ದ ಹಿನ್ನೆಲೆಯಲ್ಲಿ ದೇಶದ ಆಂತರಿಕ ಮಾರುಕಟ್ಟೆಯಲ್ಲಿ ಅಡಕೆ ದರ ಇಳಿಕೆಯಾಗಿತ್ತು. ಇದನ್ನು ತಪ್ಪಿಸಲು ಸರ್ಕಾರ ಆಮದು ಬೆಲೆ ಕೆ.ಜಿ.ಗೆ 351 ರೂ. ನಿಗದಿಪಡಿಸಿ ಬೆಲೆ ಇಳಿಕೆಗೆ ಕಡಿವಾಣ ಹಾಕಿದೆ.

    https://chat.whatsapp.com/JVAtKKe2M19AFO3W5629ZS?mode=ems_copy_t
    ಈ ಕುರಿತು ಅಧಿಸೂಚನೆ ಹೊರಡಿಸಿರುವ ವಿದೇಶಿ ವ್ಯಾಪಾರ ನಿರ್ದೇಶನಾಲಯ, 351 ರೂ.ಗಳಿಗಿಂತ ಕಡಿಮೆ ಸಿಐಎಫ್ ಮೌಲ್ಯ ಹೊಂದಿರುವ ಹುರಿದ ಅಡಕೆ ಆಮದನ್ನು ನಿಷೇಧಿಸಲಾಗಿದೆ. ಆದರೆ ಈ ನಿಷೇಧ ವಿಶೇಷ ಆರ್ಥಿಕ ವಲಯದಲ್ಲಿರುವ ಶೇ.100 ಪ್ರತಿಶತ ರಫ್ತು ಆಧಾರಿತ ಘಟಕಗಳ ಆಮದುಗಳಿಗೆ ಮತ್ತು ಮುಂಗಡ ಅಧಿಕಾರ ಯೋಜನೆಯಡಿ ಆಮದು ಮಾಡಿಕೊಳ್ಳುವವರಿಗೆ ಅನ್ವಯಿಸುವುದಿಲ್ಲ ಎಂದು ತಿಳಿಸಿದೆ. ವಿದೇಶದಿಂದ ಕಡಿಮೆ ಬೆಲೆಗೆ ಆಮದಾಗುತ್ತಿದ್ದ ಅಡಕೆ ರಾಜ್ಯದ ಬೆಳೆಗಾರರನ್ನು ಕಂಗೆಡಿಸಿತ್ತು. ದೇಶೀಯ ಮಾರುಕಟ್ಟೆಯಲ್ಲಿ ಬೆಲೆ ಕುಸಿತ ಭೀತಿ ಎದುರಾಗಿತ್ತು. ಇದರಿಂದ ಆಮದು ಬೆಲೆ ಹೆಚ್ಚಿಸುವಂತೆ ಕ್ಯಾಂಪ್ಕೊ ಸಹಿತ ಹಲವು ಸಂಘಟನೆಗಳು ಒತ್ತಾಯಿಸಿದ್ದವು. ಇದೀಗ ಕೇಂದ್ರದ ಈ ನಿರ್ಧಾರ ಬೆಳೆಗಾರರಲ್ಲಿ ಹರ್ಷ ತಂದಿದೆ.
    ನಿಯಂತ್ರಣ ಕ್ರಮ:
    ಭಾರತ ಅಡಕೆಯನ್ನು ಭೂತಾನ್, ಮಯನ್ಮಾರ್‌, ಇಂಡೋನೇಷ್ಯಾಗಳಿಂದ ಆಮದು ಮಾಡಿಕೊಳ್ಳಬಹುದು. ಆದರೆ ಈ ದೇಶಗಳಿಂದ ಮಿಜೋರಾಂ ಮತ್ತು ಮಣಿಪುರ ಮೂಲಕ ಪರೋಕ್ಷವಾಗಿ ಆಮದಾಗುತ್ತಿದೆ. ಶೇ.100 ಆಮದು ಸುಂಕ, ಅಡಕೆ ಗುಣಮಟ್ಟ, ಯಾವ ಮೂಲದಿಂದ ಆಮದು ಆಗಿದೆ ಎಂಬ ಬಗ್ಗೆ ಪರಿಶೀಲನೆ ಮತ್ತಿತರ ಕ್ರಮಗಳ ಮೂಲಕವೂ ಅಡಕೆ ಆಮದಿನ ಮೇಲೆ ನಿಯಂತ್ರಣ ಹೇರಲಾಗಿದೆ.

    ಭಾರತಕ್ಕೆ ಇಂಡೋನೇಷ್ಯಾ, ಶ್ರೀಲಂಕಾ, ಮಯನ್ಮಾರ್ ಮೊದಲಾದ ದೇಶಗಳಿಂದ ಅಡಕೆ ಹಸಿ, ಒಣಹಣ್ಣಿನ ರೂಪದಲ್ಲಿ, ಮರದ ಬೀಜ, ಹುರಿದ ಅಡಕೆಯಾಗಿ ವಿವಿಧ ರೂಪದಲ್ಲಿ ಆಮದು ಆಗಿ ಆಂತರಿಕ ಮಾರುಕಟ್ಟೆ ಧಾರಣೆ ಮೇಲೆ ಪ್ರಭಾವ ಬೀರುತ್ತದೆ. ಹುರಿದ ಅಡಕೆ ಆಮದನ್ನು ಹತೋಟಿಯಲ್ಲಿ ಇಡುವ ದೃಷ್ಟಿಯಿಂದ 2025 ಏಪ್ರಿಲ್‌ನಲ್ಲಿ ಕೆ.ಜಿ. ಅಡಕೆಗೆ 351 ರೂ. ನಿಗದಿಪಡಿಸಲಾಗಿತ್ತು. ಈಗ ಸರ್ಕಾರ ಇದನ್ನು ಕಟ್ಟುನಿಟ್ಟಾಗಿ ಪಾಲಿಸಲು ಮುಂದಾಗಿರುವುದು ಸ್ವಾಗತಾರ್ಹ. ಇದು ಆಂತರಿಕವಾಗಿ ದರ ಏರಿಕೆಗೆ ಪೂರಕವಾಗಬಹುದು.
                                                               ಡಾ.ವಿಘ್ನೇಶ್ವರ ವರ್ಮುಡಿ, ಮಾರುಕಟ್ಟೆ ತಜ್ಞ

     

    ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

    EMAIL: sahakaraspandana@gmail.com

    Areccanut Preice rice Vighneshwara Varmudi
    Previous Articleದ.ಕ. ಜಿಲ್ಲಾ ಕೋಳಿ ಸಾಕಣೆದಾರರ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾಗಿ ದಯಾನಂದ ಅಡ್ಯಾರ್‌ ಆಯ್ಕೆ
    Next Article ನಾಳೆ ವಿಶ್ವಕರ್ಮ ಬ್ಯಾಂಕ್‌ ಕಾರ್ಕಳ, ಉಡುಪಿ ಶಾಖೆಗಳಲ್ಲಿ ಸ್ವಚ್ಛ ಭಾರತ್‌ ಕಾರ್ಯಕ್ರಮ

    Related Posts

    ಚೆಕ್‌ ಬೌನ್ಸ್‌ ಪ್ರಕರಣಕ್ಕೆ ಸೀಲು, ಸಹಿ ಕಡ್ಡಾಯವಲ್ಲ; ಕಂಪ್ಯೂಟರ್ ಆಧರಿತ ಮೆಮೊ ಕೂಡ ಸಾಕ್ಷಿಯಾಗಿ ಮಾನ್ಯ: ಹೈಕೋರ್ಟ್ ಮಹತ್ವದ ತೀರ್ಪು

    April 22, 2026

    ಊರಿನ ಸ್ವಚ್ಛತೆಗಾಗಿ ವಿಶ್ವಕರ್ಮ ಬ್ಯಾಂಕ್‌ನ ಕೆಲಸ ಶ್ಲಾಘನೀಯ

    April 22, 2026

    ಏಪ್ರಿಲ್‌ 26ರಂದು ಶ್ರೀಶಾ ಸೊಸೈಟಿ ಪ್ರಾಯೋಜಕತ್ವದಲ್ಲಿ ಹರಿದಾಸರ ಕೃತಿ ಕೀರ್ತನೆಗಳ ಗಾಯನ

    April 22, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    ಚೆಕ್‌ ಬೌನ್ಸ್‌ ಪ್ರಕರಣಕ್ಕೆ ಸೀಲು, ಸಹಿ ಕಡ್ಡಾಯವಲ್ಲ; ಕಂಪ್ಯೂಟರ್ ಆಧರಿತ ಮೆಮೊ ಕೂಡ ಸಾಕ್ಷಿಯಾಗಿ ಮಾನ್ಯ: ಹೈಕೋರ್ಟ್ ಮಹತ್ವದ ತೀರ್ಪು

    April 22, 2026

    ಊರಿನ ಸ್ವಚ್ಛತೆಗಾಗಿ ವಿಶ್ವಕರ್ಮ ಬ್ಯಾಂಕ್‌ನ ಕೆಲಸ ಶ್ಲಾಘನೀಯ

    April 22, 2026

    ಏಪ್ರಿಲ್‌ 26ರಂದು ಶ್ರೀಶಾ ಸೊಸೈಟಿ ಪ್ರಾಯೋಜಕತ್ವದಲ್ಲಿ ಹರಿದಾಸರ ಕೃತಿ ಕೀರ್ತನೆಗಳ ಗಾಯನ

    April 22, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.