ನವದೆಹಲಿ: ಭಾರತದ ಸಹಕಾರಿ ಚಳವಳಿಯ ಭವಿಷ್ಯದ ಬಗ್ಗೆ ಹೊಸ ಚಿಂತನೆ ಸೃಜಿಸುವ ಪ್ರಯತ್ನವೊಂದರಲ್ಲಿ ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮವು (NCDC), MyGov ಸಹಭಾಗಿತ್ವದಲ್ಲಿ “ಬದಲಾಗುತ್ತಿರುವ ಕಾಲದಲ್ಲಿ ಸಹಕಾರಿ ಸಂಸ್ಥೆಗಳ ಹೆಚ್ಚುತ್ತಿರುವ ಮಹತ್ವ” (“Increasing Significance of Cooperatives in Changing Times.”) ಎಂಬ ವಿಷಯದ ಕುರಿತು ರಾಷ್ಟ್ರವ್ಯಾಪಿ ಪ್ರಬಂಧ ಸ್ಪರ್ಧೆ ಆಯೋಜಿಸಿದೆ.
https://chat.whatsapp.com/JVAtKKe2M19AFO3W5629ZS?mode=ems_copy_t
ಸ್ಪರ್ಧೆಯಲ್ಲಿ ಯಾವುದೇ ವಯೋಮಿತಿಯ ನಾಗರಿಕರು ಮುಕ್ತವಾಗಿ ಭಾಗವಹಿಸಬಹುದು. ವೇಗವಾಗಿ ವಿಕಸನಗೊಳ್ಳುತ್ತಿರುವ ಆರ್ಥಿಕ ಮತ್ತು ಸಾಮಾಜಿಕ ಸನ್ನಿವೇಶದಲ್ಲಿ ಸಹಕಾರಿ ಸಂಸ್ಥೆಗಳು ವಿವಿಧ ಸಮುದಾಯಗಳಿಗೆ ಹೇಗೆ ಹೊಂದಿಸಿಕೊಳ್ಳಬಹುದು, ವಿಸ್ತರಿಸಬಹುದು ಮತ್ತು ಸಬಲೀಕರಣಗೊಳಿಸಬಹುದು ಎಂಬುದರ ಕುರಿತು ಮೂಲ ವಿಚಾರಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಲಾಗಿದೆ. ಸಹಕಾರಿ ಕ್ಷೇತ್ರವು ಸಮಗ್ರ ಬೆಳವಣಿಗೆ, ಉದ್ಯೋಗ ಸೃಷ್ಟಿ ಮತ್ತು ಸ್ಥಳೀಯ ಸ್ವಾವಲಂಬನೆಯನ್ನು ಸಾಧಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸಲಿದೆ ಎಂದು ಎನ್‌ಸಿಡಿಸಿ ಪ್ರತಿಪಾದಿಸುತ್ತದೆ. ಕೃಷಿ, ಹೈನುಗಾರಿಕೆ, ವಸತಿ, ಸಾಲ, ಮೀನುಗಾರಿಕೆ ಮತ್ತು ಸೇವೆಗಳಂತಹ ಕ್ಷೇತ್ರಗಳು, ನೀತಿಗಳು ಮತ್ತು ಡಿಜಿಟಲ್ ರೂಪಾಂತರಕ್ಕೆ ಒಳಗಾಗುತ್ತಿರುವ ಸಮಯದಲ್ಲಿ, ಸಹಕಾರಿ ಸಂಸ್ಥೆಗಳನ್ನು ಬಲಪಡಿಸುವ ಬಗ್ಗೆ ಸಾರ್ವಜನಿಕ ಸೃಜನಶೀಲತೆಯನ್ನು ವಿಶೇಷವಾಗಿ ಯುವಕರು, ವಿದ್ಯಾರ್ಥಿಗಳು ಮತ್ತು ವೃತ್ತಿಪರರಿಂದ ಬಳಸಿಕೊಳ್ಳಲು ಈ ಸ್ಪರ್ಧೆಯು ಮುಂದಾಗಿದೆ.
ಸ್ಪರ್ಧೆಯಲ್ಲಿ ಭಾಗವಹಿಸುವವರು ಹಿಂದಿ ಅಥವಾ ಇಂಗ್ಲಿಷ್‌ನಲ್ಲಿ ಬರೆಯಬಹುದು, ಪ್ರಬಂಧಗಳು 1,500 ಪದಗಳಿಗೆ ಮೀರಬಾರದು. ಆಡಳಿತವನ್ನು ಸುಧಾರಿಸಲು, ಮಾರುಕಟ್ಟೆ ಪ್ರವೇಶವನ್ನು ಯುವಕರ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸಲು, ಸುಸ್ಥಿರತೆಯ ಮಾದರಿಗಳನ್ನು ನಿರ್ಮಿಸಲು ಮತ್ತು ಸಹಕಾರಿಗಳನ್ನು ರಾಷ್ಟ್ರೀಯ ಅಭಿವೃದ್ಧಿ ಆದ್ಯತೆಗಳೊಂದಿಗೆ ಜೋಡಿಸಲು ಹೊಸ ಹೊಸ ಆವಿಷ್ಕಾರಗಳನ್ನು ಸೃಜಿಸಲು ಈ ಮೂಲಕ ಎನ್‌ಸಿಡಿಸಿ ಯೋಜಿಸುತ್ತಿದೆ. ಪ್ರಥಮ ಬಹುಮಾನ ರೂ. 15,000, ಎರಡನೇ ಮತ್ತು ಮೂರನೇ ಸ್ಥಾನಗಳಿಗೆ ರೂ. 10,000 ಮತ್ತು ರೂ. 5,000 ನಿಗದಿಪಡಿಸಲಾಗಿದ್ದು, ತಲಾ ರೂ 2,000 ನ ಮೂರು ಸಮಾಧಾನಕರ ಬಹುಮಾನಗಳನ್ನು ಸಹ ನೀಡಲಾಗುವುದು. ಈ ಕುರಿತ ಯಾವುದೇ ಮಾಹಿತಿಗಾಗಿ MyGov ಅನ್ನು ತೆರೆದು ಪರಿಶೀಲಿಸಬಹುದು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
EMAIL: sahakaraspandana@gmail.com




