ಮಂಗಳೂರು: ಇಲ್ಲಿನ ಜನತಾ ಬಜಾರ್ (ದಕ್ಷಿಣ ಕನ್ನಡ ಕೇಂದ್ರ ಸಹಕಾರ ಸಗಟು ಮಾರಾಟ ಸಂಘ) ಆಡಳಿತ ಮಂಡಳಿಗೆ ಭಾನುವಾರ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಸಹಕಾರ ಭಾರತಿ ಬೆಂಬಲಿತ ಅಭ್ಯರ್ಥಿಗಳು ಎಲ್ಲ ಕ್ಷೇತ್ರಗಳಲ್ಲೂ ಆಯ್ಕೆಯಾಗಿದ್ದಾರೆ. 14 ಸ್ಥಾನಗಳ ಪೈಕಿ 13 ಮಂದಿ ಅವಿರೋಧ ಆಯ್ಕೆಯಾಗಿದ್ದು, ಒಂದು ಸ್ಥಾನಕ್ಕೆ ಚುನಾವಣೆ ನಡೆಯಿತು.
https://chat.whatsapp.com/JVAtKKe2M19AFO3W5629ZS?mode=ems_copy_t
ಎ ಕೆಟಗರಿಯಿಂದ ದಿನೇಶ್ ಹೆಗ್ಡೆ, ಸಿ ಕೆಟಗರಿಯಿಂದ ಪುರುಷೋತ್ತಮ ಭಟ್, ಪ್ರಸನ್ನ, ಮೋಹನ್ ಕುಂಬ್ಳೇಕರ್, ಹಿಂದುಳಿದ ವರ್ಗ ಶಾಂತಾ ಆರ್, ಉದಯ ಮಾದೋಡಿ, ಪರಿಶಿಷ್ಟ ಜಾತಿ ಭಾಗೀರಥಿ ಮುರುಳ್ಯ, ಪರಿಶಿಷ್ಟ ಪಂಗಡ ಪಕೀರಪ್ಪ, ಮಹಿಳಾ ವಿಭಾಗ ಮದಲಾಕ್ಷಿ, ಸುಜಯ ಹೇಮಚಂದ್ರ, ಎಫ್ ಕೆಟಗರಿಯಿಂದ ಬಿ.ಜನಾರ್ದನ, ನವೀನ್ ಬಾಳುಗೋಡು, ಶಶಿಧರ ಶೆಟ್ಟಿ ಮತ್ತು ದಯಾನಂದ ಅಡ್ಯಾರ್ ಆಯ್ಕೆಯಾಗಿದ್ದಾರೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
EMAIL: sahakaraspandana@gmail.com



