Close Menu
    Top News

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಸಹಕಾರಿ ಉದ್ಯೋಗಿಗೆ ಒಲಿದ 2021ನೇ ಸಾಲಿನ ಉತ್ತಮ ಛಾಯಾಗ್ರಹಣ ರಾಜ್ಯ ಚಲನಚಿತ್ರ ಪ್ರಶಸ್ತಿ
    News

    ಸಹಕಾರಿ ಉದ್ಯೋಗಿಗೆ ಒಲಿದ 2021ನೇ ಸಾಲಿನ ಉತ್ತಮ ಛಾಯಾಗ್ರಹಣ ರಾಜ್ಯ ಚಲನಚಿತ್ರ ಪ್ರಶಸ್ತಿ

    adminBy adminOctober 4, 2025

    ಮಣಿಪಾಲದ ಸಾರಸ್ವತ ಸೌಹಾರ್ದ ಸಹಕಾರಿ ಸಂಘದ ಸಿಇಒ ಭುವನೇಶ್ ಪ್ರಭು ಸಾಧನೆ

    ಉಡುಪಿ: ಸಹಕಾರಿ ಕ್ಷೇತ್ರದ ಕೆಲಸದ ಜೊತೆಜೊತೆಗೆ ಹವ್ಯಾಸವಾಗಿ ಮಾಡುತ್ತಿದ್ದ ಛಾಯಾಗ್ರಹಣದ ಕಲೆ ರಾಜ್ಯ ಪ್ರಶಸ್ತಿಯನ್ನೇ ತಂದಿತ್ತಿದೆ. ಶುಕ್ರವಾರ ಪ್ರಕಟಿಸಲಾದ 2021ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪಟ್ಟಿಯಲ್ಲಿ ಉತ್ತಮ ಛಾಯಾಗ್ರಹಣ ವಿಭಾಗದಲ್ಲಿ ಉಡುಪಿ ಮಣಿಪಾಲದ ಸಾರಸ್ವತ ಸೌಹಾರ್ದ ಸಹಕಾರಿ ಸಂಘದ ಸಿಇಒ ಭುವನೇಶ್ ಪ್ರಭು ಹಿರೇಬೆಟ್ಟು ಅವರಿಗೆ ಪ್ರಶಸ್ತಿ ಲಭಿಸಿದೆ.

    https://chat.whatsapp.com/JVAtKKe2M19AFO3W5629ZS?mode=ems_copy_t
    ಸ್ಯಾಂಡಲ್‌ವುಡ್ ಮತ್ತು ಬಾಲಿವುಡ್ನಲ್ಲಿ ಬಹುತೇಕ ಕಲಾವಿದರು ಮತ್ತು ತಂತ್ರಜ್ಞರು ಕರಾವಳಿಯಿಂದ ವಲಸೆ ಹೋಗಿ ಸಾಧನೆ ಮಾಡಿದ್ದಾರೆ. ಅಂಥದೇ ಸಾಲಿಗೆ ಹಿರೇಬೆಟ್ಟುವಿನ ಭುವನೇಶ್ ಪ್ರಭು ಸೇರಿದ್ದಾರೆ. ಈ ಹಿಂದೆ ಕರಾವಳಿ ಭಾಗದ ಪ್ರತಿಷ್ಠಿತ ಚಲನಚಿತ್ರೋತ್ಸವದಲ್ಲಿ ‘ಜ್ಞಾನದಾಸರೆ’ ಎಂಬ ಕಿರುಚಿತ್ರ ಆಯ್ಕೆಯಾಗಿ ಉಡುಪಿಯ ಎಂಜಿಎಂ ಕಾಲೇಜಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನಗೊಂಡು ಅದರ ವಿಮರ್ಶೆ ನಡೆದಾಗ ಪ್ರೇಕ್ಷಕರೊಬ್ಬರು ಅದರ ಬಗ್ಗೆ ಕೇವಲವಾಗಿ ಮಾತನಾಡಿದ್ದರು. ಅಂದು ಆಗಿದ್ದ ಅವಮಾನವನ್ನು ಲೆಕ್ಕಿಸದೆ ಅದರ ಮುಂದಿನ ವರ್ಷ ಮತ್ತೊಮ್ಮೆ ನಡೆದ ಚಿತ್ರೋತ್ಸವದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿಯ ಜೊತೆಗೆ 25ಕ್ಕೂ ಅಧಿಕ ಕಿರುಚಿತ್ರ ಒಂದೇ ವರ್ಷದಲ್ಲಿ ನಿರ್ಮಿಸಿದ್ದಾರೆ ಎಂಬ ಹೆಗ್ಗಳಿಕೆಗೆ ಸನ್ಮಾನ ಪಡೆದವರು ಭುವನೇಶ್‌ ಪ್ರಭು. ವಿಭಿನ್ನ ರೀತಿಯ ಛಾಯಾಗ್ರ‍್ರಹಣದ ಮೂಲಕ 70ಕ್ಕೂ ಅಧಿಕ ಕನ್ನಡ, ತುಳು, ಬ್ಯಾರಿ ಭಾಷೆಯ ಕಿರುಚಿತ್ರ, ಆಲ್ಬಂ ಹಾಡುಗಳಿಗೆ ಛಾಯಾಗ್ರಹಣ ಮಾಡಿರುವ ಭುವನೇಶ್ ಪ್ರಭು, ಬೆಳ್ಳಿತೆರೆಯಲ್ಲಿ ತನ್ನ ಮೊದಲ ಚಿತ್ರವನ್ನು ವಿಭಿನ್ನವಾಗಿ ಮೂಡಿಸುವ ಉದ್ದೇಶದಿಂದ ತಮ್ಮ ಮಾತೃಭಾಷೆ ಕೊಂಕಣಿಯ ಚಲನಚಿತ್ರವಾದ “ಅಮ್ಚೆ ಸಂಸಾರ್” ಚಿತ್ರದ ಛಾಯಾಗ್ರಹಣ ಮಾಡಿದ್ದರು. ಯುವ ಛಾಯಾಗ್ರಾಹಕ ಭುವನೇಶ್ ಪ್ರಭು ಅವರ ಗೆಳೆಯರ ಬಳಗವೇ ಸೇರಿ ಮಾಡಿದ್ದ ಈ ಚಿತ್ರದ ಛಾಯಾಗ್ರಹಣ ವಿಭಾಗಕ್ಕೆ ಪ್ರಶಸ್ತಿ ಬಂದಿರುವುದು ಅವರ ಬಳಗದಲ್ಲೂ ಸಂತಸ ಉಂಟುಮಾಡಿದೆ. ಸಹಕಾರಿ ಕ್ಷೇತ್ರದಲ್ಲಿ ೧೬ ವರ್ಷಗಳಿಂದ ವೃತ್ತಿ ಮಾಡುತ್ತಿದ್ದರೂ ಛಾಯಾಗ್ರಹಣವನ್ನು ಪ್ರವೃತ್ತಿಯಾಗಿಸಿಕೊಂಡಿರುವ ಭುವನೇಶ್‌ ಪ್ರಭು ಅವರ ಸಾಧನೆ ಹಲವರಿಗೆ ಪ್ರೇರಣೆ ಒದಗಿಸಿದೆ.
    ಯಾವುದೇ ತಾಂತ್ರಿಕ ಪದವಿ ಪಡೆಯದಿದ್ದರೂ ತಾವಾಗಿಯೇ ಕಲಿತು, ಐವತ್ತಕ್ಕೂ ಅಧಿಕ ಕಿರುಚಿತ್ರಗಳಿಗೆ ಛಾಯಾಗ್ರಹಣ ಮಾಡಿರುವ ಅನುಭವದ ಮೇಲೆ ಅಮ್ಚೆ ಸಂಸಾರ್ ಚಿತ್ರದ ಜವಾಬ್ದಾರಿಯನ್ನು ಹೊತ್ತು ಸವಾಲಾಗಿ ಸ್ವೀಕರಿಸಿದ ಭುವನೇಶ್ ಅದಕ್ಕಾಗಿ ದೊಡ್ಡ ಪ್ರಶಸ್ತಿಯನ್ನೇ ತಮ್ಮದಾಗಿಸಿಕೊಂಡಿದ್ದಾರೆ. ಉಡುಪಿಯ ಸುತ್ತಮುತ್ತಲಿನ ರಮಣೀಯ ದೃಶ್ಯಗಳನ್ನು ಸೆರೆಹಿಡಿದು ಛಾಯಾಗ್ರಹಣ ಮಾಡಿರುವ ಈ ಚಿತ್ರ ಈಗಾಗಲೇ 2021ರಲ್ಲಿ ಕೋಲ್ಕತಾ ಅಂತಾರಾಷ್ಟ್ರೀಯ ಫಿಲಂ ಫೆಸ್ಟಿವಲ್ ನಲ್ಲಿ ಆಯ್ಕೆಯಾಗಿತ್ತು.

    ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

    EMAIL: sahakaraspandana@gmail.com

    Amche Samsar Konkani Film Bhuvanesh Prabhu Hirebettu Cinematography Jnanadaasare Karnataka State Film Award Saraswatha Souharda Society Manipal
    Previous Articleನಾಳೆ ಸಿರಿಮುಡಿ ಕ್ರೆಡಿಟ್ ಕೋ-ಆಪರೇಟಿವ್‌ ಸೊಸೈಟಿ ಉದ್ಘಾಟನೆ
    Next Article ಸಮಾಜ ಸೇವಾ ಸಹಕಾರಿ ಸಂಘದ 17ನೇ ಆಲಂಕಾರು ಶಾಖೆ ನಾಳೆ ಉದ್ಘಾಟನೆ

    Related Posts

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.