ಬ್ರಹ್ಮಾವರ: ಅನನ್ಯ ಸೌಹಾರ್ದ ಸಹಕಾರಿ ಸಂಘ ಹೇರಾಡಿ, ಇದರ ಆರನೇ ವರ್ಷದ ವಾರ್ಷಿಕ ಮಹಾಸಭೆಯು ಭಾನುವಾರ ಶ್ರೀ ರುಕ್ಮಿಣಿ ಶೆಡ್ತಿ ಸ್ಮಾರಕ ಖಾಸಗಿ ಹಿರಿಯ ಪ್ರಾಥಮಿಕ ಶಾಲೆ ಹೇರಾಡಿ ಇಲ್ಲಿ ಸಂಸ್ಥೆಯ ಅಧ್ಯಕ್ಷ ಹರೀಶ್ ಕುಮಾರ್ ಇವರ ನೇತೃತ್ವದಲ್ಲಿ ಜರುಗಿತು.
https://chat.whatsapp.com/JVAtKKe2M19AFO3W5629ZS?mode=ems_copy_t
ಅಧ್ಯಕ್ಷ ಹರೀಶ್ ಕುಮಾರ್ ಮಾತನಾಡಿ ವರದಿ ವರ್ಷದಲ್ಲಿ ಸಂಘವು 37.68 ಕೋಟಿ ರೂ. ವಹಿವಾಟು ನಡೆಸಿದ್ದು, 13.27 ಲಕ್ಷ ರೂ. ಪಾಲು ಬಂಡವಾಳ ಹೊಂದಿದೆ. 6.14 ಕೋಟಿ ರೂಪಾಯಿ ಸಂಗ್ರಹಿಸಿ 5.86 ಕೋಟಿ ರೂ. ಸಾಲ ನೀಡಲಾಗಿದ್ದು 2024-25ನೇ ಸಾಲಿನ ಆರ್ಥಿಕ ವರ್ಷದಲ್ಲಿ 17.01 ಲಕ್ಷ ರೂ. ಲಾಭ ಗಳಿಸಿದೆ. 30.18 ಲಕ್ಷ ನಿಧಿಗಳನ್ನು ಹೊಂದಿದೆ ಎಂದರು.

ಸದಸ್ಯರ ಹಾಗೂ ಸಾರ್ವಜನಿಕ ಹಿತಾಸಕ್ತಿಗಾಗಿ ಸಂಘದಲ್ಲಿ ಇ -ಸ್ಟ್ಯಾಂಪ್, ಆರ್ಟಿಸಿ ನೀಡುವ ಸೌಲಭ್ಯವಿದ್ದು ಸಂಘದ ಸದಸ್ಯರಿಗೆ ಶೇ.15 ಡಿವಿಡೆಂಡ್ ಘೋಷಣಿ ಮಾಡಲಾಗಿದೆ. ಸಭೆಯಲ್ಲಿ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ವಿದ್ಯಾರ್ಥಿವೇತನವನ್ನು ಸಂಸ್ಥೆಯ ಹಿರಿಯ ಸದಸ್ಯರಾದ ರಾಜೀವ ಶೇರ್ವೆಗಾರ್ ಇವರು ನೀಡಿದರು. ಸಹಕಾರಿಯ ಉಪಾಧ್ಯಕ್ಷ ರತ್ನಾಕರ ಶೆಟ್ಟಿ ಸ್ವಾಗತಿಸಿ, ನಿರ್ದೇಶಕ ರಾಜೇಂದ್ರ ಸೂಚನಾಪತ್ರ ಓದಿದರು. ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೇಘಾ ವರದಿ ವಾಚಿಸಿದರು. ನಿರ್ದೇಶಕ ಮಣಿಕಂಠ ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿ ಸುಧೀರ್ ನಡಾವಳಿ ವರದಿ, ನಿರ್ದೇಶಕಿ ಮಲ್ಲಿಕಾ ಹೆಚ್ಚಿನ ಖರ್ಚು ವೆಚ್ಚಗಳ ವಿವರ, ಹಾಗೂ ನಿರ್ದೇಶಕ ನಿಖಿಲ್ ಅನುಪಾಲನಾ ವರದಿ, ನಿರ್ದೇಶಕ ರಜನಿಕಾಂತ್ ಲೆಕ್ಕ ಪರಿಶೋಧನಾ ಅಧಿಕಾರಿಯವರ ಬದಲಾವಣೆ ಬಗ್ಗೆ ಮಾಹಿತಿ ನೀಡಿದರು. ನಿರ್ದೇಶಕ ನಾಗೇಂದ್ರ ವಿದ್ಯಾರ್ಥಿವೇತನ ಪಡೆದ ವಿದ್ಯಾರ್ಥಿಗಳ ಹೆಸರು ವಾಚಿಸಿದರು. ನಿರ್ದೇಶಕ ಸಂದೇಶ್ ಶೆಟ್ಟಿ ವಂದಿಸಿದರು.


