ನೂತನ ಕಟ್ಟಡದ ಉದ್ಘಾಟನೆ, ಶೇ.18 ಲಾಭಾಂಶ ಘೋಷಣೆ
ಸಿಂಧನೂರು: ಇಲ್ಲಿನ ಕಿರಣ ಸ್ವ-ಸಹಾಯ ಸೌಹಾರ್ದ ಸಹಕಾರಿ ಸಂಘದ ನೂತನ ಕಟ್ಟಡದ ಉದ್ಘಾಟನೆ ಹಾಗೂ 24ನೇ ವಾರ್ಷಿಕ ಮಹಾಸಭೆ ಇತ್ತೀಚೆಗೆ ಸಿಂಧನೂರಿನ ಶ್ರೀ ಚನ್ನಬಸವೇಶ್ವರ ದೇವಸ್ಥಾನ ಕಲ್ಯಾಣ ಮಂಟಪದಲ್ಲಿ ಜರುಗಿತು.
https://chat.whatsapp.com/JVAtKKe2M19AFO3W5629ZS?mode=ems_copy_t
ಸುಕೋ ಬ್ಯಾಂಕ್ ಸಂಸ್ಥಾಪಕ ಮನೋಹರ ಮಸ್ಕಿ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿ, ಸಹಕಾರಿಗಳಿಗೆ ವಿಶೇಷವಾಗಿ, ಕಲ್ಯಾಣ ಕರ್ನಾಟಕ ಕಲಬುರಗಿ ವಿಭಾಗದಲ್ಲಿ ಸಹಕಾರ ಸಂಘಗಳ ಇನ್ನೂ ಹೆಚ್ಚಿನ ಆರ್ಥಿಕ ಅಭಿವೃದ್ಧಿಯನ್ನು ಹೊಂದಬೇಕು, ಕಾರ್ಯದಕ್ಷತೆಯಿಂದ ಮತ್ತು ಪ್ರಾಮಾಣಿಕತೆಯಿಂದ ಸದಸ್ಯರಿಗೆ ವಿಶೇಷ ಯೋಜನೆಗಳನ್ನು ಪರಿಚಯಿಸುವುದರ ಮೂಲಕ ಉಳಿತಾಯ ಹಾಗೂ ಸಾಲ ಸೌಲಭ್ಯಗಳನ್ನು ನೀಡಬೇಕು ಎಂದು ಹೇಳಿದರು.

ಪಂಚಮವೇದ ಸಾವಯವ ಕೃಷಿ ತಜ್ಞರಾದ ದಯಾವತಿ ಮಸ್ಕಿ ಅವರು ಸಹಕಾರಿಯ ಸದಸ್ಯರ ಸಾವಯವ ಕೃಷಿಯಿಂದ ಸಶಕ್ತ, ಸಮೃದ್ಧಿ, ಗುಣಮಟ್ಟದ ಆರೋಗ್ಯವನ್ನು ಹೆಚ್ಚಿಸಿಕೊಳ್ಳಲು ತುಂಬಾ ಸಹಾಯಕಾರಿಯಾಗಿದೆ. ಸ್ವತಹ ನಾನೇ ಸಾವಯವ ಕೃಷಿಯನ್ನು ಮಾಡಿ ವಾರ್ಷಿಕವಾಗಿ ರೂ.24 ಲಕ್ಷ ಆದಾಯ ಪಡೆಯುತ್ತಿದ್ದೇನೆ ಎಂದು ತಿಳಿಸಿದರು. ನಂತರ ಸಹಕಾರಿಯ ಅಧ್ಯಕ್ಷರಾದ ಮಂಜುಳಾ ಪಾಟೀಲ್, ಅವರು ನೂತನ ಕಟ್ಟಡ ನಿರ್ಮಾಣದ ಬಗ್ಗೆ, 2024-25ನೇ ಸಾಲಿನ ವಾರ್ಷಿಕ ವರದಿ ಮಂಡನೆ ಮಾಡಿದರು. ಪ್ರಸಕ್ತ ಸಾಲಿನಲ್ಲಿ ಸಹಕಾರಿಯು ರೂ.25.59 ಲಕ್ಷ ಲಾಭ ಗಳಿಸಿದ್ದು, ಸದಸ್ಯರ ಶೇರು ಲಾಭಾಂಶವಾಗಿ ಶೇಕಡಾ 18ರಷ್ಟು ನೀಡಲು ತೀರ್ಮಾನಿಸಲಾಯಿತು.

ಹೇಮಲತಾ ಕಾರ್ಯಕ್ರಮ ನಿರೂಪಿಸಿದರು. ದೇವಿರಮ್ಮ ಸ್ವಾಗತಿಸಿದರು. ವಿಜಯಲಕ್ಷ್ಮಿ ಮಸ್ಕಿ ವಂದಿಸಿದರು. ಲೆಕ್ಕಪರಿಶೋಧಕರಾದ ಮಧುಕರ್ ಜಿ.ಹೆಗಡೆ, ಸಹಕಾರಿ ಸಂಘದ ಉಪಾಧ್ಯಕ್ಷರಾದ ನಾಗರತ್ನ ಬಂಗಾರ ಶೆಟ್ಟಿ, ನಿರ್ದೇಶಕರಾದ ಅನ್ನಪೂರ್ಣಮ್ಮ ನಾಗರಬೆಂಚಿ, ಪದ್ಮಾ ವಿ.ಸಿ ಪಾಟೀಲ್, ಹೇಮಲತಾ ಜೋಳದರಾಶಿ, ಪುಷ್ಪಾವತಿ ಖಂಡಿಮಠ, ನಂದಿನಿ ಜವಳಿ, ಶಿಲ್ಪಾ ಸಿದ್ದರಾಮಯ್ಯ, ರೇಖಾ ವೆಂಕಟೇಶ, ಪದ್ಮಾ ಶರಣಪ್ಪ, ರೇಣುಕಾ ರಂಗಪ್ಪ, ಮು.ಕಾ.ನಿ ಮಲ್ಲನಗೌಡ ಪಿ, ಹಾಗೂ ಸಿಬ್ಬಂದಿ ವರ್ಗದವರು, ಹಿರಿಯ ಸಹಕಾರಿಗಳು ಭಾಗವಹಿಸಿದ್ದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
EMAIL: sahakaraspandana@gmail.com










