ವಾರ್ಷಿಕ ಮಹಾಸಭೆಯಲ್ಲಿ ರಾಜ್ಯಮಟ್ಟದ ಸದಸ್ಯ ಶಿಕ್ಷಕರು, ಜಿಲ್ಲಾಮಟ್ಟದ 12 ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಸಂಘದ ಸದಸ್ಯ ಶಿಕ್ಷಕರಿಗೆ ಸನ್ಮಾನ
ವಿಟ್ಲ: ಅಧ್ಯಾಪಕರ ಸಹಕಾರಿ ಸಂಘ (ನಿ) ವಿಟ್ಲ ಇದರ ವಾರ್ಷಿಕ ಮಹಾಸಭೆ ಭಾನುವಾರ ಸಂಘದ ಅಧ್ಯಕ್ಷರಾದ ರಮೇಶ್ ನಾಯಕ್ ಕೆ. ಅಧ್ಯಕ್ಷತೆಯಲ್ಲಿ ವಿಠಲ ಪದವಿಪೂರ್ವ ಕಾಲೇಜು ವಿಟ್ಲ ಇದರ ಸುವರ್ಣ ರಂಗಮಂದಿರದಲ್ಲಿ ನಡೆಯಿತು.
ಸಂಘದ ಅಧ್ಯಕ್ಷರಾದ ರಮೇಶ್ ನಾಯಕ್ ಕೆ ಸ್ವಾಗತಿಸಿ, ಅಧ್ಯಕ್ಷ ಭಾಷಣ ಮಾಡಿದರು. ಸಂಘವು ವರದಿ ಸಾಲಿನಲ್ಲಿ 661 ಕೋಟಿ ರೂ. ವ್ಯವಹಾರ ನಡೆಸಿದ್ದು, 2.09 ಕೋಟಿ ರೂ. ಲಾಭ ಗಳಿಸಿದೆ. 5.57 ಕೋಟಿ ರೂಪಾಯಿ ಪಾಲು ಬಂಡವಾಳ ಹೊಂದಿದೆ. ವರ್ಷಾಂತ್ಯಕ್ಕೆ 4,906 “ಎ” ತರಗತಿ ಸದಸ್ಯರಿದ್ದು, 209 ಕೋಟಿ ರೂ. ಠೇವಣಿ ಹೊಂದಿರುತ್ತದೆ. 192.39 ಕೋಟಿ ಹೊರಬಾಕಿ ಸಾಲ ಇದ್ದು, ಲೆಕ್ಕಪರಿಶೋಧನೆಯಲ್ಲಿ ಸಂಘವು “ಎ” ಶ್ರೇಣಿಯನ್ನು ಪಡೆದುಕೊಂಡಿದೆ. ಸಂಘವು ಪ್ರಗತಿಪಥದಲ್ಲಿ ಮುನ್ನಡೆಯಲು ಸದಸ್ಯರ ಮತ್ತು ಗ್ರಾಹಕರ ಸಹಕಾರದಿಂದ ಸಾಧ್ಯವಾಗಿದೆ ಎಂದು ಮಾಹಿತಿ ನೀಡಿದರು.
https://chat.whatsapp.com/JVAtKKe2M19AFO3W5629ZS?mode=ems_copy_t
ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ವತಿಯಿಂದ ಸಂಸ್ಥೆಗೆ ನಾಲ್ಕನೇ ಬಾರಿ ಸಾಧನಾ ಪ್ರಶಸ್ತಿ ಲಭಿಸಿದೆ. 2025-26ನೇ ಸಾಲಿನ ರಾಜ್ಯಮಟ್ಟದ ಒಬ್ಬ ಸದಸ್ಯ ಶಿಕ್ಷಕರು ಹಾಗೂ ಜಿಲ್ಲಾಮಟ್ಟದ 12 ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಸಂಘದ ಸದಸ್ಯ ಶಿಕ್ಷಕರನ್ನು ಸನ್ಮಾನಿಸಲಾಯಿತು. 2024-2025 ನೇ ಸಾಲಿನಲ್ಲಿ ಅತೀ ಹೆಚ್ಚು ಅಂಕ ಗಳಿಸಿದ 75 ಸದಸ್ಯರ ಮಕ್ಕಳಿಗೆ ಪ್ರೋತ್ಸಾಹಧನ ನೀಡಿ ಗೌರವಿಸಲಾಯಿತು. ಸಂಘದಲ್ಲಿ ಸದಸ್ಯರಾಗಿದ್ದು ಮರಣ ಹೊಂದಿದ 21 ಸದಸ್ಯರಿಗೆ ನುಡಿನಮನ ಸಲ್ಲಿಸಲಾಯಿತು.


ಮುಖ್ಯ ಅತಿಥಿಗಳಾಗಿ ಜಿಲ್ಲಾ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ಶಿವಪ್ರಸಾದ್ ಶೆಟ್ಟಿ ಮತ್ತು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷರಾದ ಮಹಮ್ಮದ್ ರಿಯಾಝ್ ಉಪಸ್ಥಿತರಿದ್ದರು. ಸಂಘದ ಜನರಲ್ ಮ್ಯಾನೇಜರ್ ಸುಚಿನ್‌ರಾಜ್ ಶೆಟ್ಟಿ ವಾರ್ಷಿಕ ವರದಿ ವಾಚಿಸಿ ಲೆಕ್ಕಪತ್ರ ಮಂಡಿಸಿದರು. ಅಧ್ಯಕ್ಷರ ಅನುಮತಿಯ ಮೇರೆಗೆ ಸದಸ್ಯರೊಂದಿಗೆ ಇತರ ವಿಷಯದ ಬಗ್ಗೆ ಸಂವಾದ ನಡೆಸಿ ಸಂಘದ ವ್ಯವಹಾರದ ಬಗ್ಗೆ ಹಾಗೂ ಸಂಘದಲ್ಲಿ ಸದಸ್ಯರಿಗೆ ರೂ.2,00,000 ದವರೆಗೆ ಜಾಮೀನುರಹಿತ ಸಾಲ ದೊರೆಯುವುದಾಗಿ ತಿಳಿಸಿದರು. ಸದಸ್ಯರಿಗೆ ಎಲ್ಲಾ ಶಾಖೆಗಳಲ್ಲಿ ವ್ಯವಹಾರ ನಡೆಸಲು ಅನುಕೂಲವಾಗುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ. ಇದರ ಉಪಯೋಗ ಪಡೆದುಕೊಳ್ಳುವಂತೆ ತಿಳಿಸಲಾಯಿತು.ಸಂಘವು ವಿಟ್ಲ,ಜೋಡುಮಾರ್ಗ, ಪುತ್ತೂರು, ಬೆಳ್ತಂಗಡಿ, ಮೂಡುಬಿದಿರೆ, ಸುಳ್ಯ, ಮೂಲ್ಕಿ, ಕಡಬ ಮತ್ತು ಮಂಗಳೂರುಗಳಲ್ಲಿ ಶಾಖೆಗಳನ್ನು ಹೊಂದಿದೆ. ಇದರ ಸದುಪಯೋಗ ಪಡೆಯುವಂತೆ ಮಾಹಿತಿ ನೀಡಲಾಯಿತು. ಸಂಘದ ಉಪಾಧ್ಯಕ್ಷರಾದ ನವೀನ್ ಪಿ.ಎಸ್., ನಿರ್ದೇಶಕರಾದ ರಾಜೇಂದ್ರ ರೈ ಪಿ., ಡಾ॥ ನವೀನ್ ಕೊಣಾಜೆ, ಪುಷ್ಪರಾಜ್ ಬಿ., ಅನಿತಾ ಮಿನೇಜಸ್, ಭಾರತಿ, ಉಮಾನಾಥ ರೈ ಎಂ, ಶಿವಕುಮಾರ್ ಎಂ.ಜಿ., ನಾಗೇಶ್ ಪಾಟಾಳಿ ಕೆ., ಸಂದೇಶ್ ಎಂ.ಎಸ್., ರಘು, ರವಿ ನಾಯ್ಕ ಐ., ಲಕ್ಷ್ಮೀಕಾಂತ್ ಬೇಕಲ್ ಎಸ್., ಶ್ರೀಧರ ಎನ್., ಶೀನಪ್ಪ ಎನ್., ಅಖಿಲ್ ಶೆಟ್ಟಿ ಉಪಸ್ಥಿತರಿದ್ದರು. ಸಂಘದ ನಿರ್ದೇಶಕ ಉಮಾನಾಥ ರೈ ಎಂ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷರಾದ ನವೀನ್ ಪಿ.ಎಸ್. ವಂದಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
EMAIL: sahakaraspandana@gmail.com







