ಮಂಗಳೂರು: ಕರ್ನಾಟಕ ರಾಜ್ಯ ವಿದ್ಯುತ್ ಗುತ್ತಿಗೆದಾರರ ಸೌಹಾರ್ದ ಸಹಕಾರಿ ಸಂಘ ನಿಯಮಿತ 2024-25ನೇ ಸಾಲಿನ ಸಾಮಾನ್ಯ ಸಭೆಯನ್ನು ಯೆಯ್ಯಾಡಿಯ ಪ್ರಧಾನ ಕಚೇರಿಯ ಸಭಾಂಗಣದಲ್ಲಿ ಶನಿವಾರ ನೆರವೇರಿಸಲಾಯಿತು.
https://chat.whatsapp.com/EbVKVnWB6rlHT1mWtsgbch
ಸಹಕಾರಿಯ ಅಧ್ಯಕ್ಷರಾದ ಉರ್ಬನ್ ಪಿಂಟೋ ಅಧ್ಯಕ್ಷತೆ ವಹಿಸಿದ್ದರು. ಸಹಕಾರಿಯ ಮೂಡುಬಿದಿರೆ ಶಾಖೆಯಲ್ಲಿ ನೂರು ಸ್ವಸಹಾಯ ಗುಂಪುಗಳಲ್ಲಿ 5 ಗುಂಪುಗಳಿಗೆ ಲಾಭಾಂಶವನ್ನು ನೀಡಲಾಯಿತು. ಸಭೆಯಲ್ಲಿ ಉಪಾಧ್ಯಕ್ಷರಾದ ಸದಾಶಿವ ಬಂಗೇರ, ನಿರ್ದೇಶಕರಾದ ಶೈಲೇಶ್ ಮಲ್ಯ, ಎಡ್ವರ್ಡ್ ಸಿಕ್ವೇರ, ಕುಶಲ್ ಪೂಜಾರಿ, ರವಿಪ್ರಸಾದ್ ಶೆಟ್ಟಿ, ನವೀನ್‌ಚಂದ್ರ, ದಿನೇಶ್ ರಾವ್, ಸುಬ್ರಹ್ಮಣ್ಯ ರಾವ್, ಆರ್. ಕೆ ಪುರುಷೋತ್ತಮ್, ಅಶೋಕ್, ರವಿ ಸುವರ್ಣ, ಸುರೇಖಾ ಪುರುಷೋತ್ತಮ್ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೀವನ್ ಕೆ.ಎಸ್ ಉಪಸ್ಥಿತರಿದ್ದರು. ಸಹಕಾರಿ 2023-24ನೇ ಸಾಲಿನಲ್ಲಿ 13.5 ಕೋಟಿ ದುಡಿಯುವ ಬಂಡವಾಳ ಹೊಂದಿರುತ್ತದೆ. ಪ್ರಸ್ತುತ ಸಹಕಾರಿಯು 126 ಸ್ವಸಹಾಯ ಗುಂಪುಗಳನ್ನು ಹೊಂದಿದೆ.

