Close Menu
    Top News

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್‌ಗೆ 3.45 ಕೋಟಿ ರೂ. ಲಾಭ, ಶೇ.22 ಡಿವಿಡೆಂಡ್‌ ಘೋಷಣೆ
    News

    ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್‌ಗೆ 3.45 ಕೋಟಿ ರೂ. ಲಾಭ, ಶೇ.22 ಡಿವಿಡೆಂಡ್‌ ಘೋಷಣೆ

    adminBy adminSeptember 13, 2025

    ವಿಟ್ಲ: ಕಳೆದ 70 ವರ್ಷಗಳಿಂದ ಗ್ರಾಹಕರಿಗೆ ಉತ್ತಮ ಸೇವೆ ನೀಡಿ, ಪ್ರತೀ ವರ್ಷವೂ ಉತ್ತಮ ಲಾಭ ಗಳಿಸಿ ಸಮಾಜಮುಖಿ ಕೆಲಸಗಳಲ್ಲಿ ಜೋಡಿಸಿಕೊಂಡಿರುವ ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್‌ 2024-25ನೇ ಸಾಲಿನಲ್ಲಿ 3.45 ಕೋಟಿ ರೂಗಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇಕಡಾ 22 ಡಿವಿಡೆಂಡ್‌ ಘೋಷಿಸಲಾಗಿದೆ.

    https://chat.whatsapp.com/EbVKVnWB6rlHT1mWtsgbch
    ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್‌, 2.82 ಕೋಟಿ ರೂ. ಪಾಲು ಬಂಡವಾಳ ಹೊಂದಿದ್ದು 8ಮ515 ಸದಸ್ಯರು, 13,473 ಕೋಟಿ ರೂ. ಠೇವಣಾತಿ, ಸುಮಾರು 164.93 ಕೋಟಿ ರೂ ದುಡಿಯುವ ಬಂಡವಾಳ ಹಾಗೂ 104.13 ಕೋಟಿ ರೂ. ಸಾಲ ವಿತರಿಸಿದ್ದು, ವರದಿ ಸಾಲಿನಲ್ಲಿ ದಾಖಲೆಯ 864.42 ಕೋಟಿ ರೂಗಳ ವ್ಯವಹಾರ ನಡೆದೆ. ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ತಾಲೂಕಿನ ಬೆಳುವಾಯಿ ಗ್ರಾಮವನ್ನು ಹೊರತುಪಡಿಸಿ ಜಿಲ್ಲೆಯ ಉಳಿದೆಲ್ಲಾ ತಾಲೂಕಿನ ಕಾರ್ಯವ್ಯಾಪ್ತಿಯನ್ನು ಹೊಂದಿರುವ ಬ್ಯಾಂಕ್, ವಿಟ್ಲದಲ್ಲಿ ಪ್ರಧಾನ ಕಛೇರಿ, ಕನ್ಯಾನ, ಕಲ್ಲಡ್ಕ, ಬಿ.ಸಿ.ರೋಡ್, ಪುತ್ತೂರಿನಲ್ಲಿ ಶಾಖೆಯನ್ನು ಹೊಂದಿದೆ. ಬ್ಯಾಂಕ್ ಸಂಪೂರ್ಣ ಕಂಪ್ಯೂಟರೀಕರಣಗೊಂಡಿದ್ದು ಸಿ.ಬಿ.ಎಸ್. ವ್ಯವಸ್ಥೆಯಲ್ಲಿ ತ್ವರಿತ ಸೇವೆ ಒದಗಿಸಲಾಗುತ್ತಿದೆ. ಗ್ರಾಹಕರಿಗೆ ವ್ಯವಹಾರದ ಬಗ್ಗೆ ತ್ವರಿತವಾಗಿ ತಿಳಿದುಕೊಳ್ಳಲು ಉಚಿತವಾಗಿ ಎಸ್.ಎಂ.ಎಸ್ ಸೇವೆ ನೀಡಲಾಗುತ್ತಿದೆ.


    ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಪಿತಾಮಹ ಮೊಳಹಳ್ಳಿ ಶಿವರಾಯರ ಮಾರ್ಗದರ್ಶನದಲ್ಲಿ ದಿವಂಗತ ಉರಿಮಜಲು ವೆಂಕಪ್ಪಯ್ಯರ ನೇತೃತ್ವದಲ್ಲಿ 1955ನೇ ಇಸವಿಯಲ್ಲಿ ಸ್ಥಾಪಿತವಾದ ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ನಿಯಮಿತ ವಿಟ್ಲ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಪ್ರತಿಷ್ಠಿತ ಸಹಕಾರಿ ಸಂಸ್ಥೆಗಳಲ್ಲಿ ಒಂದಾಗಿದೆ. ಬ್ಯಾಂಕಿನ ಪ್ರಧಾನ ಕಛೇರಿ ಮತ್ತು ಪುತ್ತೂರು ಶಾಖೆಯಲ್ಲಿ ಇ-ಸ್ಟಾಂಪಿಂಗ್ (ಠಸೆ ಪೇಪರ್) ದೊರೆಯುತ್ತದೆ. ಇದಲ್ಲದೆ ಬ್ಯಾಂಕಿನ ಪ್ರಧಾನ ಕಛೇರಿ ಮತ್ತು ಕಲ್ಲಡ್ಕ ಶಾಖೆಯಲ್ಲಿ ಉತ್ಪತ್ತಿ ಈಡಿನ ಸಾಲ ಮತ್ತು ಗೋದಾಮು ವ್ಯವಸ್ಥೆ ಇರುತ್ತದೆ. ಹಾಗೆಯೇ ಪ್ರಧಾನ ಕಛೇರಿ ಮತ್ತು ಕನ್ಯಾನ ಶಾಖೆಯಲ್ಲಿ ರಸಗೊಬ್ಬರ, ಕೀಟನಾಶಕ ಮಾರಾಟದ ವ್ಯವಸ್ಥೆ ಇದೆ ಹಾಗೂ ಪ್ರಧಾನ ಕಛೇರಿಯಲ್ಲಿ ಪಡಿತರ ವಿತರಣೆ, ಬೆಳ್ತಂಗಡಿ ರಬ್ಬರ್ ಬೆಳೆಗಾರರ ಸಹಕಾರಿ ಸಂಘ ಉಜಿರೆಯ ಮೂಲಕ ಪ್ರಧಾನ ಕಛೇರಿಯಲ್ಲಿ ರಬ್ಬರ್ ಶೀಟು ಖರೀದಿ ಹಾಗೂ ರಬ್ಬರ್ ಪರಿಕರಗಳ ಮಾರಾಟದ ವ್ಯವಸ್ಥೆಯೂ ಇದೆ. ಬ್ಯಾಂಕಿನಲ್ಲಿ ಗ್ರಾಹಕರಿಗೆ ಭದ್ರತಾಕೋಶ ( ಲಾಕರ್), ಆರ್.ಟಿ.ಜಿ.ಎಸ್./ ನೆಫ್ಟ್‌ ಸೌಲಭ್ಯ ಒದಗಿಸಲಾಗಿದೆ.


    ಬ್ಯಾಂಕಿನ ಆಡಳಿತ ಮಂಡಳಿಯಲ್ಲಿ ಹೆಚ್. ಜಗನ್ನಾಥ ಸಾಲ್ಯಾನ್ ವಿಟ್ಲ ಇವರು ಅಧ್ಯಕ್ಷರಾಗಿಯೂ, ಮನೋರಂಜನ್ ಕೆ.ಆರ್. ಇವರು ಉಪಾಧ್ಯಕ್ಷರಾಗಿಯೂ, ಜಯಂತಿ ಹೆಚ್ ರಾವ್ ವಿಟ್ಲ, ಶುಭಲಕ್ಷ್ಮಿ ವಿಟ್ಲ, ಕೆ.ದಯಾನಂದ ಆಳ್ವ ಕಡಂಬು, ಪೂವಪ್ಪ ಎಸ್.ಸುರುಳಿಮೂಲೆ, ದಿವಾಕರ ವಿಟ್ಲ, ಕೇಶವ ಎ ಕೆಲಿಂಜ, ಗೋವರ್ಧನ್ ಕುಮಾರ್ ಐ, ಭಾಸ್ಕರ ಶೆಟ್ಟಿ ಕನ್ಯಾನ, ರಾಮದಾಸ ಶೆಣೈ ವಿಟ್ಲ, ಮೋಹನ್ ಕೆ.ಎಸ್ ಉರಿಮಜಲು, ವಿಶ್ವನಾಥ ಎಂ. ವೀರಕಂಭ, ತಿರುಮಲೇಶ್ವರ ಭಟ್ ಪಿ ಕಲ್ಲಡ್ಕ, ಸತೀಶ ಪಿ ಪಂಜಿಗದ್ದೆ ಇವರುಗಳು ನಿರ್ದೇಶಕರಾಗಿಯೂ ಕೃಷ್ಣ ಮುರಳಿ ಶ್ಯಾಮ್. ಕೆ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

    ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

    EMAIL: sahakaraspandana@gmail.com

    Cooperative Cooperative Department Cooperative Registrar H Jagannatha Salyan Vitla Varshika Mahasabhe Vitla Grameena Sahakari Bank
    Previous Articleನಾಳೆ ಗುಟ್ಟೇ ಬಸವಣ್ಣ ಸೌಹಾರ್ದ ಸಹಕಾರಿ ನಿಯಮಿತದ 2024-25ನೇ ಸಾಲಿನ ವಾರ್ಷಿಕ ಮಹಾಸಭೆ
    Next Article ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 2024-25ನೇ ಸಾಲಿನಲ್ಲಿ ರೂ. 545 ಕೋಟಿ ವ್ಯವಹಾರ, ರೂ. 1.93 ಕೋಟಿ ಲಾಭ

    Related Posts

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.