ರೂ. 5.04 ಕೋಟಿ ಲಾಭ, ವಾರ್ಷಿಕ ಮಹಾಸಭೆಯಲ್ಲಿ ಘೋಷಣೆ
ಬಂಟ್ವಾಳ: ಸಮಾಜ ಸೇವಾ ಸಹಕಾರಿ ಸಂಘ ಬಂಟ್ವಾಳ ಇದರ ವಾರ್ಷಿಕ ಮಹಾಸಭೆ ಭಾನುವಾರ ಬಿ.ಸಿ.ರೋಡಿನ ಜೋಡುಮಾರ್ಗ ಉದ್ಯಾನವನದ ಬಳಿ ಇರುವ “ಸ್ಪರ್ಶಾ ಕಲಾ ಮಂದಿರ”ದ ಸಭಾಂಗಣದಲ್ಲಿ ಸಂಘದ ಅಧ್ಯಕ್ಷರಾದ ಸುರೇಶ ಕುಲಾಲ್‌ರವರ ಅಧ್ಯಕ್ಷತೆಯಲ್ಲಿ ಜರಗಿತು. ಮಹಾಸಭೆಯಲ್ಲಿ 2024-25ನೇ ಸಾಲಿಗೆ ಶೇ.17ರಂತೆ ಡಿವಿಡೆಂಡ್ ನೀಡಲು ನಿರ್ಧರಿಸಲಾಯಿತು.
https://chat.whatsapp.com/EbVKVnWB6rlHT1mWtsgbch
ಸಂಘದಲ್ಲಿ 9047 ಸದಸ್ಯರಿದ್ದು ಪಾಲು ಬಂಡವಾಳ ರೂ. 9.09 ಕೋಟಿ, ಠೇವಣಾತಿಗಳು ರೂ.229.47 ಕೋಟಿ, ನಿಧಿಗಳು 19.78 ಕೋಟಿ, ವಿನಿಯೋಗಗಳು 55.55 ಕೋಟಿ, ಸಾಲಗಳು ರೂ. 216.37 ಕೋಟಿ, ವಸೂಲಾತಿ ಶೇಕಡ 95.04 ಆಗಿರುತ್ತದೆ. 2024-25ನೇ ಸಾಲಿನಲ್ಲಿ ರೂ. 1158.43 ಕೋಟಿ ವ್ಯವಹಾರ ನಡೆಸಿ ರೂ. 5.04 ಕೋಟಿ ಲಾಭ ಗಳಿಸಿದೆ. ಸಂಘದ ದುಡಿಯುವ ಬಂಡವಾಳ ರೂ.259.66 ಕೋಟಿ ಆಗಿದೆ. ಆಡಿಟ್ ವರ್ಗೀಕರಣದಲ್ಲಿ ‘ಎ’ ತರಗತಿ ದಾಖಲಾಗಿದೆ. ಸಂಘದ ಸದಸ್ಯರಿಗೆ ಠೇವಣಿ ಮುಖೇನ ಉತ್ತಮ ಸೇವಾ ಸೌಲಭ್ಯ ನೀಡುವಂತಹ ಸಮಾಜ ಸಂಧ್ಯಾ ಸಮೃದ್ಧಿ ನಿಧಿಯನ್ನು ಹಿರಿಯ ಸದಸ್ಯರು ಸಾಂಕೇತಿಕವಾಗಿ ಉದ್ಘಾಟಿಸಿದರು.


ಸಂಘದ ಉಪಾಧ್ಯಕ್ಷರಾದ ಜನಾರ್ಧನ ಕುಲಾಲ್, ಆಡಳಿತ ಮಂಡಳಿ ಸದಸ್ಯರಾದ ಬಿ.ರಮೇಶ್ ಸಾಲ್ಯಾನ್, ಸತೀಶ, ಸುರೇಶ್ ಎನ್., ರಮೇಶ್ ಸಾಲ್ಯಾನ್, ಅರುಣ್ ಕುಮಾರ್, ಭೋಜ ಸಾಲಿಯಾನ್, ಕಿರಣ್ ಕುಮಾರ್ ಎ., ಪ್ರೇಮನಾಥ ಬಂಟ್ವಾಳ್, ಹರೀಶ, ವಿದ್ಯಾ, ಮಾಲತಿ ಮಚೇಂದ್ರ, ಎಂ.ಕೆ ಗಣೇಶ್ ಸಮಗಾರ, ಜಗನ್ನಿವಾಸ ಗೌಡ, ರೇಖಾ ನಾಯ್ಕ ಉಪಸ್ಥಿತರಿದ್ದರು.

ನಿರ್ದೇಶಕರಾದ ಸತೀಶ ಸ್ವಾಗತಿಸಿದರು. ವಾರ್ಷಿಕ ವರದಿ ಹಾಗೂ ಲೆಕ್ಕಪತ್ರಗಳನ್ನು ಮಂಡಿಸಿ ಸರ್ವಾನುಮತದಿಂದ ಮಂಜೂರಾತಿ ಪಡೆಯಲಾಯಿತು. ಸದಸ್ಯರ ಪ್ರಶ್ನೆಗಳಿಗೆ ಅಧ್ಯಕ್ಷರು, ಪ್ರಧಾನ ವ್ಯವಸ್ಥಾಪಕರು ಉತ್ತರ ನೀಡಿದರು. ಸಂಘದ ಪ್ರಗತಿ, ಆಡಳಿತ ಮಂಡಳಿಯ ಮುಂದಿನ ಯೋಚನೆ ಮತ್ತು ಯೋಜನೆಯನ್ನು ಅಧ್ಯಕ್ಷರು ಸಭೆಯ ಮುಂದಿಟ್ಟು ಸದಸ್ಯರ ಸಲಹೆ ಪಡೆದು ಸಹಕಾರ ಕೋರಿದರು. ಸದಸ್ಯರು ಸಲಹೆ ಸೂಚನೆ ನೀಡಿದರು, ಸಹಾಯಕ ಪ್ರಧಾನ ವ್ಯವಸ್ಥಾಪಕ ಮೋಹನ್ ಎಂ.ಕೆ. ಮತ್ತು ವ್ಯವಸ್ಥಾಪಕರಾದ ವಿನೋದ್ ಕುಮಾರ್ ಸಹಕರಿಸಿದರು. ನಿರ್ದೇಶಕರಾದ ಕಿರಣ್ ಕುಮಾರ್ ಎ. ವಂದಿಸಿದರು. ಬಳಿಕ ಸನಾತನ ನಾಟ್ಯಾಲಯ ಮಂಗಳೂರು ಇವರಿಂದ ನೃತ್ಯ ಕಾರ್ಯಕ್ರಮ ಮತ್ತು ಸಹಕಾರಿ ಬಂಧುಗಳಿಂದ ಮನರಂಜನೆ ಕಾರ್ಯಕ್ರಮ ನೆರವೇರಿತು.

