ಉಳ್ಳಾಲ: ಜಯಭಾರತ ಸೌಹಾರ್ದ ಸಹಕಾರಿ ಸಂಘ ತೊಕ್ಕೊಟ್ಟು ಇದರ ವಾರ್ಷಿಕ ಸಾಮಾನ್ಯ ಸಭೆಯು ಶನಿವಾರ ನಡೆಯಿತು.
2024ರ ಏಪ್ರಿಲ್ 14ರಂದು ತೊಕ್ಕೊಟ್ಟು ಜಂಕ್ಷನ್‌ನ ಗ್ರ್ಯಾಂಡ್ ಸಿಟಿಯಲ್ಲಿ ಉದ್ಘಾಟಿಸಿ ವ್ಯವಹಾರ ಪ್ರಾರಂಭಿಸಲಾಗಿದ್ದು, 13 ಚುನಾಯಿತ ನಿರ್ದೇಶಕರಿಂದ ಮುನ್ನಡೆಯುತ್ತಿದೆ. ಅಧ್ಯಕ್ಷರಾಗಿ ವಿಕ್ರಮ್ ಬಂಗೇರ, ಉಪಾಧ್ಯಕ್ಷರಾಗಿ ಆನಂದ ಗಟ್ಟಿ ಕಾರ್ಯನಿರ್ವಹಿಸುತ್ತಿದ್ದು, ಕೆ.ನಾರಾಯಣ ಶೆಟ್ಟಿ, ನೋರ್ಬರ್ಟ್ ಡಿಸೋಜ, ಸಂದೇಶ್ ಡಿ.ಪೂಜಾರಿ, ಡಾ.ಭಾರತಿ ಆರ್., ಆದರ್ಶ ಕೆ.ಎಸ್., ವಿಜಯಲಕ್ಷ್ಮಿ, ಚಂದ್ರಿಕಾ ರೈ, ಸಂದೀಪ ಪೂಜಾರಿ, ಸುಜಿತಾ ಹಾಗೂ ಶಿವರಾಜ್ ನಿರ್ದೇಶಕರಾಗಿದ್ದಾರೆ. ಆಡಳಿತಾತ್ಮಕ ನಿರ್ದೇಶಕರಾಗಿ ಶಶಿಧರ ಶೆಟ್ಟಿ ಕಟೀಲು, ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಜಯಲಕ್ಷ್ಮೀ ಎ.ಎಸ್ ಕಾರ್ಯನಿರ್ವಹಿಸುತ್ತಿದ್ದಾರೆ.
https://chat.whatsapp.com/EbVKVnWB6rlHT1mWtsgbch
ಸಂಘದಲ್ಲಿ 481 ಎ ತರಗತಿ ಸದಸ್ಯರಿದ್ದು, ವರದಿ ವರ್ಷದ ಆರಂಭದಲ್ಲಿ 6,12,900 ರೂ. ಶೇರು ಬಂಡವಾಳವಿದ್ದು ಪ್ರಸಕ್ತ ವರ್ಷ 2,77,700 ರೂ. ಶೇರು ಬಂಡವಾಳ ಜಮೆಯಾಗಿದ್ದು, 4,73,600 ರೂ. ಪಾವತಿಯಾಗಿ ವರ್ಷಾಂತ್ಯಕ್ಕೆ 4,17,000 ಶೇರು ಬಂಡವಾಳವಿದೆ. 2,00,46,210 ರೂ. ವಿವಿಧ ಠೇವಣಾತಿಗಳಿವೆ. ನೀಡಲಾಗಿರುವ ಸಾಲ ಶೇ.100ರಷ್ಟು ಮರುಪಾವತಿಯಾಗಿದ್ದು, ಸಂಘದ ಆಡಳಿತ ಮಂಡಳಿ, ಸಿಬ್ಬಂದಿಗಳ ಪರಿಶ್ರಮದಿಂದ ಇದು ಸಾಧ್ಯವಾಗಿದೆ.

ಸಂಘದ ಅಧ್ಯಕ್ಷ ವಿಕ್ರಮ್ ಬಂಗೇರ ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದರು. ಶಶಿಕಲ ಗಟ್ಟಿ ಪ್ರಾರ್ಥಿಸಿದರು. ನಿರ್ದೇಶಕರಾದ ಡಾ.ಭಾರತಿ ಆರ್ ಸ್ವಾಗತಿಸಿ ವಂದಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಲಕ್ಷಿ ಎ.ಎಸ್ ವಾರ್ಷಿಕ ವರದಿ ವಾಚಿಸಿದರು. ಸದಸ್ಯರಿಗೆ ಅತ್ಯುತ್ತಮ ಗ್ರಾಹಕ ಪ್ರಶಸ್ತಿ, ಅತ್ಯುತ್ತಮ ಸ್ವ-ಸಹಾಯ ಸಂಘ ಪ್ರಶಸ್ತಿ ಅತ್ಯುತ್ತಮ ಸಿಬ್ಬಂದಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
EMAIL: sahakaraspandana@gmail.com


