ಮಂಡ್ಯ: ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನಲ್ಲಿ ಜಿಲ್ಲೆಯ ಎಲ್ಲಾ ಸೌಹಾರ್ದ ಸಹಕಾರಿ ಸಂಘಗಳಿಗೆ ಸದಸ್ಯತ್ವ ನೀಡಲು ಒತ್ತಾಯಿಸಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಜೋಗಿಗೌಡ ಅವರಿಗೆ ಪದಾಧಿಕಾರಿಗಳು ಮನವಿ ಪತ್ರ ಸಲ್ಲಿಸಿದರು.
https://chat.whatsapp.com/EbVKVnWB6rlHT1mWtsgbch
ಬಳಿಕ ಮಾತನಾಡಿದ ಜಿಲ್ಲಾ ಸೌಹಾರ್ದ ಸಹಕಾರಿ ಸಂಘಗಳ ಒಕ್ಕೂಟ ಅಧ್ಯಕ್ಷ ಬಿ.ಟಿ.ಗುರುರಾಜ್, ಜಿಲ್ಲೆಯ ಕೇಂದ್ರ ಸಹಕಾರ ಬ್ಯಾಂಕಿನಲ್ಲಿ ಜಿಲ್ಲೆಯಾದ್ಯಂತ 35 ಸೌಹಾರ್ದ ಸಹಕಾರಿ ಸಂಘಗಳು ಸಕ್ರಿಯವಾಗಿದ್ದು, ವಾರ್ಷಿಕ 100 ಕೋಟಿಗೂ ಅಧಿಕ ವಹಿವಾಟು ನಡೆಸುತ್ತಿದ್ದು, ಸರಿಸುಮಾರು 3,000 ಸದಸ್ಯರನ್ನು ಒಳಗೊಂಡಿದೆ. ಈ ಮೂಲಕ ಜಿಲ್ಲಾ ಸಹಕಾರ ಕ್ಷೇತ್ರದಲ್ಲಿ ತನ್ನದೇ ಆದ ಮಹತ್ವದ ಪಾತ್ರವನ್ನು ನಿರ್ವಹಿಸುತ್ತಿವೆ, ಸೌಹಾರ್ದ ಸಹಕಾರಿ ಸಂಘಗಳ ಬೆಳವಣಿಗೆಯು ದೃಷ್ಟಿಕೋನದಿಂದ ಹಾಗೂ ಜಿಲ್ಲಾ ಸೌಹಾರ್ದ ಸಹಕಾರಿಗಳ ಚಳುವಳಿ ಬಲಿಷ್ಟವಾಗಲು (ಪ್ರಬಲವಾಗಲು) ಜಿಲ್ಲಾ ಕೇಂದ್ರ ಸಹಕಾರ. ಬ್ಯಾಂಕಿನ ಸದಸ್ಯತ್ವ ಅನಿರ್ವಾವಾಗಿದೆ ಎಂದು ಒತ್ತಾಯಿಸಿದರು.


ಈಗಾಗಲೇ ಸಹಕಾರ ಸಂಘಗಳ ನಿಬಂಧಕರು ಕರ್ನಾಟಕ ರಾಜ್ಯ ದಿನಾಂಕ 6-12-2003ರಲ್ಲಿ ಪತ್ರದ ಸಂಖ್ಯೆ ಆರ್ ಎಸ್ ಆರ್/ಸೌಕ/೧೬೪/ ಎಕ್ಸ್ ಎಂಸಿ/೨೦೦೩-೦೪ ಸುತ್ತೋಲೆಯಲ್ಲಿ ಕರ್ನಾಟಕ ರಾಜ್ಯದ ಸಹಕಾರ ಸಂಘಗಳ ಕಾಯ್ದೆ 1949 ಕಲಂ ೧೬(೧)(ಇ) ನಂತೆ ಜಾರಿಯಲ್ಲಿರುವ ಯಾವುದೇ ಕಾನೂನಿನ ಅಡಿಯಲ್ಲಿ ರಚಿತವಾದ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಸಹಕಾರ ಸಂಘಗಳನ್ನು ಮತ್ತು ಸಂಸ್ಥೆಗಳನ್ನು ಆಯಾ ಜಿಲ್ಲೆಯ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನಲ್ಲಿ ಸದಸ್ಯತ್ವವನ್ನು ನೀಡಬಹುದಾಗಿದೆ ಎಂದು ಸರ್ಕಾರದ ಸ್ಪಷ್ಟ ಆದೇಶವಿದೆ ಎಂದು ಮಾಹಿತಿ ನೀಡಿದರು.
ಕರ್ನಾಟಕದ ಇತರೇ ಜಿಲ್ಲೆಯಲ್ಲಿ ಸೌಹಾರ್ದ ಸಹಕಾರಿ ಸಂಘಗಳಿಗೆ ಆಯಾ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನಲ್ಲಿ ಸದಸ್ಯತ್ವವನ್ನು ನೀಡಲಾಗಿದೆ. ಆದರೇ ಮಂಡ್ಯ ಜಿಲ್ಲೆಯ ಕೇಂದ್ರ ಸಹಕಾರ ಬ್ಯಾಂಕಿನಲ್ಲಿ ಸೌಹಾರ್ದ ಸಹಕಾರಿ ಸಂಘಗಳಿಗೆ ಇದುವರೆಗೂ ಸದಸ್ಯತ್ವವನ್ನು ನೀಡದೇ ಜಿಲ್ಲೆಯ ಸಹಕಾರಿಗಳಿಗೆ ಅನ್ವಯವಾಗುತ್ತಿದ್ದು ಈ ದೃಷ್ಟಿಯಿಂದ ಜಿಲ್ಲೆಯ ಎಲ್ಲಾ ಸೌಹಾರ್ದ ಸಹಕಾರಿ ಸಂಘಗಳ ಪರವಾಗಿ ಮಂಡ್ಯ ಜಿಲ್ಲಾ ಸೌಹಾರ್ದ ಸಹಕಾರಿ ಸಂಘಗಳ ಒಕ್ಕೂಟ ಮನವಿ ಮಾಡುತ್ತಿದೆ ಎಂದು ಬಿ.ಟಿ.ಗುರುರಾಜ್ ಒತ್ತಾಯಿಸಿದರು.
ವಿವಿಧ ಸೌಹಾರ್ದ ಸಹಕಾರಿ ಸಂಘಗಳ ಪದಾಧಿಕಾರಿಗಳಾದ ಎ.ಸಿ.ರಮೇಶ್, ವೆಂಕಟೇಶ್, ಸಿದ್ದಲಿಂಗಯ್ಯ, ದೊರೆಸ್ವಾಮಿ, ಪಲ್ಲವಿಗುರುರಾಜ್, ಚೈತನ್ಯ, ಆಶಾ, ರಂಜಿತ್ ಮತ್ತಿತರರು ಉಪಸ್ಥಿತರಿದ್ದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
EMAIL: sahakaraspandana@gmail.com



