ಮಂಗಳೂರು: ಕಿರಣ್ ಗೇಮ್ಸ್ ಟೀಮ್ ಮಾರ್ನಮಿಕಟ್ಟೆ ಇದರ 55ನೇ ವಾರ್ಷಿಕೋತ್ಸವ ಅಂಗವಾಗಿ ರಾಮಕೃಷ್ಣ ಮಿಷನ್ ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ವಿಶ್ವಕರ್ಮ ಸಹಕಾರ ಬ್ಯಾಂಕ್ ರಥಬೀದಿ, ಮಂಗಳೂರು ಮತ್ತು ಮಹಾರಾಣಾ ಪ್ರತಾಪ್ ಸ್ಪೋರ್ಟ್ಸ್ ಕ್ಲಬ್ ಮಂಗಳೂರು ಇವರ ಸಹಯೋಗದಲ್ಲಿ ಮಂಗಳೂರಿನ ಪ್ರತಿಷ್ಠಿತ ಕೆ.ಎಂ.ಸಿ. ಆಸ್ಪತ್ರೆ ಮತ್ತು ಕೆ.ಎಸ್. ಹೆಗ್ಡೆ ಆಸ್ಪತ್ರೆಗಳ ಸಹಭಾಗಿತ್ವದಲ್ಲಿ ಮಂಗಳೂರಿನ ಖ್ಯಾತ ತಜ್ಞ ವೈದ್ಯರ ಉಪಸ್ಥಿತಿಯಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಮತ್ತು ರಕ್ತದಾನ ಶಿಬಿರ ಭಾನುವಾರ ಮಂಗಳಾದೇವಿ ದೇವಸ್ಥಾನದ ಬಳಿಯ ರಾಮಕೃಷ್ಣ ಆಶ್ರಮದಲ್ಲಿ ನಡೆಯಿತು.
https://chat.whatsapp.com/EbVKVnWB6rlHT1mWtsgbch
ಉದ್ಘಾಟನಾ ಸಮಾರಂಭದಲ್ಲಿ ರಾಮಕೃಷ್ಣ ಮಿಷನ್ ಮುಖ್ಯಸ್ಥರಾದ ಸ್ವಾಮಿ ಜಿತಕಾಮಾನಂದಜೀ ದೀಪ ಪ್ರಜ್ವಲನೆಗೈದರು. ಮೂಡುಬಿದಿರೆ ಆಳ್ವಾಸ್ ಎಜುಕೇಶನ್ ಫೌಂಡೇಶನ್ ಅಧಕ್ಷರಾದ ಡಾ|ಎಂ.ಮೋಹನ್ ಆಳ್ವ ಉದ್ಘಾಟಿಸಿದರು. ಕೆ.ಎಂ.ಸಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ| ಚಕ್ರಪಾಣಿ ಎಂ. ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಂಗಳೂರಿನ ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ, ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್ ಆರ್., ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷರಾದ ಪಿ.ಬಿ.ಹರೀಶ್ ರೈ, ಚಲನಚಿತ್ರ ನಟ ರೂಪೇಶ್ ಶೆಟ್ಟಿ, ವಿಶ್ವಕರ್ಮ ಸಹಕಾರಿ ಬ್ಯಾಂಕ್ ಅಧ್ಯಕ್ಷರಾದ ಡಾ| ಎಸ್. ಆರ್. ಹರೀಶ್ ಆಚಾರ್ಯ, ವಕೀಲರಾದ ರಾಘವೇಂದ್ರ ರಾವ್, ಟೀಮಿನ ಅಧ್ಯಕ್ಷರಾದ ಕಿಶೋರ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ಕಿರಣ್ ಗೇಮ್ಸ್ ಟೀಮ್ ಸಂಸ್ಥಾಪಕರಾದ ಚಂದ್ರಹಾಸ ಶೆಟ್ಟಿ ಇವರನ್ನು ಅಭಿನಂದಿಸಲಾಯಿತು.
ಗುರುಪ್ರಸಾದ್ ಶೆಟ್ಟಿ ಸ್ವಾಗತಿಸಿ, ಯತಿರಾಜ್ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಕಿಶೋರ್ ಕುಮಾರ್ ಶೆಟ್ಟಿ ವೈದ್ಯರ ಪರಿಚಯ ನೀಡಿದರು, ಗಿರೀಶ್ ಶೆಟ್ಟಿ ವಂದಿಸಿದರು. ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಶಿಬಿರದಲ್ಲಿ ಶ್ವಾಸಕೋಶ, ಸಕ್ಕರೆ ಖಾಯಿಲೆ, ಲಿವರ್, ಉಬ್ಬಸ,ಜ್ವರ, ಥೈರಾಯಿಡ್ ತಜ್ಞರಾದ ಡಾ| ಚಕ್ರಪಾಣಿ ಎಂ. ಹಾಗೂ ಡಾ.ಬಿ. ದೇವದಾಸ್ ರೈ, ಹೃದಯ ಸಂಬಂಧಿತ ಖಾಯಿಲೆಗಳ ತಜ್ಞರಾದ ಡಾ| ಪದ್ಮನಾಭ ಕಾಮತ್, ಕಿವಿ, ಮೂಗು, ಗಂಟಲು ತಜ್ಞರಾದ ಡಾ| ವಿಜಯೇಂದ್ರ ಶೆಣೈ, ಮೂತ್ರಪಿಂಡ , ಕಿಡ್ನಿ ಸಮಸ್ಯೆ ತಜ್ಞರಾದ ಡಾ| ಭೂಷಣ್ ಶೆಟ್ಟಿ, ಬೆನ್ನುನೋವು, ಗಂಟು, ಮಂಡಿನೋವು, ಸಂಧಿವಾತ ತಜ್ಞರಾದ ಡಾ| ದೀಪಕ್ ಹೆಗ್ಡೆ, ನೇತ್ರ ಪರೀಕ್ಷೆ, ಕಣ್ಣಿನ ಪೊರೆ ಹಾಗೂ ಇತರ ಚಿಕಿತ್ಸೆ ತಜ್ಞರಾದ ಡಾ| ಕೀರ್ತನ್ ರಾವ್, ಸ್ತ್ರೀ ರೋಗ ಮತ್ತು ಪ್ರಸೂತಿ ತಜ್ಞೆ ಡಾ| ವೀಣಾ ಆರ್. ಭಟ್, ವೈದ್ಯಕೀಯ ಚಿಕಿತ್ಸೆ ತಜ್ಞರಾದ ಡಾ| ಪ್ರಜೀತ್ ಹೆಗ್ಡೆ ಭಾಗವಹಿಸಿದರು.

