ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅಭಿಪ್ರಾಯ
ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸುಳ್ಯಪದವು ಶಾಖೆಯ ಪ್ರಕೃತಿ ಸಹಕಾರ ಸೌಧ ಉದ್ಘಾಟನೆ
ಪುತ್ತೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ತನ್ನ ಪಾರದರ್ಶಕ ಕಾರ್ಯ ಚಟುವಟಿಕೆಗಳ ಮೂಲಕ ಸಹಕಾರಿ ಸಂಘಗಳು ರಾಷ್ಟ್ರೀಯ ಬ್ಯಾಂಕ್‌ಗಳನ್ನು ಮೀರಿ ಬೆಳೆದಿದೆ. ಸಹಕಾರಿ ವ್ಯವಸ್ಥೆಯ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ನವೋದಯ ಸ್ವಸಹಾಯ ಸಂಘಗಳಿಂದ ಮಹಿಳೆಯರಿಗೆ ಶಕ್ತಿ ತುಂಬುವ ಕಾರ್ಯವಾಗಿದೆ, ದೇಶ ಆರ್ಥಿಕವಾಗಿ 3ನೇ ಸ್ಥಾನಕ್ಕೆ ಹೋಗುವಲ್ಲಿ ಸಹಕಾರಿ ಸಂಘಗಳ ಕೊಡುಗೆ ಬಹಳಷ್ಟಿದೆ.ಗ್ರಾಹಕರ ವಿಶ್ವಾಸ ಗಳಿಸಿದ ಕಾರಣದಿಂದಾಗಿಯೇ ಸಹಕಾರಿ ಸಂಘಗಳು ಅದ್ಭುತ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಮಾಜಿ ಸಂಸದ ನಳಿನ್‌ಕುಮಾರ್ ಕಟೀಲು ಹೇಳಿದರು.
https://chat.whatsapp.com/EbVKVnWB6rlHT1mWtsgbch
ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸುಳ್ಯಪದವು ಶಾಖೆಯ ನೂತನ ಕಚೇರಿ ಕಟ್ಟಡ ‘ಪ್ರಕೃತಿ ಸಹಕಾರ ಸೌಧ’ ವನ್ನು ಗುರುವಾರ ಉದ್ಘಾಟಿಸಿ, ಮಾತನಾಡಿದರು.
ಸಹಕಾರ ಕ್ಷೇತ್ರದ ಅಭ್ಯುದಯಕ್ಕಾಗಿಯೇ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಹಕಾರ ಕ್ಷೇತ್ರಕ್ಕಾಗಿಯೇ ವಿಶೇಷ ಸಚಿವಾಲಯವನ್ನು ತೆರೆದಿದೆ. ಗ್ರಾಮಕ್ಕೊಂದು ಸಹಕಾರಿ ಸಂಘ ತೆರೆಯುವ ಕಲ್ಪನೆಯೂ ಇದ್ದು, ಸಹಕಾರಿ ಕ್ಷೇತ್ರಕ್ಕೆ ಇನ್ನಷ್ಟು ಆದ್ಯತೆ ನೀಡುವ ಕೆಲಸವಾಗುತ್ತಿದೆ. ಮೊಳಹಳ್ಳಿ ಶಿವರಾಯರಿಂದ ಹಿಡಿದು ಇಲ್ಲಿನ ಸಹಕಾರಿಗಳ ಮಾರ್ಗದರ್ಶನದಿಂದಾಗಿಯೇ ಇಂದು ಪಾರದರ್ಶಕ ವ್ಯವಸ್ಥೆಯೊಂದಿಗೆ ಸಹಕಾರಿ ರಂಗ ಶತಮಾನ ಕಂಡಿದೆ ಎಂದು ಅವರು ಹೇಳಿದರು.
ಆಡಳಿತ ಕಚೇರಿಯನ್ನು ಉದ್ಘಾಟಿಸಿದ ಮಾಜಿ ಶಾಸಕ ಸಂಜೀವ ಮಠಂದೂರು, ಸಹಕಾರಿ ತತ್ವ ದ.ಕ.ಜಿಲ್ಲೆಯಲ್ಲಿ ಅದ್ಭುತವಾಗಿ ಬೆಳೆದಿದ್ದು, ಇದು ಈ ಮಣ್ಣಿನ ಗುಣವಾಗಿದೆ. ರೈತರ ಎಲ್ಲಾ ಬೇಡಿಕೆಗಳನ್ನು ಈಡೇರಿಸುವ ಮೂಲಕ ರೈತರಿಗೆ ಆರ್ಥಿಕ ಚೈತನ್ಯ ತುಂಬುವ ಕೆಲಸವನ್ನು ಸಹಕಾರಿ ಸಂಘಗಳು ಮಾಡುತ್ತಿವೆ. ಸಹಕಾರಿ ಸಂಘಗಳು ಸರ್ಕಾರದ ಹಿಡಿತದಿಂದ ಆದಷ್ಟು ದೂರವಿದ್ದು ಸ್ವಂತಿಕೆಯಿಂದ ಕಾರ್ಯಾಚರಿಸಿದರೆ ಇನ್ನಷ್ಟು ಶಕ್ತಿ ಬರಲು ಸಾಧ್ಯ ಎಂದು ಹೇಳಿದರು.
ಭದ್ರತಾ ಕೊಠಡಿಯನ್ನು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ನ್ಯಾಯಬೆಲೆ ಅಂಗಡಿಯನ್ನು ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಎಸ್.ಬಿ.ಜಯರಾಮ ರೈ ಬಳೆಜ್ಜ, ರಸಗೊಬ್ಬರ ಗೋದಾಮನ್ನು ಪುತ್ತೂರು ಉಪವಿಭಾಗದ ಸಹಕಾರಿ ಸಂಘಗಳ ಸಹಾಯಕ ನಿಬಂಧಕ ರಘು ಎಸ್.ಎಂ ಉದ್ಘಾಟಿಸಿದರು. ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ ಅಧ್ಯಕ್ಷತೆ ವಹಿಸಿದ್ದರು. ಪ್ರಗತಿಪರ ಕೃಷಿಕ ರಾಮ ಭಟ್ ಬೀರಮಲೆ ದೀಪ ಬೆಳಗಿಸಿದರು. ಅಕ್ರಮ-ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು ಮುಖ್ಯ ಅತಿಥಿಯಾಗಿದ್ದರು.
ಸುಳ್ಯಪದವು ಸರ್ವೋದಯ ಪ್ರೌಢಶಾಲೆಯ ಸಂಚಾಲಕ ಮಹಾದೇವ ಭಟ್ ಕೊಲ್ಯ, ಪಡುಮಲೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ್ ರೈ ಕಟ್ಟಾವು, ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಚಂದುಕೂಡ್ಲು ಶ್ರೀನಿವಾಸ ಭಟ್, ಸುಳ್ಯಪದವು ಅಯ್ಯಪ್ಪ ಭಜನಾ ಮಂದಿರದ ಅಧ್ಯಕ್ಷ ಶೇಷಪ್ಪ ಪೂಜಾರಿ ಕಡಮಗದ್ದೆ, ಬಡಗನ್ನೂರು ಗ್ರಾಪಂ ಅಭಿವೃದ್ಧಿ ಅಧಿಕಾರಿ ಕೆ.ಪಿ.ಸುಬ್ಬಯ್ಯ, ಸುಳ್ಯಪದವಿನ ಕೊರಗಜ್ಜ ಸೇವಾ ಸಮಿತಿಯ ಅಧ್ಯಕ್ಷ ಬೆಳ್ಳಿಯಪ್ಪ ಗೌಡ, ಸುಳ್ಯಪದವು ಅಯ್ಯಪ್ಪ ಭಜನಾ ಮಂದಿರ ಆರಾಧನಾ ಸಮಿತಿ ಟ್ರಸ್ಟಿನ ಅಧ್ಯಕ್ಷ ಶ್ರೀಪತಿ ಭಟ್ ಇಂದಾಜೆ, ಸುಳ್ಯಪದವು ಆಯುಧ ಪೂಜಾ ಸಮಿತಿಯ ಅಧ್ಯಕ್ಷ ಗಿರೀಶ್ ಕುಮಾರ್ ಕನ್ನಡ್ಕ, ಸುಳ್ಯಪದವು ಯುವಶಕ್ತಿ ಕಲಾ ಮತ್ತು ಕ್ರೀಡಾ ಬಳಗದ ಅಧ್ಯಕ್ಷ ಗುರುಕಿರಣ್ ರೈ ಎನ್.ಜಿ, ಸುಳ್ಯಪದವು ಹಾಲು ಉತ್ಪಾಕರ ಸಹಕಾರಿ ಸಂಘದ ಅಧ್ಯಕ್ಷ ಅರುಣ್ ಕುಮಾರ್ ಕೆ ಅತಿಥಿಗಳಾಗಿದ್ದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವಾನಿ ಬಿ.ಆರ್. ಸಂಘದ ವರದಿ ಮಂಡಿಸಿದರು. ಸಂಘದ ಉಪಾಧ್ಯಕ್ಷ ಸೂರ್ಯನಾರಾಯಣ ಭಟ್, ನಿರ್ದೇಶಕರಾದ ಉಮೇಶ್ ಗೌಡ ಕೆ.ಕನ್ನಯ, ವಿನೋದ್ ಶೆಟ್ಟಿ ಅರಿಯಡ್ಕ, ರಾಜೀವಿ.ಎಸ್.ರೈ ಕುಂಬ್ರ, ಮಲ್ಲಿಕಾ ಎ.ಜೆ.ಆಲಂತ್ತಡ್ಕ, ಅಮರನಾಥ ರೈ ಐಂಬಾಗಿಲು, ಸತೀಶ್ ಕರ್ಕೇರ ಮಡ್ಯಂಗಲ, ಶಿವರಾಮ ಬಿ.ಬೊಳ್ಳಾಡಿ, ಶ್ರೀನಿವಾಸ್ ಪ್ರಸಾದ್ ಮುಡಾಲ,ವಸಂತ ಕುಮಾರ್ ಕೌಡಿಚ್ಚಾರ್, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ವಲಯ ಮೇಲ್ವಿಚಾರಕ ಶರತ್ ಡಿ ಮತ್ತಿತರರು ಭಾಗವಹಿಸಿದ್ದರು.
ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಸ್ವಾಗತಿಸಿದರು. ನಿರ್ದೇಶಕ ಸಂತೋಷ್ ಆಳ್ವ ಗಿರಿನಿಲಯ ವಂದಿಸಿದರು. ಶಿಕ್ಷಕ ಬಾಲಕೃಷ್ಣ ಪೊರ್ದಾಳ್ ಕಾರ್ಯಕ್ರಮ ನಿರೂಪಿಸಿದರು.
ಸುಳ್ಯಪದವು ಶಾಖಾ ಕಟ್ಟಡಕ್ಕೆ ಸ್ಥಳದಾನ ಮಾಡಿರುವ ಸರೋಜ ಸುಬ್ರಹ್ಮಣ್ಯ ಭಟ್ ಕಜೆಮೂಲೆ, ಸಂಘದ ಮಾಜಿ ಅಧ್ಯಕ್ಷರಾದ ದಿವಾಕರ ಪ್ರಭು, ಸತೀಶ್ಚಂದ್ರ ರೈ, ಅಮ್ಮಣ್ಣ ರೈ ಪಾಪೆಮಜಲು, ವಿನೋದ್ ಶೆಟ್ಟಿ, ಸಂಘದ ಮಾಜಿ ಕಾರ್ಯನಿರ್ವಹಣಾಧಿಕಾರಿಗಳಾದ ಗೋವರ್ಧನ್ ನಾಯಕ್, ವಿ.ಶ್ಯಾಮ್ ಭಟ್, ಕೊರಗಪ್ಪ ರೈ ದೇರ್ಲ, ರಮೇಶ್ ಮಾರ್ಲ ಮತ್ತು ರಾಜೀವಿ ಎಸ್.ರೈ ಅವರನ್ನು ಸನ್ಮಾನಿಸಲಾಯಿತು. ಸಂಘದ ಮಾಜಿ ನಿರ್ದೇಶಕರನ್ನು ಗುರುತಿಸಿ ಗೌರವಿಸಲಾಯಿತು.

