ಬಂಟ್ವಾಳ: ಕಾವಳಪಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ. ವಗ್ಗ ಪ್ರಸಕ್ತ ಸಾಲಿನಲ್ಲಿ ಒಟ್ಟು 349.18 ಕೋಟಿ ರೂ. ವ್ಯವಹಾರ ನಡೆಸಿದ್ದು, 1.63 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಕೆ.ಪ್ರಮೋದ್‌ಕುಮಾರ್ ರೈ ತಿಳಿಸಿದ್ದಾರೆ.
https://chat.whatsapp.com/EbVKVnWB6rlHT1mWtsgbch
ಸೋಮವಾರ ಸಂಘದ ನೂತನ ಸಭಾಂಗಣದಲ್ಲಿ2024-2025ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸದಸ್ಯರಿಗೆ ಶೇ.25 ಡಿವಿಡೆಂಡ್ ಘೋಷಿಸಿದರು. ರೈತರ ಅಭಿವೃದ್ಧಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿರುವ ಕಾವಳಪಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು 2.15 ಕೋಟಿ ರೂ. ಪಾಲು ಬಂಡವಾಳ, 61.18 ಕೋಟಿ ರೂ. ಠೇವಣಿ ಹೊಂದಿದೆ. 58.35 ಕೋಟಿ ರೂ. ಸದಸ್ಯರ ಸಾಲ ಹೊರಬಾಕಿ ಇದ್ದು, ಬ್ಯಾಂಕ್ ಮತ್ತು ಇತರೆ ಸಹಕಾರಿ ಸಂಸ್ಥೆಯಲ್ಲಿ 27.03 ಕೋಟಿ ರೂ. ಹೂಡಿಕೆ ಮಾಡಲಾಗಿದ್ದು, ದುಡಿಯುವ ಬಂಡವಾಳ 93.51 ಕೋಟಿ ರೂ.ಇದೆ ಎಂದು ಮಾಹಿತಿ ನೀಡಿದರು. ಸಂಘದ ನೂತನ ಕಟ್ಟಡ ‘ಸಮೃದ್ಧಿ ಸಹಕಾರ ಸೌಧ’ ಕಳೆದ ಜನವರಿ ತಿಂಗಳಲ್ಲಿ ಲೋಕಾರ್ಪಣೆಗೊಂಡಿದ್ದು, ಇದು ನಮ್ಮ ಸಂಘದ ಸಮೃದ್ಧಿಯ ಸಂಕೇತವಾಗಿದೆ ಎಂದರು.
ಇದೇ ವೇಳೆ ಶೇ.85ಕ್ಕೂ ಅಧಿಕ ಅಂಕ ಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ಠೇವಣಿದಾರರಿಗೆ ಶೇ.5ರಷ್ಟು ಹೆಚ್ಚುವರಿ ಬಡ್ಡಿ, ರಿಯಾಯಿತಿ ದರದಲ್ಲಿ ಸಭಾಭವನ ಬಾಡಿಗೆಗೆ ನೀಡಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಸಂಘದ ಉಪಾಧ್ಯಕ್ಷ ಪಿ.ಅಮ್ಮು ರೈ, ನಿರ್ದೇಶಕರಾದ ಪಿ.ಜಿನರಾಜ ಅರಿಗ, ಕೆ.ಚಂದಪ್ಪ ಪೂಜಾರಿ, ಬೆನೆಡಿಕ್ಟ್ ಡಿಸೋಜ, ಶಿವಪ್ರಸಾದ್ ಬಿ., ಸವಿತಾ ಬಿ.ಎಸ್, ಆಶಾ, ಪ್ರಕಾಶ್ ಶೆಟ್ಟಿ, ನವೀನ್ ಶೆಟ್ಟಿ, ಚಂದಪ್ಪ ಮೂಲ್ಯ, ಬಾಲಕೃಷ್ಣ ನಾಯ್ಕ, ರಾಜು, ವೃತ್ತಿಪರ ನಿರ್ದೇಶಕರಾದ ಗಂಗಾಧರ ಪೂಜಾರಿ ಉಪಸ್ಥಿತರಿದ್ದರು. ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶಿವಾನಂದ ಪಿ. ಸ್ವಾಗತಿಸಿ, ವರದಿ ವಾಚಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com






