ತಂಬಾಕು, ಅಡಕೆ ಪದಾರ್ಥಗಳಲ್ಲಿ ದೊಡ್ಡ ಪ್ರಮಾಣದಲ್ಲಿ ತೆರಿಗೆ ಸೋರಿಕೆ: ವಿಧಾನಮಂಡಲದಲ್ಲಿ ಕಂದಾಯ ಸಚಿವ ಕೃಷ್ಣಭೈರೇಗೌಡ ಹೇಳಿಕೆ
ಬೆಂಗಳೂರು: ದೇಶದ ತೆರಿಗೆ ವ್ಯವಸ್ಥೆಯಲ್ಲಿ ವಂಚನೆ ಪ್ರಕರಣಗಳು ಆಗಿಂದ್ದಾಗ್ಗೆ ವರದಿಯಾಗುತ್ತಿದ್ದು, ಇದನ್ನು ತಡೆಯಲು ಕೆಲವೊಂದು ಕಠಿಣ ಕ್ರಮವನ್ನು ಜಾರಿಗೆ ತರಬೇಕಿದೆ. ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗುವುದು, ಇನ್‌ಕಮ್ ಟ್ಯಾಕ್ಸ್ ಪಾವತಿಯಲ್ಲಿ ಭಾರೀ ಮೋಸವಾಗುತ್ತಿರುವುದು ಕಂಡುಬರುತ್ತಿದ್ದು ವಂಚನೆ ಎಸಗುವ ಒಬ್ಬೊಬ್ಬರನ್ನು ಹುಡುಕಿ ಕಾನೂನು ಕ್ರಮ ಕೈಕೊಳ್ಳಲಾಗುವುದು ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಎಚ್ಚರಿಕೆ ನೀಡಿದ್ದಾರೆ.
https://chat.whatsapp.com/EbVKVnWB6rlHT1mWtsgbch
ವಿಧಾನ ಮಂಡಲ ಅಧಿವೇಶನದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಪ್ರತಿಯೊಂದು ರಾಜ್ಯಗಳೂ ತಮ್ಮ ಪ್ರಸ್ತಾವನೆಯನ್ನು ಜಿಎಸ್‌ಟಿ ಮಂಡಳಿಗೆ ಸಲ್ಲಿಸುತ್ತವೆ. ಆ ಆಧಾರದಲ್ಲಿ ಮಂಡಳಿಯಲ್ಲಿ ಚರ್ಚಿಸಿ ತೀರ್ಮಾನವಾದ ನಂತರ ಎಲ್ಲಾ ರಾಜ್ಯ ಆ ಪ್ರಸ್ತಾವನೆಯನ್ನು ಅಳವಡಿಕೊಳ್ಳುವುದು ವಾಡಿಕೆ. ಈ ವ್ಯವಸ್ಥೆ ಮುಂದುವರಿದರೆ ಮಾತ್ರ ದೇಶದಲ್ಲಿ ಏಕರೂಪ ತೆರಿಗೆ ವ್ಯವಸ್ಥೆ ಉಳಿಸಿಕೊಳ್ಳಲು ಸಾಧ್ಯ. ಆ ಹಿನ್ನೆಲೆಯಲ್ಲಿ ಕರ್ನಾಟಕ ಸರಕು ಸೇವೆಗಳಿಗೆ ಸಂಬಂಧಿಸಿ ಕೆಲವು ತಿದ್ದುಪಡಿಗಳನ್ನು ತರಲಾಗಿದೆ ಎಂದು ತಿಳಿಸಿದರು. ಕೆಲವರು ದುರುದ್ದೇಶದಿಂದ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ ಅನ್ನು ಅಕ್ರಮವಾಗಿ ಪಡೆದುಕೊಳ್ಳುತ್ತಿದ್ದಾರೆ. ಐಟಿ ರೀಫಂಡ್ ಬಗ್ಗೆ ದೊಡ್ಡ ದೊಡ್ಡ ಪ್ರಮಾಣದಲ್ಲಿ ಆಗಿಂದಾಗ್ಗೆ ಪತ್ರಿಕೆಯಲ್ಲಿ ವರದಿಯಾಗುತ್ತಿರುತ್ತವೆ. ಅವುಗಳನ್ನು ವ್ಯವಸ್ಥೆಯಲ್ಲೇ ತಡೆಗಟ್ಟುವ ಪ್ರಯತ್ನ ಮಾಡಬೇಕು ಎಂದು ಕೃಷ್ಣಭೈರೇಗೌಡ ಹೇಳಿದರು.










ಒಬ್ಬೊಬ್ಬರನ್ನೇ ಹುಡುಕಿಹೋದರೆ ಅವರನ್ನು ಹಿಡಿಯಲು ಹರಸಾಹಸ ಪಡಬೇಕಾಗುತ್ತದೆ. ಹಾಗಾಗಿ ಅವರು ಯಾವ ರೀತಿ ದುರುಪಯೋಗ ಮಾಡುತ್ತಿದ್ದಾರೆ ಎಂದು ಹುಡುಕಿ ಅದನ್ನು ತಡೆಗಟ್ಟಲು ಕೆಲವು ಪ್ರಮುಖ ಕ್ರಮಗಳನ್ನು ಈ ತಿದ್ದುಪಡಿ ಮೂಲಕ ಜಾರಿಗೆ ತರಲು ಉದ್ದೇಶಿಸಲಾಗಿದೆ. ತಂಬಾಕು–ಅಡಕೆ ಆಧಾರಿತ ಪದಾರ್ಥಗಳಲ್ಲಿ ದೊಡ್ಡ ಪ್ರಮಾಣದಲ್ಲಿ ತೆರಿಗೆ ಸೋರಿಕೆ ಆಗುತ್ತಿದೆ. ಉದಾಹರಣೆಗೆ ಪಾನ್ ಮಸಾಲ, ಗುಟ್ಕಾ ಮಾರಾಟವಾಗುತ್ತಿರುವ ಪ್ರಮಾಣಕ್ಕೂ ನಮಗೆ ಲೆಕ್ಕ ಸಿಗುತ್ತಿರುವ ಪ್ರಮಾಣಕ್ಕೂ ವ್ಯತ್ಯಾಸ ಇದೆ. ಇದನ್ನು ಹುಡುಕುವುದೇ ಸಾಹಸ ಎಂದು ಹೇಳಿದರು.
ಅಡಕೆ ಲೋಡ್‌ಗಳು ಕರ್ನಾಟಕದಿಂದ, ಆಂಧ್ರ ಅಲ್ಲಿಂದ ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶದ ಗಡಿ ದಾಟಿ ಉತ್ತರ ಪ್ರದೇಶಕ್ಕೆ ರವಾನೆಯಾಗುತ್ತದೆ. ಇದರ ಹಿಂದೆ ವ್ಯವಸ್ಥಿತ ಜಾಲ ಇದೆ ಎಂದು ಹೇಳಿದ ಕೃಷ್ಣಭೈರೇಗೌಡ, ಜಿಎಸ್‌ಟಿ ಮೂಲಕವೇ ಇದಕ್ಕೆ ಕಡಿವಾಣ ಹಾಕಲು ಟ್ರ್ಯಾಕ್ ಆಂಡ್ ಟ್ರೇಸ್ ನಿಯಮ ಜಾರಿಗೆ ತರಬೇಕಿದೆ. ಅಂದರೆ ವ್ಯಾಲ್ಯೂ ಚೈನ್‌ನಲ್ಲಿ ಪೈಮರಿ ಪ್ರೊಡಕ್ಟ್‌ನಿಂದ ಫೈನಲ್ ಪ್ರೊಡಕ್ಟ್‌ವರೆಗಿನ ಎಲ್ಲಾ ಉತ್ಪನ್ನಗಳನ್ನೂ ಟ್ರ್ಯಾಕ್ ಮಾಡಿ ಅದರ ಆದಾರದ ಮೇಲೆ ಇಷ್ಟು ಮೊತ್ತದ ವಸ್ತು ಸೇಲ್ ಆಗಿದೆ ಎಂದು ಪತ್ತೆ ಮಾಡುವ ಟ್ರ್ಯಾಕ್ ಆಂಡ್ ಟ್ರೇಸ್ ಮೆಕ್ಯಾನಿಸಂ ಎನೆಬಲ್‌ಗೆ ಕಾನೂನಿನಲ್ಲೇ ಅವಕಾಶ ಮಾಡಿಕೊಡುತ್ತಿದ್ದೇವೆ ಎಂದು ಸದನದಲ್ಲಿ ಕಂದಾಯ ಸಚಿವರು ಹೇಳಿದರು. ದೇಶದ ಎಲ್ಲಾ ರಾಜ್ಯಗಳೂ ಈ ನಿಯಮವನ್ನು ಪಾಲಿಸಬೇಕಿದೆ. ಮುಂದಿನ ವಾರ ಜಿಎಸ್‌ಟಿ ಸಭೆ ಇದೆ. ಹೀಗಾಗಿ ಈ ತಿದ್ದುಪಡಿ ಇಲ್ಲದೆ ಅಲ್ಲಿಗೆ ಹೋಗುವುದು ಸರಿಯಲ್ಲ, ಅದೇ ಕಾರಣಕ್ಕೆ 2025ನೇ ಸಾಲಿನ ಕರ್ನಾಟಕ ಸರಕು ಸೇವೆಗಳ ತಿದ್ದುಪಡಿ ವಿಧೇಯಕವನ್ನು ಸದನದಲ್ಲಿ ಮಂಡಿಸಲಾಗುತ್ತಿದೆ ಎಂದು ಕೃಷ್ಣಭೈರೇಗೌಡ ತಿಳಿಸಿದರು.

