Close Menu
    Top News

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಎಂ.ಸಿ.ಸಿ.ಬ್ಯಾoಕಿನ 9ನೇ ಎಟಿಎಂ ಬೆಳ್ಮಣ್ ಶಾಖೆಯಲ್ಲಿ ಉದ್ಘಾಟನೆ
    News

    ಎಂ.ಸಿ.ಸಿ.ಬ್ಯಾoಕಿನ 9ನೇ ಎಟಿಎಂ ಬೆಳ್ಮಣ್ ಶಾಖೆಯಲ್ಲಿ ಉದ್ಘಾಟನೆ

    adminBy adminAugust 9, 2025

    ಬೆಳ್ಮಣ್: ಎಂಸಿಸಿ ಬ್ಯಾಂಕ್ ಲಿಮಿಟೆಡ್ ನ ಗ್ರಾಹಕ ಸೇವೆ ಮತ್ತು ಬ್ಯಾಂಕಿಂಗ್ ಶ್ರೇಷ್ಟತೆಯ ಪ್ರಯಾಣದಲ್ಲಿ ಮತ್ತೊಂದು ಮೈಲಿಗಲ್ಲಾಗಿ
    ಶನಿವಾರ ಬೆಳ್ಮಣ್ ಶಾಖೆಯಲ್ಲಿ ತನ್ನ 9ನೇ ಎಟಿಎಂ ಅನಾವರಣಗೊಳಿಸಿತು.

    https://chat.whatsapp.com/EbVKVnWB6rlHT1mWtsgbch

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂಸಿಸಿ ಬ್ಯಾಂಕ್ ಅಧ್ಯಕ್ಷ ಸಹಕಾರ ರತ್ನ ಅನಿಲ್ ಲೋಬೊ ವಹಿಸಿದ್ದರು. ಎಟಿಎಂ ಅನ್ನು
    ಬೆಳ್ಮಣ್ ನ ಮಾನ್ಯ ಡೆವಲಪರ್ಸ್ ಮತ್ತು ಹೋಟೆಲ್ ಸೂರಜ್ ಇನ್‌ನ ಮಾಲೀಕ ಶೋಧನ್ ಕುಮಾರ್ ಶೆಟ್ಟಿ ಉದ್ಘಾಟಿಸಿದರು. ಬೆಳ್ಮಣ್ ಸೇಂಟ್ ಜೋಸೆಫ್ ಚರ್ಚ್ ಧರ್ಮಗುರು ರೆವೆರೆಂಡ್ ಫಾದರ್ ಫ್ರೆಡ್ರಿಕ್ ಮಸ್ಕರೇನ್ಹಸ್ ಎಟಿಎಂ ಅನ್ನು ಆಶೀರ್ವಚಿಸಿ ಶಾಖೆ ಮತ್ತು ಅದರ ಗ್ರಾಹಕರಿಗೆ ಅನುಗ್ರಹ ಮತ್ತು ಸಮೃದ್ಧಿ ಬಯಸಿದರು. ಫ್ರೆಡ್ರಿಕ್ ವಿನ್ಸೆಂಟ್ ಅಂದ್ರಾದೆಯವರು ಎಟಿಎಂನಿoದ ಮೊದಲ ನಗದು ಹಿಂಪಡೆಯುವಿಕೆ ಪಡೆದರು. ಮುಖ್ಯ ಅತಿಥಿಗಳಾಗಿ ಫ್ರಾನ್ಸಿಸ್ ಡಿಸೋಜ, ಸೇಂಟ್ ಜೋಸೆಫ್ ಅರ್ಥ್ ಮೂವರ್ಸ್ ಮತ್ತು ಸೇಂಟ್ ಜೋಸೆಫ್ ಫುಯೆಲ್ಸ್ ಮಾಲೀಕ ಡೊಮಿನಿಕ್ ಆಂದ್ರಾದೆ, ಸೇಂಟ್ ಜೋಸೆಫ್ ಇಂಗ್ಲಿಷ್ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರು ಉಪಸ್ಥಿತರಿದ್ದರು.
    ಎಂಸಿಸಿ ಬ್ಯಾಂಕ್ ಬೆಳ್ಮಣ್ ಶಾಖೆಯ ಶಾಖಾ
    ವ್ಯವಸ್ಥಾಪಕಿ ಶೈನಿ ಲಸ್ರಾದೊ ಸ್ವಾಗತಿಸಿದರು.ಡೀಲ್ ಮತ್ತು ಆಲ್ವಿನ್ ಡಿಸೋಜ ನೇತೃತ್ವದಲ್ಲಿ ಪ್ರಾರ್ಥನೆ ನಡೆಯಿತು.

    ಅಧ್ಯಕ್ಷೀಯ ಭಾಷಣ ಮಾಡಿದ ಬ್ಯಾಂಕಿನ ಅಧ್ಯಕ್ಷ ಸಹಕಾರ ರತ್ನ ಅನಿಲ್ ಲೋಬೊ ಅವರು ಬ್ಯಾಂಕಿನ ಸಾಧನೆಯ ವಿವರ ನೀಡಿದರು. ಆರ್‌ಬಿಐ ನಿಯತಾಂಕಗಳೊoದಿಗೆ
    ಬ್ಯಾಂಕಿನ ಸ್ಥಿರ ಅನುಸರಣೆಯ ಬಗ್ಗೆ ಮಾಹಿತಿ ನೀಡಿ, ಬೆಳ್ಮಣ್ ಶಾಖೆಯಲ್ಲಿ ವಹಿವಾಟು ₹5 ಕೋಟಿ ದಾಟಿದ ಮಾಹಿತಿ ನೀಡಿದರು. ಬ್ರಹ್ಮಾವರ ಶಾಖೆಯಲ್ಲಿ ಒಂದು
    ವರ್ಷದೊಳಗೆ ₹10 ಕೋಟಿ ವಹಿವಾಟು ಸಾಧಿಸಿರುವುದು ಮತ್ತು
    ಬೈಂದೂರು ಶಾಖೆ ಇತ್ತೀಚೆಗೆ 100ಕ್ಕೂ ಹೆಚ್ಚು ಹೊಸ
    ಖಾತೆಗಳೊಂದಿಗೆ ತೆರೆದಿರುವುದು ಇತರ ಶಾಖೆಗಳಲ್ಲಿನ
    ಗಮನಾರ್ಹ ಬೆಳವಣಿಗೆ ಎಂದು ಮಾಹಿತಿ ನೀಡಿದರು. ಹೆಚ್ಚಿನ
    ಎಟಿಎಂಗಳು ಮತ್ತು ಶಾಖೆಗಳನ್ನು ಒಳಗೊಂಡoತೆ ಭವಿಷ್ಯದಲ್ಲಿ ಮತ್ತಷ್ಟು ವಿಸ್ತರಣಾ ಯೋಜನೆಗಳನ್ನು ಹಮ್ಮಿಕೊಳ್ಳುವ ಬಗ್ಗೆ ಘೋಷಿಸಿದರು.


    ಶೋಧನ್ ಕುಮಾರ್ ಶೆಟ್ಟಿ ಮಾತನಾಡಿ, ಎಂಸಿಸಿ
    ಬ್ಯಾoಕಿನ ಶ್ಲಾಘನೀಯ ಸೇವೆಗಳಿಗೆ ಕೃತಜ್ಞತೆ ವ್ಯಕ್ತಪಡಿಸಿ, ಬೆಳ್ಮಣ್ ನ ಜನ ಸಮುದಾಯಕ್ಕೆ ಶಾಖೆಯ ಕೊಡುಗೆಯನ್ನು ಶ್ಲಾಘಿಸಿದರು. ರೆವರೆಂಡ್ ಫಾದರ್ ಫ್ರೆಡ್ರಿಕ್ ಮಸ್ಕರೇನ್ಹಸ್ ಮಾತನಾಡಿ, ರಾಷ್ಟ್ರೀಕೃತ ಬ್ಯಾಂಕುಗಳಿಗೆ ಹೋಲಿಸಬಹುದಾದ ಬ್ಯಾಂಕಿಂಗ್ ಮಾನದಂಡಗಳನ್ನು ಕಾಯ್ದುಕೊಳ್ಳಲು ಮತ್ತು ಗ್ರಾಹಕ ಸ್ನೇಹಿ ಸೇವೆಯನ್ನು ನೀಡುತ್ತಿರುವುದಕ್ಕೆ ಎಂಸಿಸಿ ಬ್ಯಾಂಕ್ ಅನ್ನು ಶ್ಲಾಘಿಸಿದರು. ಡೊಮಿನಿಕ್ ಆಂದ್ರಾದೆ ಮಾತನಾಡಿ, ಬ್ಯಾಂಕಿನ ಬೆಳವಣಿಗೆ ಮತ್ತು ಸ್ಥಿರತೆಗೆ ಕೊಡುಗೆ ನೀಡಿದ ಗ್ರಾಹಕರಿಗೆ ಧನ್ಯವಾದಗಳನ್ನು ಅರ್ಪಿಸಿದರು.
    ರಿತೇಶ್ ಡಿಸೋಜ ಕಾರ್ಯಕ್ರಮ ನಿರೂಪಿಸಿ,
    ವಂದಿಸಿದರು. ಎಂಸಿಸಿ ಬ್ಯಾಂಕಿನಲ್ಲಿ ಉಪಾಧ್ಯಕ್ಷ ಜೆರಾಲ್ಡ್ ಜೂಡ್ ಡಿಸಿಲ್ವ, ನಿರ್ದೇಶಕರಾದ ಡಾ| ಫ್ರೀಡಾ ಡಿಸೋಜ, ಡಾ| ಜೆರಾಲ್ಡ್ ಪಿಂಟೊ, ಮಹಾಪ್ರಬಂಧಕ ಸುನಿಲ್ ಮಿನೇಜಸ್, ಉಪ ಮಹಾಪ್ರಬಂಧಕ ರಾಜ್ ಎಫ್ ಮಿನೇಜಸ್, ಸಿಬ್ಬಂದಿ ಮತ್ತು ಗ್ರಾಹಕರು ಉಪಸ್ಥಿತರಿದ್ದರು.

    Anil Lobo Belman branch MCC BANK New ATM inaugurated
    Previous Articleದಿವ್ಯಜ್ಯೋತಿ ವಿವಿಧೋದ್ದೇಶ ಸಹಕಾರ ಸಂಘದ ಆಶ್ರಯದಲ್ಲಿಉಚಿತ ವೈದ್ಯಕೀಯ ಶಿಬಿರ
    Next Article ಹಳೆಯಂಗಡಿ ಪ್ರಿಯದರ್ಶಿನಿ ಕೋ-ಆಪರೇಟಿವ್‌ ಸೊಸೈಟಿ ಶೇ.8 ಡಿವಿಡೆಂಡ್ ವಿತರಣೆ

    Related Posts

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.