ಮಂಗಳೂರು: ಶ್ರೀ ಪೂರ್ಣಾನಂದ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಬಿಜೈ ಶಾಖೆಯು ಬಿಜೈ ಚರ್ಚ್ ಮುಂಭಾಗದ ಮಂಗಳೂರು ಮಹಾನಗರ ಪಾಲಿಕೆ ಸಂಕೀರ್ಣದ ಒಂದನೇ ಮಹಡಿಗೆ ಸ್ಥಳಾಂತರಗೊಳ್ಳುತ್ತಿದ್ದು ಸ್ಥಳಾಂತರ ಸಮಾರಂಭ ಜುಲೈ 27ರ ಭಾನುವಾರ ಬೆಳಗ್ಗೆ 10ಕ್ಕೆ ನಡೆಯಲಿದೆ.
https://chat.whatsapp.com/EbVKVnWB6rlHT1mWtsgbch
ಶಾಸಕ ಡಿ.ವೇದವ್ಯಾಸ ಕಾಮತ್ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದು, ಕರ್ನಾಟಕ ರಾಜ್ಯ ಕುಡಾಳ್ ದೇಶಸ್ಥ ಆದ್ಯಗೌಡ್ ಬ್ರಾಹ್ಮಣ ಮಹಾಮಂಡಲದ ಅಧ್ಯಕ್ಷ ಮಹೇಶ್ ಠಾಕೂರ್ ದೀಪ ಪ್ವಜ್ವಲನೆ ಮಾಡಲಿದ್ದಾರೆ. ಶ್ರೀ ಪೂರ್ಣಾನಂದ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಗಣೇಶ್ ಶೆಣೈ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ನಿರ್ದೇಶಕರಾದ ಭಾರತಿ ಭಟ್, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ, ದ.ಕ. ಜಿಲ್ಲಾ ಒಕ್ಕೂಟ ಸೌಹಾರ್ದ ಸಹಕಾರಿ ನಿಯಮಿತದ ಅಧ್ಯಕ್ಷ ಭಾಸ್ಕರ್ ದೇವಸ್ಯ, ಉದ್ಯಮಿ ಪ್ರವೀಣ್ ಎಸ್.ದರ್ಬೆ, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿವೃತ್ತ ಸಹಾಯಕ ಮಹಾಪ್ರಬಂಧಕರಾದ ಜೆಸಿಂತಾ ಮಾರ್ಟಿಸ್, ದ.ಕ ಜಿಲ್ಲಾ ಸೌಹಾರ್ದ ಸಹಕಾರಿ ಅಧಿಕಾರಿ ನಂದನ್ ಬಿ.ಎನ್. ಭಾಗವಹಿಸಲಿದ್ದಾರೆ.
ಶ್ರೀ ಪೂರ್ಣಾನಂದ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಉಪಾಧ್ಯಕ್ಷ ಉಪೇಂದ್ರ ನಾಯಕ್, ಪ್ರಧಾನ ವ್ಯವಸ್ಥಾಪಕರಾದ ಅನಿತಾ, ನಿರ್ದೇಶಕರಾದ ಮೋಹನ್ ನಾಯಕ್, ಗೀತಾ ರತ್ನಾಕರ, ವಲ್ಲಭಿ, ಹರಿಶ್ಚಂದ್ರ ಪ್ರಭು, ಸದಾನಂದ ಪ್ರಭು, ರವೀಂದ್ರ ಪ್ರಭು, ಜಗದೀಶ್ ಶೆಣೈ, ಅರವಿಂದ ಕುಮಾರ್ ಶೆಟ್ಟಿ, ಗೌರವ ಸಲಹೆಗಾರರಾದ ಎಂ.ಮಂಜುನಾಥ ಪ್ರಭು ಬಿಜೈ ಶಾಖೆಯ ವ್ಯವಸ್ಥಾಪಕರಾದ ಶಶಿಕಲಾ ಭಾಗವಹಿಸಲಿದ್ದಾರೆ.



