ಈ ಹುದ್ದೆ ಅಲಂಕರಿಸಲಿರುವ ಮೊದಲ ಭಾರತೀಯ ಎಂಬ ಹೆಗ್ಗಳಿಕೆ
ನವದೆಹಲಿ: ಅಂತಾರಾಷ್ಟ್ರೀಯ ಸಹಕಾರ ಒಕ್ಕೂಟ(ಐಸಿಎ)ದ ಯುವ ಸಮಿತಿಯ ಅಧ್ಯಕ್ಷರಾಗಿ ಭಾರತದ ಹರ್ಷ ಸಂಘಾನಿ ಆಯ್ಕೆಯಾಗಿದ್ದಾರೆ. ತನ್ಮೂಲಕ ಭಾರತೀಯರೊಬ್ಬರು ಈ ಹುದ್ದೆ ಅಲಂಕರಿಸಿದ ಮೊದಲಿಗ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ.
https://chat.whatsapp.com/EbVKVnWB6rlHT1mWtsgbch
ಅಂತಾರಾಷ್ಟ್ರೀಯ ಸಹಕಾರಿ ವರ್ಷದ ಅಂಗವಾಗಿ ಯುಕೆಯ ಮ್ಯಾಂಚೆಸ್ಟರ್‌ನಲ್ಲಿ ಇತ್ತೀಚೆಗೆ ನಡೆದ ಐಸಿಎ ವಾರ್ಷಿಕ ಮಹಾಸಭೆಯ ಸಂದರ್ಭದಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆದಿದೆ. ಅಂತಾರಾಷ್ಟ್ರೀಯ ಸಹಕಾರಿ ಒಕ್ಕೂಟದ ಅಡಿಯಲ್ಲಿ ಸ್ಥಾಪಿಸಲಾದ ಐಸಿಎ ಯುವ ಸಮಿತಿಯು ಯುವ ಸಹಕಾರಿ ನಾಯಕರನ್ನು ಪ್ರತಿನಿಧಿಸುವ ಜಾಗತಿಕ ವಿಷಯಾಧಾರಿತ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ. ಸಹಕಾರದ ನೀತಿ ನಿರೂಪಣೆಯಲ್ಲಿ ಯುವ ಧ್ವನಿಗಳ ಪರ ವಕಾಲತ್ತು ವಹಿಸುವುದು, ಸಹಕಾರಿ ಉದ್ಯಮಶೀಲತೆಯನ್ನು ಉತ್ತೇಜಿಸುವುದು ಮತ್ತು ಯುವ ವೇದಿಕೆಗಳು ಮತ್ತು ವಿನಿಮಯ ಕಾರ್ಯಕ್ರಮಗಳಂತಹ ಉಪಕ್ರಮಗಳ ಮೂಲಕ ನಾಯಕತ್ವವನ್ನು ಬೆಳೆಸುವುದು ಐಸಿಎ ಸಂಸ್ಥೆಯ ಉದ್ದೇಶವಾಗಿದೆ.
ಹರ್ಷ ಸಂಘಾನಿ ಅವರಿಗಿಂತ ಮೊದಲು ಈ ಯುವ ಸಮಿತಿಯ ನೇತೃತ್ವವನ್ನು ಸ್ಪೇನ್ ಮೂಲದ ಅನಾ ಅಗುಯಿರ್ ವಹಿಸಿದ್ದರು. ಅಂತಾರಾಷ್ಟ್ರೀಯ ಸಹಕಾರ ವರ್ಷ ಆಚರಣೆಯ ಸಂದರ್ಭದಲ್ಲಿ ಸಂಘಾನಿ ಅವರ ಆಯ್ಕೆ ಮಹತ್ವ ಪಡೆದಿದೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com

