ಹಳೆಯಂಗಡಿ: ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ ಹಳೆಯಂಗಡಿ ಮತ್ತು ಫೇಮಸ್ ಯೂಥ್ ಕ್ಲಬ್ ತೋಕೂರು ಆಶ್ರಯದಲ್ಲಿ ಯುವ ಕಾರ್ಯ ಕ್ರೀಡಾ ಸಚಿವಾಲಯ, ಮೈ ಭಾರತ್ ದಕ್ಷಿಣ ಕನ್ನಡ, ರೋಟರಿ ಕ್ಲಬ್ ಬೈಕಂಪಾಡಿ, ಪೂಜಾ ಎರೇಂಜರ್ಸ್ ಮತ್ತು ಕೇಟರರ್ಸ್, ಪೂಜಾ ಫ್ರೆಂಡ್ಸ್ ಹಳೆಯಂಗಡಿ, ತೋಕೂರು ಎಸ್‌ಎಸ್ ಮ್ಯೂಸಿಕ್, ಸಾರ್ವಜನಿಕ ದಂತ ಆರೋಗ್ಯ ವಿಭಾಗ ಎ.ಬಿ ಶೆಟ್ಟಿ ಸ್ಮಾರಕ ದಂತ ಮಹಾವಿದ್ಯಾಲಯ ನಿಟ್ಟೆ ಮಂಗಳೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಫೇಮಸ್ ಯೂತ್ ಕ್ಲಬ್ ಮತ್ತು ಮಹಿಳಾ ಮಂಡಳ ಹತ್ತನೇ ತೋಕೂರು ಹಳೆಯಂಗಡಿ ಇಲ್ಲಿ ವಿಶ್ವ ತಂಬಾಕು ರಹಿತ ದಿನಾಚರಣೆ ಪ್ರಯುಕ್ತ ಉಚಿತ ದಂತ ಚಿಕಿತ್ಸಾ ಶಿಬಿರ ಭಾನುವಾರ ನಡೆಯಿತು.
https://chat.whatsapp.com/EbVKVnWB6rlHT1mWtsgbch
ಸಂಸ್ಥೆಯ ಗೌರವಾಧ್ಯಕ್ಷ ಗುರುರಾಜ್ ಎಸ್ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಹಳೆಯಂಗಡಿ ಪ್ರಿಯದರ್ಶಿನಿ ಕೋ- ಆಪರೇಟಿವ್ ಸೊಸೈಟಿ ನಿರ್ದೇಶಕ ನವೀನ್ ಸಾಲ್ಯಾನ್ ಪಂಜ ಶಿಬಿರದ ಉದ್ಘಾಟನೆ ನೆರವೇರಿಸಿದರು. ಮುಖ್ಯ ಅತಿಥಿ ಎಬಿ ಶೆಟ್ಟಿ ಕಾಲೇಜಿನ ಉಪನ್ಯಾಸಕಿ ಡಾ.ಶಿಲ್ಪಾ ಎಂ ರಾವ್ ಮಾತನಾಡಿ ಯುವ ಪೀಳಿಗೆಯನ್ನು ದುಶ್ಚಟಗಳಿಂದ ಮುಕ್ತಗೊಳಿಸುವಲ್ಲಿ ಸಂಘ ಸಂಸ್ಥೆಗಳ ಪಾತ್ರ ಮಹತ್ತರವಾದದ್ದು ಎಂದರು.

ಹಳೆಯಂಗಡಿ ಪ್ರಿಯದರ್ಶಿನಿ ಕೋ ಆಪರೇಟಿವ್ ಶಾಖೆಯ ಶಾಖಾ ಪ್ರಬಂಧಕಿ ಅಕ್ಷತಾ ಶೆಟ್ಟಿ, ಪೂಜಾ ಫ್ರೆಂಡ್ಸ್ ಉಪಾಧ್ಯಕ್ಷ ಆಕಾಶ್ ಮೆಂಡನ್, ಫೇಮಸ್ ಯೂತ್ ಕ್ಲಬ್‌ನ ಅಧ್ಯಕ್ಷ ಸಂಪತ್ ಜೆ ಶೆಟ್ಟಿ ಮತ್ತು ಮಹಿಳಾ ಮಂಡಲದ ಅಧ್ಯಕ್ಷೆ ಪ್ರೇಮಲತಾ ಯೋಗೀಶ್, ಪಡುಪಣಂಬೂರು ಗ್ರಾ ಪಂ ಉಪಾಧ್ಯಕ್ಷ ಹೇಮನಾಥ ಅಮೀನ್, ಯಕ್ಷ ದೇಗುಲ ಹತ್ತು ಸಮಸ್ತರು 10ನೇ ತೋಕೂರು ಅಧ್ಯಕ್ಷ ದಿನಕರ್ ಸಾಲ್ಯಾನ್, ವಿಶ್ವ ಬ್ಯಾಂಕ್ ಕುಡಿಯುವ ನೀರು ಮತ್ತು ಪರಿಸರ ನೈರ್ಮಲ್ಯ ಸಮಿತಿಯ ಅಧ್ಯಕ್ಷ ಗಣೇಶ್ ಜಿ ಬಂಗೇರ, ತೋಕೂರು ಎಸ್‌ಎಸ್ ಮ್ಯೂಸಿಕ್ ಮುಖ್ಯಸ್ಥರಾದ ಹರಿಪ್ರಸಾದ್, ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ನ ಪದಾಧಿಕಾರಿ ಸುರೇಶ್ ಮತ್ತು ಸಂತೋಷ್ ದೇವಾಡಿಗ. ಶ್ರೀ ಓಂಕಾರೇಶ್ವರಿ ಮಂದಿರದ ಅಧ್ಯಕ್ಷರಾದ ಸದಾಶಿವ ಕುಂದರ್, ಧರ್ಮಾನಂದ ಶೆಟ್ಟಿಗಾರ್, ಸಂಜೀವ ಕರ್ಕೇರ ಓಂಕಾರೇಶ್ವರಿ ನಗರ, ಹಿಮಕರ್ ಕೋಟ್ಯಾನ್ ಮತ್ತು ಸುರೇಶ್ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ತಂಬಾಕು ದುಷ್ಪರಿಣಾಮದ ಬಗ್ಗೆ ಬೀದಿನಾಟಕ ಪ್ರದರ್ಶಿಸಲಾಯಿತು. ವೈದ್ಯಕೀಯ ಶಿಬಿರದಲ್ಲಿ 48 ಜನ ಫಲಾನುಭವಿಗಳು ಪ್ರಯೋಜನ ಪಡೆದುಕೊಂಡರು. ಫೇಮಸ್ ಯೂತ್ ಕ್ಲಬ್ ಕಾರ್ಯದರ್ಶಿ ಮೋಹನ್‌ದಾಸ್ ದೇವಾಡಿಗ ಸ್ವಾಗತಿಸಿದರು. ಉಪಾಧ್ಯಕ್ಷ ಮಹಮ್ಮದ್ ಶರೀಫ್ ವಂದಿಸಿದರು. ಫೇಮಸ್ ಯೂತ್ ಕ್ಲಬ್ಬಿನ ನಿಕಟಪೂರ್ವ ಅಧ್ಯಕ್ಷ ಭಾಸ್ಕರ್ ಅಮೀನ್ ಕಾರ್ಯಕ್ರಮ ನಿರೂಪಿಸಿದರು.



