Close Menu
    Top News

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಸಮಾಜ ಸೇವಾ ಸಹಕಾರಿ ಸಂಘ ಪ್ರಾಯೋಜಕತ್ವದಲ್ಲಿ ಡಾ|ಅಮ್ಮೆಂಬಳ ಬಾಳಪ್ಪ ಜನ್ಮಶತಾಬ್ದಿ ಸಂಚಿಕೆ ಬಾಳಪಥ ಬಿಡುಗಡೆ
    News

    ಸಮಾಜ ಸೇವಾ ಸಹಕಾರಿ ಸಂಘ ಪ್ರಾಯೋಜಕತ್ವದಲ್ಲಿ ಡಾ|ಅಮ್ಮೆಂಬಳ ಬಾಳಪ್ಪ ಜನ್ಮಶತಾಬ್ದಿ ಸಂಚಿಕೆ ಬಾಳಪಥ ಬಿಡುಗಡೆ

    adminBy adminJune 30, 2025

    ಬಂಟ್ವಾಳ: ಸ್ವಾತಂತ್ರ್ಯ ಯೋಧ ಡಾ|ಅಮ್ಮೆಂಬಳ ಬಾಳಪ್ಪ ಸ್ಮಾರಕ ಸೇವಾ ಪ್ರತಿಷ್ಠಾನ ಬಂಟ್ವಾಳ ಆಶ್ರಯದಲ್ಲಿ ಬಂಟ್ವಾಳದ ಸಮಾಜ ಸೇವಾ ಸಹಕಾರಿ ಸಂಘ ಪ್ರಾಯೋಜಕತ್ವದಲ್ಲಿ ಮುದ್ರಣಗೊಂಡ “ಬಾಳಪಥ” ಡಾ| ಅಮ್ಮೆಂಬಳ ಬಾಳಪ್ಪ ಜನ್ಮಶತಾಬ್ದಿ ಸಂಚಿಕೆ ಬಿಡುಗಡೆ ಹಾಗೂ ಅಮೂಲ್ಯ ಸ್ವಸಹಾಯ ಸಂಘದ ಸದಸ್ಯರ ಸಮ್ಮಿಲನ ಸಮಾರಂಭ ಬಂಟ್ವಾಳ ಬೈಪಾಸ್‌ನಲ್ಲಿರುವ ಸಮಾಜ ಸೇವಾ ಸಹಕಾರಿ ಭವನದಲ್ಲಿ ನಡೆಯಿತು.

    https://chat.whatsapp.com/EbVKVnWB6rlHT1mWtsgbch
    ಬೆಂಗಳೂರಿನ ಸಾಮಾಜಿಕ ಧುರೀಣ ಮೋಹನದೇವ ಆಳ್ವ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿ, ದಿ.ಅಮ್ಮೆಂಬಳ ಬಾಳಪ್ಪರು ಬಾಲ್ಯದಿಂದಿಂದಲೇ ಸತ್ಯ, ನಿಷ್ಠರಾಗಿದ್ದರಲ್ಲದೆ ಎಲ್ಲಾ ವರ್ಗದ ಜನರನ್ನು ಪ್ರೀತಿಸಿ ಜನಸ್ನೇಹಿಯಾಗಿದ್ದರು. ಅಮ್ಮೆಂಬಳ ಬಾಳಪ್ಪರು ಸ್ಥಾಪಿಸಿದ ಸಮಾಜ ಸೇವಾ ಸಹಕಾರಿ ಸಂಘವು ಹಲವರ ಬದುಕಿಗೆ ಬೆಳಕಾಗಿದ್ದು, ಸಂಘವು ರಾಜ್ಯವ್ಯಾಪಿಯಾಗಿ ಬೆಳೆಯಲಿ ಎಂದು ಹಾರೈಸಿದರು. ತುಳು ನಮ್ಮ ಮಾತೃಭಾಷೆಯಾದರೆ, ಕನ್ನಡ ಭಾಷೆ ರಾಜ್ಯಕ್ಕೆ ಸಾರ್ವಭೌಮವಾಗಿದ್ದು, ದೇಶದ ಎಲ್ಲಾ ಭಾಷೆಯನ್ನು ಗೌರವಿಸಬೇಕು ಎಂದರು.
    ಡಾ।ಅಮ್ಮೆಂಬಳ ಬಾಳಪ್ಪ ಸ್ಮಾರಕ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಅಮ್ಮೆಂಬಳ ಆನಂದ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಬಿ.ರಮಾನಾಥ ರೈ, ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ.ತುಕಾರಾಮ್‌ ಪೂಜಾರಿ ಬಾಳಪ್ಪರ ಹೋರಾಟದ ದಿನಗಳನ್ನು ಸ್ಮರಿಸಿದರು.
    ದ.ಕ.ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ, ಸಂಚಿಕೆಯ ಪ್ರಧಾನ ಸಂಪಾದಕ ಡಾ.ದುಗ್ಗಪ್ಪ ಕಜೆಕಾ‌ರ್, ನಿವೃತ್ತ ಯೋಧ ಚಂದಪ್ಪ ಮೂಲ್ಯ, ಸಮಾಜ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸುರೇಶ್ ಕುಲಾಲ್, ಉಪಾಧ್ಯಕ್ಷ ಜನಾರ್ದನ ಬೊಂಡಾಲ, ಹಿರಿಯ ನಿರ್ದೇಶಕ‌ ಭೋಜ ಕುಲಾಲ್ ಉಪಸ್ಥಿತರಿದ್ದರು. ಭೋಜ ಮೂಲ್ಯ ಪ್ರಸ್ತಾವನೆಗೈದರು. ಕಿರಣ್ ಕಿಟ್ಲೂರು ಸ್ವಾಗತಿಸಿ, ಮೋಹನ್ ಕುಮಾರ್ ನಿರೂಪಿಸಿದರು.

    Ammembala Balappa Ammembala Balappa Seva Prathishtana Balapatha Bantwala Freedom Fighter Samaja Seva Sahakari Bank
    Previous Articleಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಮಗುವಿನ ಚಿಕಿತ್ಸೆಗೆ ನೆರವು
    Next Article ಪ್ರಿಯದರ್ಶಿನಿ ಕೋ ಆಪರೇಟಿವ್‌ ಸೊಸೈಟಿ ಹಳೆಯಂಗಡಿ ಆಶ್ರಯದಲ್ಲಿ ಉಚಿತ ದಂತ ಚಿಕಿತ್ಸಾ ಶಿಬಿರ

    Related Posts

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.