ಶಿಕಾರಿಪುರ: ಶಿಕಾರಿಪುರ ತಾಲೂಕು ವ್ಯವಸಾಯೋತ್ಪನ್ನಗಳ ಮಾರಾಟ ಸಹಕಾರ ಸಂಘ, ಕರ್ನಾಟಕ ರಾಜ್ಯ ಪರಿಸರ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಸಹಕಾರ ಸಂಘ, ಕರ್ನಾಟಕ ರಾಜ್ಯ ಜನಪದ ಕಲಾವಿದರ ಸಹಕಾರ ಸಂಘ ಶಿಕಾರಿಪುರ, ಬಸವೇಶ್ವರ ಸಹಕಾರಿ ಒಕ್ಕೂಟ ಶಿಕಾರಿಪುರ, ಅರಣ್ಯ ಇಲಾಖೆ ಶಿಕಾರಿಪುರ ಪ್ರಾದೇಶಿಕ ಅರಣ್ಯ ವಲಯ ಹಾಗೂ ಸಾಮಾಜಿಕ ಅರಣ್ಯ ವಲಯ ಶಿಕಾರಿಪುರ ಇವರ ಸಹಯೋಗದೊಂದಿಗೆ ಜೂನ್ 20ರಂದು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ವನಮಹೋತ್ಸವ ಮತ್ತು ಸಸಿಗಳ ವಿತರಣೆ ಕಾರ್ಯಕ್ರಮ ಟಿಎಪಿಸಿಎಂಎಸ್ ಪೆಟ್ರೋಲ್ ಬಂಕ್ ಬಳಿ ನಡೆಯಲಿದೆ.
https://chat.whatsapp.com/EbVKVnWB6rlHT1mWtsgbch
ಬೆಳಗ್ಗೆ 10ಕ್ಕೆ ಟಿ.ಎ.ಪಿ.ಸಿ.ಎಂ.ಎಸ್ ಅಧ್ಯಕ್ಷ ಸುಧೀರ್ ಎ.ಬಿ ಅಧ್ಯಕ್ಷತೆಯಲ್ಲಿ ಸಹಕಾರ ರತ್ನ ಪುರಸ್ಕೃತ ಡಾ.ಬಿ.ಡಿ.ಭೂಕಾಂತ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಶಿಕಾರಿಪುರ ಪುರಸಭೆ ಅಧ್ಯಕ್ಷರಾದ ಸುನಂದಾ ಮಂಜುನಾಥ್ ಸಸಿಗಳ ವಿತರಣೆ ಮಾಡಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಶಿಕಾರಿಪುರ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರ ನಾಯ್ಕ ಭಾಗವಹಿಸಲಿದ್ದಾರೆ. ಶಿಕಾರಿಪುರ ಪ್ರಾದೇಶಿಕ ವಲಯದ ವಲಯ ಅರಣ್ಯಾಧಿಕಾರಿ ರೇವಣಸಿದ್ದಯ್ಯ ಮತ್ತು ಶಿಕಾರಿಪುರ ಸಾಮಾಜಿಕ ವಲಯದ ವಲಯ ಅರಣ್ಯಾಧಿಕಾರಿ ಸುನೀತಾ ಉಪನ್ಯಾಸ ನೀಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಟಿ.ಎ.ಪಿ.ಸಿ.ಎಂ.ಎಸ್ ಶಿಕಾರಿಪುರದ ಉಪಾಧ್ಯಕ್ಷೆ ಪ್ರೇಮಾ ಎಂ.ಎಸ್, ಪುರಸಭಾ ವಾರ್ಡ್ ಸದಸ್ಯೆ ಫೈರೋಜಾ ಬಾನು ತಾಜ್‌ಪೀರ್, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಂಡಲದ ನಿರ್ದೇಶಕರಾದ ಅಗಡಿ ಅಶೋಕ, ಶಿವಮೊಗ್ಗ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿರ್ದೇಶಕ ಬಸವರಾಜ್ ಡಿ.ಎಲ್, ಸಹಕಾರ ಅಭಿವೃದ್ಧಿ ಅಧಿಕಾರಿ ಅರವಿಂದ ಯು.ಎನ್, ಕರ್ನಾಟಕ ರಾಜ್ಯ ಪರಿಸರ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಸಹಕಾರ ಸಂಸ್ಥೆಯ ಅಧ್ಯಕ್ಷ ಲೋಕೇಶ್ವರ್, ಕರ್ನಾಟಕ ರಾಜ್ಯ ಜನಪದ ಕಲಾವಿದರ ಸಹಕಾರ ಸಂಘದ ಅಧ್ಯಕ್ಷ ನಾಗರಾಜ್, ಶ್ರೀ ಬಸವೇಶ್ವರ ಸಹಕಾರಿ ಒಕ್ಕೂಟದ ಅಧ್ಯಕ್ಷ ಪರಮೇಶ್ವರಪ್ಪ ಭಾಗವಹಿಸಲಿದ್ದಾರೆ.




ಟಿಎಪಿಸಿಎಂಎಸ್ ಆಡಳಿತ ಮಂಡಳಿಯ ಸುರೇಶಗೌಡ್ರು, ಎಸ್.ಶಶಿಧರ, ರಾಘವೇಂದ್ರ ಎಸ್.ಎಸ್, ಅನೂಪ ಬಿ, ಜಯಾ ನಾಯ್ಕ, ಬಸವಣ್ಯಪ್ಪ, ಸುನೀತಾ ವೈ.ಆರ್, ಕಾರ್ಯದರ್ಶಿ ಗಣೇಶ್ ಬಿ.ಎಂ, ವೀರೇಶ ಎಸ್.ಇ, ಶರತ್ ಪಿ, ಕರಿಯಪ್ಪ ಹೆಚ್, ತರುಣ್ ಕೆ.ಎಲ್, ಕರ್ನಾಟಕ ರಾಜ್ಯ ಪರಿಸರ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಸಹಕಾರ ಸಂಘದ ಆಡಳಿತ ಮಂಡಳಿಯ ದೇವರಾಜ್, ವಿಜಯ ಕುಮಾರ್, ಮೀನಾಕ್ಷಮ್ಮ, ಕಿರಣ್ ಕಾಂತ್, ಸವಿತಾ ಸುರೇಶ್, ಗಾಯತ್ರಿ ಸುರೇಶ್, ಶಿವಮ್ಮ ಬಸವರಾಜಪ್ಪ, ಕವಿತಾ ಸುರೇಶ್, ಶಾಂತ್ ಕುಮಾರ್, ವೆಂಕಟೇಶ್ ಹೆಚ್.ಆರ್, ಕುಬೇಂದ್ರಪ್ಪ, ತೀರ್ಥಪ್ರಸನ್ನ, ವೀರನಗೌಡ್ರು, ಮಹದೇವಯ್ಯ, ಮಂಜನಾಯ್ಕ, ಶಿವಮೂರ್ತಪ್ಪ, ಕಾರ್ಯದರ್ಶಿ ಆಶಾ ಷಣ್ಮುಖಪ್ಪ ಹಾಗೂ ಸಿಬ್ಬಂದಿ ವರ್ಗ, ಬಸವೇಶ್ವರ ಸಹಕಾರಿ ಒಕ್ಕೂಟದ ಆಡಳಿತ ಮಂಡಳಿಯ ಶಶಿಕಲಾ, ಗುರುರಾಜ್, ಮೇಘಾ ಜಗದೀಶ್, ಮೌನೇಶ್ವರಪ್ಪ, ಸಿ.ಪಿ ಹೆಗಡೆ, ಮಮತಾ ಚಂದ್ರಕುಮಾರ, ರುದ್ರಯ್ಯ, ಸುಧಾ, ಮಂಜಪ್ಪ, ಶಾಂತಮ್ಮ, ಕಾರ್ಯದರ್ಶಿ ಮಂಗಳ ಮತ್ತು ಸಿಬ್ಬಂದಿ ವರ್ಗ ಭಾಗವಹಿಸಲಿದ್ದಾರೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com

