Close Menu
    Top News

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಸಹಕಾರ ಸೊಸೈಟಿಯಡಿ ಅಪಾರ್ಟ್‌ಮೆಂಟ್‌ ಸಂಘ ನೋಂದಣಿ ರದ್ದು ಆದೇಶ
    News

    ಸಹಕಾರ ಸೊಸೈಟಿಯಡಿ ಅಪಾರ್ಟ್‌ಮೆಂಟ್‌ ಸಂಘ ನೋಂದಣಿ ರದ್ದು ಆದೇಶ

    adminBy adminMay 17, 2025

    ಬೆಂಗಳೂರು: ವಸತಿ ಫ್ಲ್ಯಾಟ್‌ಗಳಿರುವ ಅಪಾರ್ಟ್‌ಮೆಂಟ್‌ನ ಮಾಲೀಕರ ಸಂಘವನ್ನು ಕರ್ನಾಟಕ ಅಪಾರ್ಟ್‌ಮೆಂಟ್‌ ಓನರ್‌ಶಿಪ್‌ ಕಾಯ್ದೆ(ಕೆಒಎ)ಯಡಿಯೇ ನೋಂದಾಯಿಸಬೇಕೆಂದು ಪುನರುಚ್ಚರಿಸಿದ ಕರ್ನಾಟಕ ಹೈಕೋರ್ಟ್‌, ಕರ್ನಾಟಕ ಸಹಕಾರ ಸೊಸೈಟಿಗಳ ಕಾಯ್ದೆಯಡಿ ಮಾಡಿದ್ದ ನೋಂದಣಿಯನ್ನು ರದ್ದು ಮಾಡಿದೆ.

    https://chat.whatsapp.com/EbVKVnWB6rlHT1mWtsgbch
    ಯಲಹಂಕ ವ್ಯಾಪ್ತಿಯ ಅವಲಹಳ್ಳಿಯ ರಾಮ್‌ಕಿ ಒನ್‌ ನಾರ್ತ್‌ ಅಪಾರ್ಟ್‌ಮೆಂಟ್‌ನ ಮಾಲೀಕರ ಸಂಘದ ರೇಖಾ ಕಣ್ಣನ್‌ ಮತ್ತಿತರರು ಸಲ್ಲಿಸಿದ್ದ ಅರ್ಜಿಯನ್ನು ಪರಿಶೀಲಿಸಿದ ನ್ಯಾ.ಕೆ.ಎಸ್‌.ಹೇಮಲೇಖಾ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.
    ಕರ್ನಾಟಕ ಸಹಕಾರ ಸೊಸೈಟಿಗಳ ಕಾಯ್ದೆಯಡಿ 2023ರ ಅ.19ರಂದು ಸೊಸೈಟಿಯನ್ನು ನೋಂದಣಿ ಮಾಡಿಕೊಂಡು ಡೆಪ್ಯುಟಿ ರಿಜಿಸ್ಟ್ರಾರ್‌ ಹೊರಡಿಸಿದ್ದ ಆದೇಶವನ್ನು ರದ್ದು ಮಾಡಿದೆ. ಜೊತೆಗೆ ರಾಮ್‌ಕಿ ನಾರ್ತ್‌ ಹೆಸರಿನಲ್ಲಿ ಸಂಘವನ್ನು ಕರ್ನಾಟಕ ಅಪಾರ್ಟ್‌ಮೆಂಟ್‌ ಓನರ್‌ಶಿಪ್‌ ಕಾಯ್ದೆ (ಕೆಎಒ)ಯಡಿ ನೋಂದಣಿ ಮಾಡಿಸುವಂತೆ ಆದೇಶ ನೀಡಿದೆ. ದಾಖಲೆಗಳನ್ನು ಪರಿಶೀಲಿಸಿದ ಬಳಿಕ ನ್ಯಾಯಪೀಠ, ಸೇಲ್‌ ಡೀಡ್‌ ಜಾರಿಯಾಗುವ ಮುನ್ನ ಅಪಾರ್ಟ್‌ಮೆಂಟ್‌ ಮಾಲೀಕರು ಐದನೇ ಪ್ರತಿವಾದಿ ಬಿಲ್ಡರ್‌ ಪರ ಡೀಡ್‌ ಆಫ್‌ ಡಿಕ್ಲರೇಷನ್‌ ಕಮ್‌ ಅಂಡರ್‌ಟೇಕಿಂಗ್‌ ಮಾಡಿಕೊಂಡಿದ್ದರು. ಅದರಂತೆ ಡೀಡ್‌ ಆಫ್‌ ಡಿಕ್ಲರೇಷನ್‌ಗೆ ಸಹಿ ಮಾಡಿ ಅಪಾರ್ಟ್‌ಮೆಂಟ್‌ ಮಾಲೀಕರ ಸಂಘ ರಚಿಸುವುದಾಗಿ ಒಪ್ಪಿಕೊಂಡಿದ್ದರು. ರಾಮ್‌ಕಿ ಒನ್‌ ನಾರ್ತ್‌ ಕೇವಲ ವಸತಿ ಫ್ಲ್ಯಾಟ್‌ಗಳನ್ನು ಒಳಗೊಂಡಿದೆ ಎಂದು ಹೇಳಿದೆ. ಅಲ್ಲದೆ, ಕೆಎಒದಲ್ಲಿನ ಅಂಶಗಳನ್ನು ಪ್ರಸ್ತಾಪಿಸಿರುವ ನ್ಯಾಯಾಲಯ, ‘ಆಸ್ತಿ ಅಥವಾ ಫ್ಲ್ಯಾಟ್‌ಗಳನ್ನು ವಸತಿ ಉದ್ದೇಶಕ್ಕೆ ಮಾತ್ರ ಬಳಸುವುದಾದರೆ ಕೆಎಒ ಅನ್ವಯವಾಗುತ್ತದೆ. ಕ್ರಯಪತ್ರಗಳನ್ನು ಗಮನಿಸಿದರೆ ಇಡೀ ಯೋಜನೆ ವಸತಿ ಬಳಕೆಯ ಉದ್ದೇಶದ್ದಾಗಿದೆ ಮತ್ತು ಯೋಜನೆಯ ಯಾವುದೇ ಜಾಗವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಂಡಿಲ್ಲ. ಹಾಗಾಗಿ, ಸಹಕಾರ ಸೊಸೈಟಿಗಳ ಕಾಯಿದೆ ಈ ವಿಚಾರದಲ್ಲಿಅನ್ವಯಿಸಲ್ಲ ‘ ಎಂದು ಆದೇಶಿಸಿದೆ.

    ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

    ಇಮೇಲ್: sahakaraspandana@gmail.com

    Apartment Owners Association Justice K S Hemalekha Karnataka Apartment Ownership Act Karnataka Cooperative Societies Act
    Previous Articleಸಹಕಾರಿ ವಿಧೇಯಕಗಳಿಗೆ ಸಹಿ ಹಾಕಲು ರಾಜ್ಯಪಾಲರು ನಕಾರ, ರಾಷ್ಟ್ರಪತಿಗಳ ಪರಾಮರ್ಶೆಗೆ ಶಿಫಾರಸು
    Next Article ಕೆಎಂಎಫ್ ನಿರ್ದೇಶಕರಾಗಿ ಬೆಳಪು ದೇವಿಪ್ರಸಾದ್‌ ಶೆಟ್ಟಿ ಆಯ್ಕೆ

    Related Posts

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.