ಸದಸ್ಯರ ಕಲ್ಯಾಣಕ್ಕೆ ಸಾಂತ್ವನ, ಚೇತನಾ, ಸುಭದ್ರಾ ಯೋಜನೆಗಳ ಬಿಡುಗಡೆ
ವರ್ಷಪೂರ್ತಿ ನಡೆಯಲಿದೆ ಸ್ವಚ್ಛ ಭಾರತ್ (ಅವೇಕ್ ಕುಡ್ಲ) ಕಾರ್ಯಕ್ರಮ
ಮಂಗಳೂರು: ವಿಶ್ವಕರ್ಮ ಸಹಕಾರ ಬ್ಯಾಂಕ್ ಪ್ರಸಕ್ತ ವರ್ಷ ಸ್ವರ್ಣ ಜಯಂತಿ ವರ್ಷದ ಸ್ವರ್ಣ ಸಂಭ್ರಮವನ್ನು ಅರ್ಥಪೂರ್ಣವಾಗಿ ಆಚರಿಸುವ ಯೋಜನೆ ಹಾಕಿಕೊಂಡಿದ್ದು, ಮೇ 11, 2025ರಿಂದ ಮುಂದಿನ ಮೇ 11, 2026ವರೆಗೆ ಇಡೀ ವರ್ಷ ಸದಸ್ಯರ ಕಲ್ಯಾಣ ಕಾರ್ಯಕ್ರಮಗಳು, ಮೌಲ್ಯವರ್ಧಿತ ಗ್ರಾಹಕ ಸೇವೆಗಳು ಹಾಗೂ ರಚನಾತ್ಮಕ ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.
https://chat.whatsapp.com/EbVKVnWB6rlHT1mWtsgbch
ಭಾನುವಾರ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆದ ೪೯ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಸ್ವರ್ಣ ಜಯಂತಿ ಕಾರ್ಯಕ್ರಮಗಳಿಗೆ ಚಾಲನೆ ನೀಡುವ ಸಂದರ್ಭ ನಾಲ್ಕು ಯೋಜನಗೆಳನ್ನು ಅನಾವರಣಗೊಳಿಸಲಾಗಿದೆ. ಈ ಸಂದರ್ಭದಲ್ಲಿ ವಿಶ್ವಕರ್ಮ ಸಹಕಾರ ಬ್ಯಾಂಕಿನ ಅಧ್ಯಕ್ಷರಾದ ಡಾ.ಎಸ್ ಆರ್ ಹರೀಶ್ ಆಚಾರ್ಯ, ಎಸ್ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಡಾ.ಎಂ.ಎನ್ ರಾಜೇಂದ್ರ ಕುಮಾರ್, ಮಂಗಳೂರು ದಕ್ಷಿಣ ಶಾಸಕರಾದ ಡಿ.ವೇದವ್ಯಾಸ ಕಾಮತ್, ಬ್ಯಾಂಕಿನ ಸ್ಥಾಪಕ ಸದಸ್ಯರಾಗಿದ್ದ ಮುನಿಯಾಲು ದಾಮೋದರ ಆಚಾರ್ಯ, ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಾದ ಶಶಿಕುಮಾರ್ ರೈ ಬಾಲ್ಯೊಟ್ಟು, ಕಟಪಾಡಿ ಶ್ರೀಮದ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀಧರ ಆಚಾರ್ಯ ವಡೇರಹೋಬಳಿ, ಶ್ರೀ ಲಕ್ಷ್ಮೀ ಜ್ಯುವೆಲ್ಲರ್ನ ಮಾಲೀಕರಾದ ಬಿ.ಪ್ರವೀಣ್ ಶೇಟ್, ಮುನಿಯಾಲು ಸಂಜೀವಿನಿ ಫಾರ್ಮ್ಸ್ನ ಸವಿತಾ ರಾಮಕೃಷ್ಣ ಆಚಾರ್ಯ, ವಿಶ್ವಕರ್ಮ ಸಹಕಾರ ಬ್ಯಾಂಕ್ ಉಪಾಧ್ಯಕ್ಷರಾದ ಜಗದೀಶ್ ಆಚಾರ್ಯ, ವ್ಯವಸ್ಥಾಪಕ ನಿರ್ದೇಶಕರಾದ ವಸಂತ ಅಡ್ಯಂತಾಯ ಉಪಸ್ಥಿತರಿದ್ದರು.
ಯಾವೆಲ್ಲ ಯೋಜನೆಗಳು…?
1. ನಮ್ಮ ಬ್ಯಾಂಕ್ ಸಾಂತ್ವನ ಯೋಜನೆ
ಸ್ವರ್ಣ ಜಯಂತಿಯ ಸಂದರ್ಭದಲ್ಲಿ ಬ್ಯಾಂಕಿನ ಸದಸ್ಯರ ಶ್ರೇಯೋಭಿವೃದ್ಧಿಯ ಎರಡು ‘ಸಾಂತ್ವನ’ ಯೋಜನೆಗಳನ್ನು ಬಿಡುಗಡೆಗೊಳಿಸಲಾಗಿದೆ.
-
ನಮ್ಮ ಬ್ಯಾಂಕ್ ಸದಸ್ಯರ ಮರಣ ಸಾಂತ್ವನ ಯೋಜನೆ
ನಮ್ಮ ಬ್ಯಾಂಕಿನ ಯಾವುದೇ ಸದಸ್ಯರು ಮರಣ ಹೊಂದಿದಲ್ಲಿ ಅಂತಹ ಸದಸ್ಯರ ಕುಟುಂಬದ ವಾರಸುದಾರರಿಗೆ ರೂ 10,000/- ವನ್ನು ಸಾಂತ್ವನ ಪರಿಹಾರವಾಗಿ ಈ ಯೋಜನೆಯ ಅಡಿಯಲ್ಲಿ ನೀಡಲಾಗುತ್ತದೆ. ಈ ಸದಸ್ಯರ ಮರಣ ಸಾಂತ್ವನ ಯೋಜನೆಯು ಸ್ವರ್ಣ ಜಯಂತಿ ವರ್ಷದ ನಂತರವೂ ಮುಂದುವರಿಯಲಿದೆ.
-
ನಮ್ಮ ಬ್ಯಾಂಕ್ ಅಪಘಾತ ಸಾಂತ್ವನ ವಿಮಾ ಯೋಜನೆ
ರೂ. 2 ಲಕ್ಷದವರೆಗಿನ ಅಪಘಾತ ವಿಮೆ (Accidendent Insurance Policy) ಯನ್ನು ಬ್ಯಾಂಕ್ ಅಪಘಾತ ಸಾಂತ್ವನ ವಿಮಾ ಯೋಜನೆಯಡಿ ಬ್ಯಾಂಕಿನ ಎಲ್ಲಾ ಸದಸ್ಯರಿಗೆ ಸಂಪೂರ್ಣ ಉಚಿತವಾಗಿ ನೀಡಿ ಜಾರಿಗೊಳಿಸುತ್ತಿದ್ದೇವೆ. ಈ ಸಾಂತ್ವನ ವಿಮಾ ಯೋಜನೆಯ ಪ್ರಯೋಜನವನ್ನು ಸ್ವರ್ಣ ಜಯಂತಿ ವರ್ಷದ ನಂತರವೂ ನಮ್ಮ ಬ್ಯಾಂಕಿನ ಎಲ್ಲಾ ಸದಸ್ಯರು ಪಡೆಯಲಿದ್ದಾರೆ. ಇದಕ್ಕಾಗಿ ಸದಸ್ಯರು ನಿಗದಿತ ನಮೂನೆಯ ಆರ್ಜಿಯೊಂದನ್ನು ಶಾಖೆಗಳಲ್ಲಿ ಸಲ್ಲಿಸಬೇಕಾಗುತ್ತದೆ.
2. ವಿಶ್ವಕರ್ಮ ಚೇತನಾ ಯೋಜನೆ
ವಿಶ್ವಕರ್ಮ ಸಹಕಾರ ಬ್ಯಾಂಕ್ ಚಿನ್ನದ ಕೆಲಸಗಾರರಂತಹ ಕುಶಲಕರ್ಮಿ ಸಮುದಾಯದ ಸದಸ್ಯರಿಂದ ಕೂಡಿದ ಬ್ಯಾಂಕ್. ಆದುದರಿಂದ ಕುಶಲಕರ್ಮಿ ಸಮುದಾಯದ ಆರ್ಥಿಕ ಸಬಲೀಕರಣದ ಮಹತ್ವದ ಉದ್ದೇಶ ಇಟ್ಟುಕೊಂಡು ವಿಶ್ವಕರ್ಮ ಚೇತನಾ ಯೋಜನೆ ಜಾರಿಗೊಳಿಸಲಾಗುತ್ತಿದೆ. ಕುಶಲಕರ್ಮಿ ಸದಸ್ಯರಿಗೆ ಈ ಯೋಜನೆಯ ಅಡಿಯಲ್ಲಿ ಶೇಕಡಾ 12.5 ಬಡ್ಡಿದರದಲ್ಲಿ ರೂಪಾಯಿ 2 ಲಕ್ಷದವರೆಗೆ ಕೇವಲ ವೈಯಕ್ತಿಕ ಭದ್ರತೆಯ ಮೇಲೆ ಮೀರೆಳೆತ ಸಾಲ (Over Draft) ಸೌಲಭ್ಯ ಒದಗಿಸಲಾಗುತ್ತದೆ. ಚಿನ್ನದ ಕೆಲಸ, ಬೆಳ್ಳಿಯ ಕೆಲಸ, ಕಂಚಿನ ಕೆಲಸ, ಕಬ್ಬಿಣದ ಕೆಲಸ, ಮರದ ಕೆಲಸ, ಶಿಲ್ಪದ ಕೆಲಸ, ಕಸೂತಿ ಕೆಲಸ, ಗೊಂಬೆ ತಯಾರಿಕೆ ಹಾಗೂ ಟೈಲರಿಂಗ್ ಕೆಲಸ ನಿರ್ವಹಿಸುವ ಕುಶಲಕರ್ಮಿ ಸದಸ್ಯರಿಗೆ ಈ ಸಾಲ ಸೌಲಭ್ಯ ದೊರಕಲಿದೆ.
3. ಸ್ವರ್ಣ ಸಂಭ್ರಮ ಸುಭದ್ರಾ ಯೋಜನೆಗಳು
A. ಸ್ವರ್ಣ ಸಂಭ್ರಮ ಸುಭದ್ರಾ – ನಗದು ಪ್ರಮಾಣಪತ್ರ (Cash Certificate)
- ಕನಿಷ್ಠ ಠೇವಣಿ ಮೊತ್ತ: ₹10,000/-
- ಅವಧಿ: 96 ತಿಂಗಳು
- ಮೆಚ್ಯುರಿಟಿ ಮೊತ್ತ: ₹20,000/
-
B.ಸ್ವರ್ಣ ಸಂಭ್ರಮ ಸುಭದ್ರಾ – ಫ್ಲೆಕ್ಸಿ ಯೂನಿಟ್ ಠೇವಣಿ ಯೋಜನೆ
- ಕನಿಷ್ಠ ಠೇವಣಿ ಮೊತ್ತ: ₹10,000/-
- ಠೇವಣಿ ಯೂನಿಟ್ಗಳಲ್ಲಿ – 1 ಯೂನಿಟ್ = ₹5,000/-
- ಕನಿಷ್ಠ ಅವಧಿ: 12 ತಿಂಗಳು
- ಗರಿಷ್ಠ ಅವಧಿ: 60 ತಿಂಗಳು
- ಠೇವಣಿ ಅವಧಿಯಲ್ಲಿ ಯಾವುದೇ ಸಮಯದಲ್ಲಿ ₹5,000/- ಗಳ ಗುಣಾಕಾರದಲ್ಲಿ ಭಾಗಶಃ ಹಣ ಹಿಂತೆಗೆದುಕೊಳ್ಳಬಹುದು.
-
C.ಸ್ವರ್ಣ ಸಂಭ್ರಮ ಸುಭದ್ರಾ – ಉಳಿತಾಯ ಖಾತೆ (Savings Bank Deposit Account)
ಪ್ರಮುಖ ಅಂಶಗಳು:
- ಖಾತೆಯ ಕನಿಷ್ಠ ಮೊತ್ತ: ₹25,000/-
- ಚೆಕ್ಲೀಫ್ಗಳು: ವರ್ಷಕ್ಕೆ 50 ಚೆಕ್ಲೀಫ್ಗಳು ಉಚಿತ
- NEFT/RTGS ಸೇವೆ: ಉಚಿತ
- SMS ಎಚ್ಚರಿಕೆ ಸೇವೆ: ಉಚಿತ
- ಇಮೇಲ್ ಎಚ್ಚರಿಕೆ ಸೇವೆ: ಉಚಿತ
- ₹2,00,000/- ವರೆಗೆ ಅಪಘಾತ ವಿಮಾ ಸೌಲಭ್ಯ
- Safe Deposit Locker ವಾರ್ಷಿಕ ಬಾಡಿಗೆಯಲ್ಲಿ 10% ರಿಯಾಯಿತಿ
- QR ಕೋಡ್ ಸ್ಕ್ಯಾನರ್ ಸೌಲಭ್ಯ
- ಯಾವುದೇ ಶಾಖೆಯಿಂದ ಉಚಿತ ಬ್ಯಾಂಕಿಂಗ್ ಸೇವೆ
- ಸ್ಥಾಯಿ ನಿರ್ದೇಶನ (Standing Instruction) ಸೌಲಭ್ಯ ಲಭ್ಯವಿದೆ.
- ಸಾಮಾನ್ಯ ಉಳಿತಾಯ ಖಾತೆಗಿಂತ 1% ಹೆಚ್ಚಿದ ಬಡ್ಡಿದರ
-
D.ಸ್ವರ್ಣ ಸಂಭ್ರಮ ಸುಭದ್ರಾ – ಪ್ರಸ್ತುತ ಠೇವಣಿ ಖಾತೆ (Current Deposit Account)
ಪ್ರಮುಖ ಅಂಶಗಳು:
- ಖಾತೆಯ ಕನಿಷ್ಠ ಮೊತ್ತ: ₹50,000/-
- ಚೆಕ್ಲೀಫ್ಗಳು: ವರ್ಷಕ್ಕೆ 100 ಚೆಕ್ಲೀಫ್ಗಳು ಉಚಿತವಾಗಿ
- NEFT/RTGS ಸೇವೆ: ಉಚಿತ
- SMS ಎಚ್ಚರಿಕೆ ಸೇವೆ: ಉಚಿತ
- ಇಮೇಲ್ ಎಚ್ಚರಿಕೆ ಸೇವೆ: ಉಚಿತ
- Safe Deposit Locker ವಾರ್ಷಿಕ ಬಾಡಿಗೆಯಲ್ಲಿ 10% ರಿಯಾಯಿತಿ
- QR ಕೋಡ್ ಸ್ಕ್ಯಾನರ್ ಸೌಲಭ್ಯ
- ಯಾವುದೇ ಶಾಖೆಯಿಂದ ಉಚಿತ ಬ್ಯಾಂಕಿಂಗ್ ಸೇವೆ
- ಸ್ಥಾಯಿ ನಿರ್ದೇಶನ (Standing Instruction) ಸೌಲಭ್ಯ ಲಭ್ಯವಿದೆ
- ಲೆಡ್ಜರ್ ಪೋಲಿಯೋ ಶುಲ್ಕ ಇರುವುದಿಲ್ಲ
- ಖಾತೆ ನಿರ್ವಹಣಾ ಶುಲ್ಕ ಇರುವುದಿಲ್ಲ
-
4.ಸ್ವಚ್ಛ ಭಾರತ್ Awake Kudla
ನಮ್ಮ ಪರಿಸರದ ಸ್ವಚ್ಛತೆ ಅದು ನಮ್ಮ ಕರ್ತವ್ಯವಾಗಿದೆ. ‘ನಮ್ಮ ಬ್ಯಾಂಕ್’ನ ಎಲ್ಲಾ ಐದು ಶಾಖೆಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿರಂತರ 50 ವಾರ ತಲಾ 50 ಸ್ವಚ್ಛ ಭಾರತ್ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಮಾಜಮುಖಿಯಾಗಿ ಕಾರ್ಯವಿರ್ವಹಿಸಲಿದೆ. ಸ್ವಚ್ಛ ಭಾರತ್ ಕಾರ್ಯವನ್ನು ಬ್ಯಾಂಕಿನ ಸಿಬ್ಬಂದಿಗಳು, ಸದಸ್ಯರು, ಗ್ರಾಹಕರು, ಸಾಮಾಜಿಕ ಕಾರ್ಯಕರ್ತರು ಹಾಗೂ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಯಶಸ್ವಿಯಾಗಿ ಕಾರ್ಯರೂಪಕ್ಕೆ ತರಲಾಗುವುದು. ಸ್ವಚ್ಛ ಭಾರತ್ ಕಾರ್ಯಕ್ರಮಗಳಲ್ಲಿ ಸ್ವಚ್ಛತೆಯ ಶ್ರಮದಾನ, ಒಣಕಸ-ಹಸಿಕಸ ನಿರ್ವಹಣೆಯ ಜಾಗೃತಿ, ಪರಿಸರ ಜಾಗೃತಿ, ವೃಕ್ಷಾರೋಪಣ, ನಗರ ಅರಣ್ಯ, ನಗರ ಸೌಂದರ್ಯೀಕರಣ, ನೀರಿನ ಸದ್ಭಳಕೆ, ಸಾಮುದಾಯಿಕ ಜೀವನ ಕ್ರಮಗಳು (Community Living) ಇತ್ಯಾದಿ ಸಾಮಾಜಿಕ ಕಾರ್ಯಗಳನ್ನು ಜೋಡಿಸಿಕೊಂಡು ನಡೆಸಲಾಗುತ್ತದೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com