Close Menu
    Top News

    ಸ್ವಚ್ಛತೆ, ಪರಿಸರ ಜಾಗೃತಿ ನಾಗರಿಕ ಶಿಷ್ಟಾಚಾರದ ಭಾಗ : ಡಾ.ರಾಧಾಕೃಷ್ಣ ನಾಯರ್

    June 7, 2026

    ಪ್ರಣವ ಸೌಹಾರ್ದ ಸೊಸೈಟಿಯಿಂದ ಜೂನ್‌ 12ರಿಂದ 14ರ ತನಕ ಸುಳ್ಯದಲ್ಲಿ ಹಲಸು -ಮಾವು ಮೇಳ

    June 6, 2026

    ನಾಳೆ ವಿಶ್ವಕರ್ಮ ಬ್ಯಾಂಕ್‌ ಸ್ವರ್ಣ ಸಂಭ್ರಮದ ಸ್ವಚ್ಛ ಭಾರತ್‌ ಕಾರ್ಯಕ್ರಮ ಸಮಾರೋಪ

    June 6, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಎಂ.ಸಿ.ಸಿ.ಬ್ಯಾಂಕಿನ 113ನೇ ಸಂಸ್ಥಾಪಕರ ದಿನಾಚರಣೆ, ಸಾಕ್ಷ್ಯಚಿತ್ರ ಬಿಡುಗಡೆ
    News

    ಎಂ.ಸಿ.ಸಿ.ಬ್ಯಾಂಕಿನ 113ನೇ ಸಂಸ್ಥಾಪಕರ ದಿನಾಚರಣೆ, ಸಾಕ್ಷ್ಯಚಿತ್ರ ಬಿಡುಗಡೆ

    adminBy adminMay 12, 2025

    ಅನಾಥಾಶ್ರಮ, ಟ್ರಸ್ಟ್‌ಗೆ ದೇಣಿಗೆ ಹಸ್ತಾಂತರ, ಸಿಎ ತೇರ್ಗಡೆಯಾದವರಿಗೆ ಸನ್ಮಾನ

    ಮಂಗಳೂರು: ಎಂಸಿ.ಸಿ.ಬ್ಯಾಂಕಿನ 113ನೇ ಸಂಸ್ಥಾಪಕರ ದಿನಾಚರಣೆಯನ್ನು ಶನಿವಾರ ಎಂ.ಸಿ.ಸಿ. ಬ್ಯಾಂಕಿನ ಆಡಳಿತ ಕಛೇರಿಯ ಅವರಣದಲ್ಲಿ ಆಚರಿಸಲಾಯಿತು.ಬ್ಯಾಂಕಿನ ಇತಿಹಾಸ ಮತ್ತು ಪ್ರಗತಿಯ ಕುರಿತ ಸಾಕ್ಷಚಿತ್ರವನ್ನು ಈ ಸಂದರ್ಭ ಪ್ರಸ್ತುತಪಡಿಸಲಾಯಿತು.
    ಬ್ಯಾಂಕಿನ ಅಧ್ಯಕ್ಷ ಸಹಕಾರ ರತ್ನ ಅನಿಲ್ ಲೋಬೊ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉಡುಪಿ ಧರ್ಮಪ್ರಾಂತ್ಯದ ಪಿಆರ್‌ಒ ಫಾ|ಡೆನಿಸ್ ಡೇಸಾ, ಅತಿಥಿಗಳಾಗಿ ಮಂಗಳೂರು ಧರ್ಮಪ್ರಾಂತ್ಯದ ಪ್ರಾಂತೀಯ ಸುಪೀರಿಯರ್‌ ಸಿ|ಕ್ಲಾರಾ ಮಿನೇಜಸ್, ಯುಎಫ್‌ಸಿ, ಪ್ರಜ್ಞಾ ಕೌನ್ಸೆಲಿಂಗ್ ಸೆಂಟರ್‌ನ ನಿರ್ದೇಶಕಿ ಪ್ರೊ.ಹಿಲ್ಡಾ ರಾಯಪ್ಪನ್, ಮಂಗಳೂರು ಕೊಂಕಣ್ಸ್ ದುಬಾಯ್, ಅಧ್ಯಕ್ಷ ಸ್ಟೀಫನ್ ಮಿನೇಜಸ್ ಮತ್ತು ಬ್ಯಾಂಕಿನ ಮಹಾಪ್ರಬಂಧಕ ಸುನೀಲ್ ಮಿನೇಜಸ್ ಹಾಜರಿದ್ದರು.

    https://chat.whatsapp.com/EbVKVnWB6rlHT1mWtsgbch
    ಬ್ಯಾಂಕಿನ ಅಧ್ಯಕ್ಷ ಅನಿಲ್ ಲೋಬೊ ಪ್ರಾಸ್ತಾವಿಕ ಮಾತನಾಡಿ, ಎಂ.ಸಿ.ಸಿ. ಬ್ಯಾಂಕಿನ ರೂಪಾಂತರ, ಸೇವೆ ಮತ್ತು ಕಾರ್ಯಕ್ಷಮತೆಯಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳೊಂದಿಗೆ ಎಂಸಿಸಿ ಬ್ಯಾಂಕ್‌ ಸಮಾನವಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ವಿವರಿಸಿದರು. ಬ್ಯಾಂಕಿನ ಪ್ರಗತಿ, ಸಾಧನೆಯನ್ನು ವಿವರಿಸಿ ಸಂಸ್ಥಾಪಕರ ದಿನಾಚರಣೆಯ ಮಹತ್ವವನ್ನು ವಿವರಿಸಿದರು.
    ಬ್ಯಾಂಕಿನ ಸಂಸ್ಥಾಪಕರ ದಿನಾಚರಣೆಯ ಪ್ರಯುಕ್ತ ಸಂಸ್ಥಾಪಕ ಪಿ.ಎಫ್. ಎಕ್ಸ್ ಸಲ್ಡಾನ್ಹಾರವರ ಕುಟುಂಬದ ಸದಸ್ಯರು ಮತ್ತು ಅತಿಥಿಗಳು ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.


    ಫಾ|ಡೆನಿಸ್ ಡೇಸಾ ಮಾತನಾಡಿ ಪ್ರಗತಿಯತ್ತ ಮುನ್ನುಗ್ಗುತ್ತಿರುವ ಬ್ಯಾಂಕಿನ ಸಾಧನೆಯ ಬಗ್ಗೆ ಅಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು ಮತ್ತು ಸಿಬ್ಬಂದಿಯನ್ನು ಅಭಿನಂದಿಸಿದರು. ಪಾನೀರ್‌ನ ದಿ ಮರ್ಸಿಡ್ ಅನಾಥಾಶ್ರಮ ಮತ್ತು ಕಂಕನಾಡಿಯ ಶಾಲೋಮ್ ಟ್ರಸ್ಟ್‌ಗೆ ದೇಣಿಗೆ ವಿತರಿಸಲಾಯಿತು. ಸಿ| ಕ್ಲಾರಾ ಮಿನೇಜಸ್‌ ಬ್ಯಾಂಕಿನ ಪ್ರಗತಿಯನ್ನು ತೋರಿಸುವ ಬುಲೆಟಿನ್ ಬಿಡುಗಡೆ ಮಾಡಿದರು. ಸಿಎ ಉತ್ತೀರ್ಣರಾದ ಗ್ರಾಹಕರ ಮಕ್ಕಳಾದ ಚಾರ್ಟರ್ಡ್ ಅಕೌಂಟೆಂಟ್‌ಗಳನ್ನು ಸನ್ಮಾನಿಸಲಾಯಿತು.
    ಸಂತ ಅಲೋಶಿಯಸ್ ಕಾಲೇಜಿನ ಪ್ರೊಫೆಸರ್ ಮತ್ತು ಎಂಸಿಸಿ ಬ್ಯಾಂಕಿನ ಮಾಜಿ ಉಪಾಧ್ಯಕ್ಷ ಡಾ| ಎಡ್ಮಂಡ್ ಜೆ.ಬಿ. ಫ್ರಾಂಕ್ ಮತ್ತು ಎಂ.ಸಿ.ಸಿ. ಬ್ಯಾಂಕಿನ ಮಾಜಿ ನಿರ್ದೇಶಕ ಮತ್ತು ಬರಹಗಾರ ಮಾರ್ಸೆಲ್ ಎಂ. ಡಿಸೋಜ, ಮಂಗಳೂರು ಕೊಂಕಣ್ಸ್ ದುಬೈನ ಅಧ್ಯಕ್ಷ ಸ್ಟೀಫನ್ ಮಿನೇಜಸ್, ಪ್ರಜ್ಞಾ ಕೌನ್ಸೆಲಿಂಗ್ ಸೆಂಟರ್‌ನ ನಿರ್ದೇಶಕಿ ಪ್ರೊ. ಹಿಲ್ಡಾ ರಾಯಪ್ಪನ್ ಅವರನ್ನು ಸನ್ಮಾನಿಸಲಾಯಿತು.
    ಸಿಎ ಲಯ್ನಾಲ್ ನೋರೊನ್ಹಾ ಬ್ಯಾಂಕಿನ ಇತಿಹಾಸ, ಪ್ರಗತಿಯನ್ನು ವಿವರಿಸಿ, ಅಧ್ಯಕ್ಷರು ಮತ್ತು ಆಡಳಿತ ಮಂಡಳಿಯನ್ನು ಅಭಿನಂದಿಸಿದರು. ಬ್ಯಾಂಕಿನ ನಿರ್ದೇಶಕರಾದ ಅನಿಲ್ ಪತ್ರಾವೊ, ಆಂಡ್ರ್ಯೂ ಡಿಸೋಜ, ಹೆರಾಲ್ಡ್ ಮೊಂತೇರೊ, ರೋಶನ್ ಡಿಸೋಜ, ಡಾ|ಜೆರಾಲ್ಡ್ ಪಿಂಟೊ, ಮೆಲ್ವಿನ್ ವಾಸ್, ಸಿ.ಜಿ.ಪಿಂಟೊ, ಐರಿನ್ ರೆಬೆಲ್ಲೊ, ಡಾ|ಫ್ರೀಡಾ ಡಿಸೋಜ, ಶರ್ಮಿಳಾ ಮಿನೇಜಸ್, ಫೆಲಿಕ್ಸ್ ಡಿಕ್ರುಜ್ ಮತ್ತು ಆಲ್ವಿನ್ ಪಿ. ಮೊಂತೇರೊ ಹಾಜರಿದ್ದರು. ಬ್ಯಾಂಕಿನ ಮಹಾಪ್ರಬಂಧಕ ಸುನಿಲ್ ಮಿನೇಜಸ್ ವಂದಿಸಿ, ಗ್ರೀಶ್ಮಾ ಸಲ್ಡಾನ್ಹಾ ನೀರುಮಾರ್ಗ ಕಾರ್ಯಕ್ರಮ ನಿರೂಪಿಸಿದರು.

    ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

    ಇಮೇಲ್: sahakaraspandana@gmail.com

    Anil Lobo Banking Co Operative ministry Cooperative Cooperative Registrar MCC BANK MCC Bank Founders Day
    Previous Articleಎಂ.ಸಿ. ಸಿ. ಬ್ಯಾಂಕ್‌ 113ನೇ ಸ್ಥಾಪಕ ದಿನಾಚರಣೆ, ಪ್ರಗತಿಯ ಸಾಕ್ಷ್ಯಚಿತ್ರ ಬಿಡುಗಡೆ
    Next Article ಎಸ್‌.ಕೆ ಗೋಲ್ಡ್‌ಸ್ಮಿತ್ಸ್‌ ಇಂಡಸ್ಟ್ರಿಯಲ್‌ ಕೋ ಆಪರೇಟಿವ್ ಸೊಸೈಟಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

    Related Posts

    ಸ್ವಚ್ಛತೆ, ಪರಿಸರ ಜಾಗೃತಿ ನಾಗರಿಕ ಶಿಷ್ಟಾಚಾರದ ಭಾಗ : ಡಾ.ರಾಧಾಕೃಷ್ಣ ನಾಯರ್

    June 7, 2026

    ಪ್ರಣವ ಸೌಹಾರ್ದ ಸೊಸೈಟಿಯಿಂದ ಜೂನ್‌ 12ರಿಂದ 14ರ ತನಕ ಸುಳ್ಯದಲ್ಲಿ ಹಲಸು -ಮಾವು ಮೇಳ

    June 6, 2026

    ನಾಳೆ ವಿಶ್ವಕರ್ಮ ಬ್ಯಾಂಕ್‌ ಸ್ವರ್ಣ ಸಂಭ್ರಮದ ಸ್ವಚ್ಛ ಭಾರತ್‌ ಕಾರ್ಯಕ್ರಮ ಸಮಾರೋಪ

    June 6, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    ಸ್ವಚ್ಛತೆ, ಪರಿಸರ ಜಾಗೃತಿ ನಾಗರಿಕ ಶಿಷ್ಟಾಚಾರದ ಭಾಗ : ಡಾ.ರಾಧಾಕೃಷ್ಣ ನಾಯರ್

    June 7, 2026

    ಪ್ರಣವ ಸೌಹಾರ್ದ ಸೊಸೈಟಿಯಿಂದ ಜೂನ್‌ 12ರಿಂದ 14ರ ತನಕ ಸುಳ್ಯದಲ್ಲಿ ಹಲಸು -ಮಾವು ಮೇಳ

    June 6, 2026

    ನಾಳೆ ವಿಶ್ವಕರ್ಮ ಬ್ಯಾಂಕ್‌ ಸ್ವರ್ಣ ಸಂಭ್ರಮದ ಸ್ವಚ್ಛ ಭಾರತ್‌ ಕಾರ್ಯಕ್ರಮ ಸಮಾರೋಪ

    June 6, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.