ಗುರುಪುರ: ಗುರುಪುರ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷರಾಗಿ ಓಂಪ್ರಕಾಶ್ ಶೆಟ್ಟಿ ಎರಡನೇ ಬಾರಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಉದಯ ಭಟ್ ಆಯ್ಕೆಯಾಗಿದ್ದಾರೆ.
https://chat.whatsapp.com/EbVKVnWB6rlHT1mWtsgbch
ನ್ಯಾಯಾಲಯದ ಆದೇಶದಂತೆ ರಿಟರ್ನಿಂಗ್ ಅಧಿಕಾರಿ ಎನ್.ಜೆ ಗೋಪಾಲ್ ಫಲಿತಾಂಶ ಘೋಷಣೆ ಮಾಡಿದರು. ಎಪ್ರಿಲ್ 2ರಂದು ಒಟ್ಟು ಸದಸ್ಯರ ಪೈಕಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ನಡೆಯಿತು. ನೂತನ ಸದಸ್ಯರಾಗಿ ಪದ್ಮನಾಭ ಆಳ್ವ ಕೆ., ದಿನೇಶ್ ಜೆ.ಕರ್ಕೇರ, ಶೀನ ಕೋಟ್ಯಾನ್ ಜಿ, ಕಿಶೋರ್ ಕುಮಾರ್, ಸಚಿನ್ ಕುಮಾರ್ ಅಡಪ, ನಳಿನಾಕ್ಷಿ, ಲತಾ ಆರ್.ಶೆಟ್ಟಿ, ನಾಗಪ್ಪ ಬಿ., ರಾಜೇಶ್, ಶ್ರೀನಿವಾಸ ಸುವರ್ಣ ಹಾಗೂ ಸಂಜಯ ಅತಿಕಾರಿ ಅವರು ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com