Close Menu
    Top News

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಅಡಿಕೆ ಬೆಳೆಗಾರರ ಹಿತಾಸಕ್ತಿ ಕಾಪಾಡಲು ಕ್ರಮ ಕೈಗೊಳ್ಳಲು ಕ್ಯಾಂಪ್ಕೋ ಮನವಿ
    News

    ಅಡಿಕೆ ಬೆಳೆಗಾರರ ಹಿತಾಸಕ್ತಿ ಕಾಪಾಡಲು ಕ್ರಮ ಕೈಗೊಳ್ಳಲು ಕ್ಯಾಂಪ್ಕೋ ಮನವಿ

    adminBy adminJanuary 25, 2025

    ಮಂಗಳೂರು: ಭಾರತಕ್ಕೆ ಹುರಿದ(Roasted) ಅಡಿಕೆಯ ಆಮದಿನಿಂದ ದೇಶೀಯ ಅಡಿಕೆ ಬೆಳೆಗಾರರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿರುವ ಕ್ಯಾಂಪ್ಕೋ ಈ ಕುರಿತು ತಕ್ಷಣ ಮಧ್ಯಪ್ರವೇಶ ಮಾಡುವಂತೆ ಕೇಂದ್ರ ವಾಣಿಜ್ಯ ಮತ್ತು ಉದ್ಯಮ ಸಚಿವರಿಗೆ ಪತ್ರದ ಮೂಲಕ ಮನವಿ ಮಾಡಿದೆ.

    https://chat.whatsapp.com/Ge11n7QCiMj5QyPvCc0H19
    ಹುರಿದ ಅಡಿಕೆ HSN ಕೋಡ್ 20081920 ಅಡಿಯಲ್ಲಿ ಮೌಲ್ಯವರ್ಧಿತ ಉತ್ಪನ್ನದ ರೂಪದಲ್ಲಿ ಆಮದು ಮಾಡಲಾಗುತ್ತಿದ್ದು, ಕಸ್ಟಮ್ಸ್ ಡ್ಯೂಟಿ ತಪ್ಪಿಸಲು ತಪ್ಪು ವರ್ಗೀಕರಣದ ಮೂಲಕ ಮಾರುಕಟ್ಟೆಗೆ ಪ್ರವೇಶಿಸುತ್ತಿದೆ. ಈ ರೀತಿಯ ಅಕ್ರಮಗಳು ಮಾರುಕಟ್ಟೆಯ ಸಮತೋಲನ ಹಾಳು ಮಾಡುವುದಲ್ಲದೇ ಸರಬರಾಜು ಕೊರತೆಯಿದ್ದರೂ ಬೆಲೆ ಏರಿಕೆಗೆ ಅವಕಾಶ ನೀಡದೆ ದೇಶೀಯ ಬೆಳೆಗಾರರ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವಲ್ಲಿ ತಡೆಯಾಗಿದೆ. CAMPCO ಮಾಹಿತಿಯ ಪ್ರಕಾರ, ಈ ಆಮದು ಅಡ್ವಾನ್ಸ್ ರೂಲಿಂಗ್ ಲೈಸೆನ್ಸ್‌ಗಳ ಮೂಲಕ ಕೇವಲ 12% GST ನಿಗದಿಯಾಗಿದ್ದು, ಈ ಅಡಿಕೆಯನ್ನು ಸ್ಥಳೀಯ ಅಡಿಕೆಯೊಂದಿಗೆ ಮಿಶ್ರಣ ಮಾಡಿ ಮಾರಾಟ ಮಾಡಲಾಗುತ್ತಿದೆ. ಇದರಿಂದ ಉತ್ಪನ್ನದ ಗುಣಮಟ್ಟ ಹಾಳಾಗುತ್ತಿದೆ ಮತ್ತು ಖರೀದಿದಾರರಿಂದ ಸಗಟಾಗಿ ತಿರಸ್ಕಾರವಾಗುವ ಸಾಧ್ಯತೆ ಇದೆ. ಇದಲ್ಲದೆ ಸ್ಥಳೀಯ ಖರೀದಿದಾರರು ಕೂಡ ಈ ಮಿಶ್ರಿತ ಅಡಿಕೆಯನ್ನು ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದು ಈ ಅಡಿಕೆ ಉತ್ತರ ಭಾರತಕ್ಕೆ ಸಗಟು ಮಾಡಿದ ನಂತರ ತಿರಸ್ಕಾರಗೊಳ್ಳುತ್ತದೆ. ಇದರಿಂದ ಚಾಲಿ ಅಡಿಕೆಯ ಬೆಲೆ ಕುಸಿದು, ಅಡಿಕೆಯ ಮಾರುಕಟ್ಟೆ ಮೇಲೆ ಪರಿಣಾಮ ಬೀರಿ, ಬೆಳೆಗಾರರ ಆದಾಯಕ್ಕೆ ತೀವ್ರ ಹಾನಿಯುಂಟಾಗುವ ಸಾಧ್ಯತೆಗಳಿವೆ.

    ಕ್ಯಾಂಪ್ಕೋ ಸರ್ಕಾರಕ್ಕೆ ಈ ಕೆಳಕಂಡ ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಮಾಡಿದೆ:
    1. ಯಾವುದೇ ರೂಪದ ಅಡಿಕೆಯ ಆಮದಿಗೆ ಕನಿಷ್ಠ ಆಮದು ದರವನ್ನು ನಿಗದಿ ಮಾಡುವುದು.
    2. HSN ಕೋಡ್‌ಗಳ ತಪ್ಪು ವರ್ಗೀಕರಣವನ್ನು ತಡೆಯಲು ಎಲ್ಲಾ ರೀತಿಯ ಅಡಿಕೆಗೆ ಏಕ ರೂಪ HSN ಕೋಡ್ ನಿಗದಿಪಡಿಸುವುದು ಮತ್ತು ನಿಯಂತ್ರಣ ಕ್ರಮಗಳನ್ನು ಬಲಪಡಿಸುವುದು.
    3. ದೇಶೀಯ ಬೆಳೆಗಾರರಿಗೆ ನ್ಯಾಯಸಮ್ಮತ ದರ ದೊರಕುವಂತೆ ನೀತಿಗಳನ್ನು ರೂಪಿಸುವುದು.

    ಕ್ಯಾಂಪ್ಕೋ ಬೆಳೆಗಾರರನ್ನು ಆಮದು ಅಡಿಕೆ ಖರೀದಿ ಮತ್ತು ಸ್ಥಳೀಯ ಅಡಿಕೆಯೊಂದಿಗೆ ಮಿಶ್ರಣ ಮಾಡದಂತೆ ಮನವಿ ಮಾಡಿದೆ, ಇದು ಕೃಷಿಕ ಸಮುದಾಯದ ಹಿತವನ್ನು ಕಾಪಾಡಲು ಅಗತ್ಯವಾಗಿದೆ ಎಂದು ಅದು ಅಭಿಪ್ರಾಯಪಟ್ಟಿದೆ.

    ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

    ಇಮೇಲ್: sahakaraspandana@gmail.com

    Action to Protect Arecanut Farmers Areccanut Campco Customs Duty HSN Code Market Disruptions Roasted Arecanut The Centrol Areconut & Cocoo Morketing & Processing Co-operotive Lrd. Union Minister of Commerce & Industry
    Previous Articleಬೆಳ್ತಂಗಡಿ ಕಥೋಲಿಕ್ ಕ್ರೆಡಿಟ್ ಸಹಕಾರ ಸಂಘದ ಆಶಾಕಿರಣ ವಾಣಿಜ್ಯ ಸಂಕೀರ್ಣ ಲೋಕಾರ್ಪಣೆ
    Next Article ಆತ್ಮಶಕ್ತಿ ಸಹಕಾರಿ ಸಂಘದಿಂದ ಕುದ್ರೋಳಿಯಲ್ಲಿ ಉಚಿತ ವೈದ್ಯಕೀಯ, ನೇತ್ರ ತಪಾಸಣಾ ಮತ್ತು ದಂತ ಚಿಕಿತ್ಸಾ ಶಿಬಿರ

    Related Posts

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.