Close Menu
    Top News

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ನಗುಮುಖದ ಸೇವೆ ಠೇವಣಿ ಇದ್ದ ಹಾಗೆ
    News

    ನಗುಮುಖದ ಸೇವೆ ಠೇವಣಿ ಇದ್ದ ಹಾಗೆ

    adminBy adminJanuary 3, 2025

    ಪರಮಪೂಜ್ಯ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ

    ಮಂಗಳೂರು: ಸಹಕಾರಿ ಕ್ಷೇತ್ರದಲ್ಲಿ ಗ್ರಾಹಕರಿಗೆ ನೀಡುವ ನಗುಮುಖದ ಸೇವೆಯೇ ನಿಜವಾದ ಠೇವಣಿ ಇದ್ದ ಹಾಗೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
    ಮಂಗಳೂರಿನ ಸೆಂಟ್ರಲ್‌ ಮಾರ್ಕೆಟ್‌ ರಸ್ತೆಯ ರಾಸಿಕ್‌ ಚೇಂಬರ್‌ನಲ್ಲಿ ಶುಕ್ರವಾರ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ 23ನೇ ಶಾಖೆಯ ಉದ್ಘಾಟನಾ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.

    https://chat.whatsapp.com/Ge11n7QCiMj5QyPvCc0H19
    ಬದುಕಿನಲಿ ಎರಡು ಉದ್ದೇಶಗಳಿರಬೇಕು. ಒಂದು -ಏಕೋದ್ದೇಶ, ಇನ್ನೊಂದು ವಿವಿಧೊದ್ದೇಶ. ಅಂತರಂಗದಲ್ಲಿ ಏಕೋದ್ದೇಶ, ಬಹಿರಂಗದಲ್ಲಿ ವಿವಿಧೋದ್ದೇಶಗಳು ಬೇಕು. ಸಹಕಾರ ಎಂದರೆ ಸೌಹಾರ್ದ. ಗ್ರಾಹಕರೇ ಸಹಕಾರ ರಂಗದ ಜೀವಾಳ. ಗ್ರಾಹಕರ ಒತ್ತಾಸೆಗಳಿಗೆ ಪೂರಕವಾಗಿ ನಡೆಸುವ ಪದಾಧಿಕಾರಿಗಳು, ಆಡಳಿತ ಮಂಡಳಿಗಳು, ನಿಸ್ವಾರ್ಥವಾಗಿ ಸೇವೆ ನೀಡುವ ಸಿಬ್ಬಂದಿ ವರ್ಗ ಇದ್ದರೆ ಒಂದು ಸಹಕಾರಿ ಯಶಸ್ವಿಯಾಗಿ ಮುನ್ನಡೆಯುತ್ತದೆ ಎಂದು ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.


    ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್‌ ಮುಖ್ಯ ಅತಿಥಿಯಾಗಿ ಮಾತನಾಡಿ, ಸೌಹಾರ್ದ ಸಹಕಾರಿಯನ್ನು ಬೆಳೆಸಲು ಪರಿಶ್ರಮ ಪಡಬೇಕು, ಯಾವುದೇ ಸಹಕಾರಿ ಸಂಘ ಪ್ರಾರಂಭದಲ್ಲಿ ಒಂದು ಶಾಖೆ ಇರುವಾಗ ಗ್ರಾಹಕರು ಮೂರು ಬಗೆಯನ್ನು ಎದುರು ನೋಡುತ್ತಾರೆ. ಸುರಕ್ಷೆ, ಹಣದ ಹರಿವು ಮತ್ತು ಲಾಭ. ಒಡಿಯೂರು ಶ್ರೀ ವಿವಿಧೊದ್ದೇಶ ಸಹಕಾರಿಯಲ್ಲಿ ಮೂರು ಕೂಡ ಕಾಣಲು ಸಿಕ್ಕಿದ್ದರಿಂದ ಯಶಸ್ವಿಯಾಗಿ ಎತ್ತರಕ್ಕೆ ಏರಿರುವುದು ಕಾಣುತ್ತದೆ. ಒಡಿಯೂರು ಎಂಬ ಹೆಸರು ಕೇಳುವಾಗಲೇ ನಮ್ಮದೇ ಎಂಬ ಭಾವನೆ ಮೂಡುತ್ತದೆ. ಸೊಸೈಟಿ ಅಥವಾ ಯಾವುದೇ ಸಂಸ್ಥೆಯು ಯಶಸ್ವಿಯ ಹಾದಿಯಲ್ಲಿ ಮುನ್ನಡೆಯಬೇಕಾದರೆ ಆ ಸಂಸ್ಥೆಯ ಬಗ್ಗೆ ಜನರಲ್ಲಿ ಇರುವ ಒಳ್ಳೆಯ ಹೆಸರು ಕೆಲಸ ಮಾಡುತ್ತದೆ. ಒಳ್ಳೆಯ ಹೆಸರು ಇದ್ದರೆ ಎಲ್ಲೇ ಇದ್ದರೂ ಜನ ಹುಡುಕಿಕೊಂಡು ಬರುತ್ತಾರೆ ಎಂದು ಅಭಿಪ್ರಾಯಪಟ್ಟರು.


    ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಮಾರ್ಗದರ್ಶಕಿ ಸಾಧ್ವಿ ಮಾತಾನಂದಮಯೀ ಆಶೀರ್ವಚನ ನೀಡಿ, ಗುರುಗಳ ಶ್ರೀರಕ್ಷೆ, ಆಡಳಿತ ಮಂಡಳಿಯ ಅಧ್ಯಕ್ಷರು, ಪದಾಧಿಕಾರಿಗಳು, ಆಡಳಿತ ಮಂಡಳಿಯ ನಿರ್ದೇಶಕರು, ಸಿಬ್ಬಂದಿ ವರ್ಗದವರ ನಿಸ್ವಾರ್ಥ ಸೇವೆಯಿಂದ ಸೊಸೈಟಿಯು ಅಭಿವೃದ್ಧಿ ಸಾಧಿಸಿದೆ. ಆತ್ಮಕಲ್ಯಾಣದೊಂದಿಗೆ ಲೋಕಕಲ್ಯಾಣ ಆಗಬೇಕೆಂಬ ಗುರುಗಳ ದೂರದರ್ಶಿತ್ವದಿಂದ ಒಡಿಯೂರು ಸೊಸೈಟಿಯು ಇಂದು 23 ಶಾಖೆಗೆ ವಿಸ್ತರಿಸಲ್ಪಟ್ಟಿದೆ ಎಂದು ಹೇಳಿದರು.
    ಮಂಗಳೂರು ಮೇಯರ್‌ ಮನೋಜ್‌ ಕುಮಾರ್‌ ಕೋಡಿಕಲ್‌ ಮಾತನಾಡಿ, ಧರ್ಮವಿಲ್ಲದೆ ಜನರಿಲ್ಲ, ಸಹಕಾರವಿಲ್ಲದೆ ಜನರಿಲ್ಲ. ಸಹಕಾರ ತತ್ವವೇ ಜೀವನದ ಸಾರ ಎಂದು ಹೇಳಿದರು. ಗ್ರಾಹಕರಾದ ಪ್ರದೀಪ್‌ ಸಾಂಗ್ವಿ, ಕಿರಣ್‌ ಸಾಂಗ್ವಿ, ಹರ್ಷ ಕೆ.ಬಿ, ಅರಸ ಕೆ.ಬಿ, ಸರೋಜಿನಿ, ವಿಜಯ್‌, ಪ್ರದೀಪ್‌ ಆರ್‌.ಸಾಂಗ್ವಿ, ಭಾವನಾ ಸಾಂಗ್ವಿ, ಜೇಮ್ಸ್‌ ಜೆ.ಮಾರ್ತಾ ಅವರಿಗೆ ಎಫ್‌.ಡಿ ಸರ್ಟಿಫಿಕೆಟ್‌ ವಿತರಿಸಲಾಯಿತು.

    ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಅಧ್ಯಕ್ಷ ಲಯನ್‌ ಎ.ಸುರೇಶ್‌ ರೈ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಮುಖ್ಯ ಅತಿಥಿಗಳಾಗಿ ರಾಸಿಕ್‌ ಚೇಂಬರ್‌ ಮಾಲೀಕ ಕಿರಣ್‌ ಸಾಂಗ್ವಿ, ದ.ಕ. ಜಿಲ್ಲಾ ಒಕ್ಕೂಟ ಸೌಹಾರ್ದ ಸಹಕಾರಿಯ ಅಧ್ಯಕ್ಷ ಭಾಸ್ಕರ ದೇವಸ್ಯ, ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಯೋಜನಾ ನಿರ್ದೇಶಕ ಕಿರಣ್‌ ಯು, ಸೋಮಯಾಜಿ ಎಸ್ಟೇಟ್‌ನ ಸಿಎಂಡಿ ರಘುನಾಥ ಸೋಮಯಾಜಿ ಬಂಟ್ವಾಳ, ಕಲ್ಪನಾ ಸ್ವೀಟ್ಸ್‌ ಮಾಲೀಕ ವರದರಾಯ ನಾಗ್ವೇಕರ್‌, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿರ್ದೇಶಕಿ ಭಾರತಿ ಜಿ.ಭಟ್‌, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ದ.ಕ. ಜಿಲ್ಲಾ ಸಂಯೋಜಕ ವಿಜಯ ಬಿ.ಎಸ್‌ ಭಾಗವಹಿಸಿದ್ದರು. ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ಉಪಾಧ್ಯಕ್ಷ ಲಿಂಗಪ್ಪ ಗೌಡ ಪನೆಯಡ್ಕ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಯಾನಂದ ಶೆಟ್ಟಿ ಬಾಕ್ರಬೈಲ್‌, ಆಡಳಿತ ಮಂಡಳಿಯ ನಿರ್ದೇಶಕರು, ಸಿಬ್ಬಂದಿ ವರ್ಗ ಹಾಜರಿದ್ದರು.
    ಪವಿತ್ರಾ ಎನ್‌ ಪ್ರಾರ್ಥನೆ ಹಾಡಿದರು. ಲೋಕೇಶ್‌ ರೈ ಪೆರ್ಲಂಪಾಡಿ ಕಾರ್ಯಕ್ರಮ ನಿರೂಪಿಸಿದರು. ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿರ್ದೇಶಕ ಗಣೇಶ್‌ ಅತ್ತಾವರ ವಂದಿಸಿದರು.

    ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

    ಇಮೇಲ್: sahakaraspandana@gmail.com

    Kamath Mayor Odiyoor Shree Vividhoddesha Co Operative Society Odiyuru Shree Odiyuru Shree Vividhoddesha Souharda Co Operative Society Raghunath Somayaji Rasik Chamber Somayaji Estate Varadaraya Nagvekar Vedavyasa
    Previous Articleಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ 23ನೇ ಶಾಖೆ ನಾಳೆ ಉದ್ಘಾಟನೆ
    Next Article ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಮಡಂತ್ಯಾರು ಶಾಖೆಯಲ್ಲಿ ಜನವರಿ 5ರಂದು ಉಚಿತ ವೈದ್ಯಕೀಯ, ನೇತ್ರ, ದಂತ ತಪಾಸಣೆ ಶಿಬಿರ

    Related Posts

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.